Advertisement

ಇಂಡಿ ತಾಲೂಕಲ್ಲಿ ಮರಗಳ ಮಾರಣಹೋಮ ಅವ್ಯಾಹತ

08:00 PM Sep 01, 2021 | Shreeram Nayak |

ಇಂಡಿ: ರಾಜ್ಯಾದ್ಯಂತ ಅರಣ್ಯ ರಕ್ಷಣೆ ಹಾಗೂ ಅರಣ್ಯ ನಿರ್ಮಾಣಕ್ಕೆ ಗ್ರಾಪಂ, ತಾಪಂ ಹಾಗೂ ಜಿಪಂಗಳಿಂದ ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಆದರೆ ಇದೆಷ್ಟರ ಮಟ್ಟಿಗೆ ಸದುಪಯೋಗವಾಗುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ತಾಲೂಕಿನಲ್ಲಿ ಪ್ರತಿ ದಿನ ಸಾವಿರಾರು ಮರಗಳ ಮಾರಣಹೋಮ ನಡೆಯುತ್ತಿದ್ದು ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮರಗಳನ್ನು ಕಡಿದು ದಿನಕ್ಕೆ ಸುಮಾರು
20-25 ಟ್ರ್ಯಾಕ್ಟರ್‌ ಕಟ್ಟಿಗೆ ಸಾಗಣೆ ಮಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಮೌನವಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ತಾಲೂಕಿನೆಲ್ಲೆಡೆ ಗಿಡ-ಮರಗಳನ್ನು ಸಾವಿರಾರು ಸಂಖ್ಯೆಯಲ್ಲಿ ಕಡಿಯುತ್ತಿದ್ದರೂ ಅದನ್ನು ತಡೆಯಲು ಅಧಿಕಾರಿ ವರ್ಗ ವಿಫಲವಾಗಿದೆ. ಕಟ್ಟಿಗೆ ಅಡ್ಡೆಗಳ ಸಂಖ್ಯೆ ಕೂಡ ಹೆಚ್ಚುತ್ತಲಿದೆ. ಬರದ ತಾಲೂಕು ಎಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಇಂಡಿ ತಾಲೂಕು ಏಕೆ ಬರಗಾಲಕ್ಕೆ ತುತ್ತಾಗುತ್ತಿದೆ ಎಂಬುದನ್ನು ಗಮನಿಸಿದಾಗ ಅದಕ್ಕೆ ಕಾರಣ ಈ ಮರಗಳ ಮಾರಣಹೋಮ. ಗಿಡ ಮರಗಳನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಸಬೇಕೆಂದು ಸರಕಾರ ಮೇಲಿಂದ ಮೇಲೆ ಯೋಜನೆಗಳ ನೀಲ ನಕ್ಷೆಗಳನ್ನೇನೋ ರೂಪಿಸುತ್ತಿದೆ. ಆದರೆ ನೈಸರ್ಗಿಕವಾಗಿ ಬೆಳೆದ ಮರಗಳನ್ನು ನಾಶ ಗೊಳಿಸುವ ಕೃತ್ಯವಂತೂ ಧಾರಾಳವಾಗಿ ಮುಂದು ವರಿದಿದೆ. ಲಕ್ಷಾಂತರ ಎಕರೆ ಭೂಮಿಯಲ್ಲಿ ವಿಸ್ತರಿಸಿದ ಅರಣ್ಯವನ್ನು
ನಾಶಗೊಳಿಸುವುದರ ಮೂಲಕ ಇದರ ಸಂಪೂರ್ಣ ಲಾಭ ಪಡೆಯುತ್ತಿರುವ ನಿಜವಾದ ಮರಗಳ್ಳರು ಯಾರು? ದೇಶದಲ್ಲಿ ಮರಗಳ ಸಂರಕ್ಷಣೆಗೆ ನೂರಾರು ಕಾನೂನುಗಳು ಜಾರಿಯಲ್ಲಿದ್ದರೂ ಅವುಗಳ ಸಮರ್ಪಕ ಅನುಷ್ಠಾನ ಆಗಿಲ್ಲವೇಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿಲ್ಲ.

ಇದನ್ನೂ ಓದಿ:ಬಾಲಿವುಡ್ ಡ್ರಗ್ ಪ್ರಕರಣ : ನಟ ಅರ್ಮಾನ್‍ಗೆ 14 ದಿನ ನ್ಯಾಯಾಂಗ ಬಂಧನ

ಕಾಡಿನ ಪರವಾಗಿ ಧ್ವನಿ ಎತ್ತುತ್ತಿರುವ ವಿವಿಧ ಸಂಘಟನೆಗಳು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮೆಟ್ಟಲೇರಿ ಅರಣ್ಯ ಕಾಯ್ದೆ ಉಲ್ಲಂಘನೆ
ಪ್ರಕರಣಗಳನ್ನು ಪ್ರಶ್ನಿಸುತ್ತಲೇ ಇವೆ. ಇಂತಹ ಹಲವಾರು ಸಾರ್ವಜನಿಕ ಹಿತಾಸಕ್ತಿ ರಿಟ್‌ ಅರ್ಜಿಗಳನ್ನು ನ್ಯಾಯಾಲಯಗಳು ಇದುವರೆಗೆ ಅತಿ ಗಂಭೀರವಾಗಿ ಪರಿಗಣಿಸಿ ಕಠಿಣ ಆದೇಶಗಳನ್ನು ಜಾರಿ ಮಾಡಿವೆ. ವಾಸ್ತವ ದುರಂತ ಎಂದರೆ ಹೈಕೋರ್ಟ್‌- ಸುಪ್ರೀಂಕೋರ್ಟ್‌ ಕಾಲ ಕಾಲಕ್ಕೆ ನೀಡುತ್ತಿರುವ ಆದೇಶಗಳು ಕಟ್ಟುನಿಟ್ಟಾಗಿ ಪಾಲನೆಯಾಗದೆ ಬರಿ ಕಾಗದದ ಮೇಲೆ ಉಳಿಯುವಂತಾಗುತ್ತಿರುವುದು ವಿಪರ್ಯಾಸ.

ಗ್ರಾಮೀಣ ಭಾಗದ ಕೆರೆ-ಕುಂಟೆಗಳೂ ಒತ್ತುವರಿಯಾಗಿವೆ. ಕೆರೆ-ಕುಂಟೆಗಳನ್ನು ಅರಣ್ಯ ಇಲಾಖೆ ಸಂರಕ್ಷಿಸಬೇಕಿದೆ. ಇದು ಕೇವಲ ಜಿಲ್ಲೆ, ತಾಲೂಕು ಅಥವಾ ಗ್ರಾಪಂ ಅಧಿಕಾರಿಗಳ ಸುಪರ್ದಿನಲ್ಲಿ ಸಂರಕ್ಷಣೆಯಾಗಬೇಕೆಂಬ ನಿಯಮವೇನೂ ಇಲ್ಲ. ಕೆರೆಕಟ್ಟಿ ಉಳಿಸಿಕೊಳ್ಳಬೇಕೆಂಬ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಮೂಡಿದಾಗ ಮಾತ್ರ ಪರಿಸರ ರಕ್ಷಣೆಯಾಗುತ್ತದೆ. ಪರಿಸರ ಪ್ರಜ್ಞೆ ಇಂದು ಕೇವಲ ನಗರ ಮತ್ತು ಪಟ್ಟಣಗಳಲ್ಲಿ ಪ್ರಚಾರಕ್ಕಾಗಿ ಸೀಮಿತವಾಗದೇ ಗ್ರಾಮೀಣ ಭಾರತದಲ್ಲಿ ಅರಣ್ಯ ಮತ್ತು ಕೆರೆ-ಕುಂಟೆ ಉಳಿಯಬೇಕಾದರೆ ಜನಜಾಗೃತಿ ಜತೆಗೆ ಕಾನೂನುಗಳ
ಕಟ್ಟುನಿಟ್ಟಿನ ಅನುಷ್ಠಾನವೂ ಅತಿ ಮುಖ್ಯವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ಅರಣ್ಯ ಉಳಿವಿಗಾಗಿ ಗ್ಯಾಸ್‌ಗಳನ್ನು ಬಡವರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಆದರೂ ಮರಗಳ ಮರಣಹೋಮ ಮಾತ್ರ ನಿಂತಿಲ್ಲ. ಅಧಿ ಕಾರಿ ವರ್ಗ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಅರಣ್ಯ ಸಂರಕ್ಷಣೆ ಸಾಧ್ಯ.
-ಅನಿಲ ಜಮಾದಾರ ಬಿಜೆಪಿ ಎಸ್‌ಟಿ
ಮೋರ್ಚಾ ಜಿಲ್ಲಾಧ್ಯಕ್ಷ

-ಯಲಗೊಂಡ ಬೇವನೂರ

 

Advertisement

Udayavani is now on Telegram. Click here to join our channel and stay updated with the latest news.

Next