Advertisement

ಅಧಿಕಾರಿಗಳಿಗೆ ಮರಣ ದಂಡನೆ

01:11 AM Jun 01, 2019 | mahesh |

ಸಿಯೋಲ್‌: ಇತ್ತೀಚೆಗೆ ನಡೆದಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವಿನ ಐತಿಹಾಸಿಕ ಹವಾಯ್‌ ಸಮ್ಮೇಳನದಲ್ಲಿ ಅಮೆರಿಕ ನಿಲುವಿನ ಪರವಾಗಿ ನಿಂತಿದ್ದ ತನ್ನ ಐವರು ಅಧಿಕಾರಿಗಳಿಗೆ ಉತ್ತರ ಕೊರಿಯಾ ಮರಣ ದಂಡನೆ ಶಿಕ್ಷೆ ಜಾರಿಗೊಳಿಸಿದೆ. ಉತ್ತರ ಕೊರಿಯಾ ಸರಕಾರದ ಅಣ್ವಸ್ತ್ರ ಪರೀಕ್ಷೆಯನ್ನು ತಡೆಯಲು ಪ್ರಯತ್ನಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ನಡುವೆ ಹನೋಯ್‌ನಲ್ಲಿ ಐತಿಹಾಸಿಕ ಸಮ್ಮೇಳನ ನಡೆದಿತ್ತು. ಸಭೆಯಲ್ಲಿ ಅಮೆರಿಕ ನಿಲುವನ್ನು ಸಮರ್ಥಿಸಿದ್ದಕ್ಕೆ ಪ್ರಮುಖ ಅಧಿಕಾರಿ ಕಿಮ್‌ ಹೊಕ್‌ ಚೋಲ್‌ ಸಹಿತ ಐವರು ಅಧಿಕಾರಿಗಳ ವಿರುದ್ಧ ರಾಜದ್ರೋಹದ ಆರೋಪ ಹೊರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next