Advertisement

ಗಂಗಾವತಿ : ಪಂಪಾಸರೋವರದಲ್ಲಿ ಮುಳುಗಿ ಮಧ್ಯ ಪ್ರದೇಶದ ಬಾಲಕ ಸಾವು

10:11 AM Jan 19, 2020 | sudhir |

ಗಂಗಾವತಿ: ತಾಲ್ಲೂಕಿನ ಇತಿಹಾಸ ಪ್ರಸಿದ್ದ ಪಂಪಾ ಸರೋವರದಲ್ಲಿ ಮಧ್ಯಪ್ರದೇಶದ ಬಾಲಕನೊರ್ವ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.

Advertisement

ಮಧ್ಯಪ್ರದೇಶ ರಾಜ್ಯದ ಶೀಫ್ರಾ ಜಿಲ್ಲೆಯ ಪಿಚೋರ್ ಗ್ರಾಮದ ಬಾಲಕ ಅಂಕಿತ್ ಧಕಡ್ ಎಂಬ 10ವರ್ಷದ ಬಾಲಕ ಪಂಪಾಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಅಜ್ಜ ಜಾನಕಿ ಲಾಲ್ ಜತೆ ಪ್ರವಾಸಕ್ಕೆ ಆಗಮಿಸಿ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ವೀಕ್ಷಿಸಿ ಪಂಪಾಸರೋವರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಸರೋವರದಲ್ಲಿ ಇಳಿಯುವ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ.

ಸ್ಥಳಕ್ಕೆ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ಪಿಎಸ್ ಐ ಜೆ.ದೊಡ್ಡಪ್ಪ ಭೇಟಿ ನೀಡಿ ಈಜುಗಾರರನ್ನು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕರೆಸಿ ಮುಳುಗಿದ ಬಾಲಕ ದೇಹವನ್ನು ಹೊರ ತೆಗೆಸಿದರು.

ಅಸುರಕ್ಷಿತ:ಪಂಪಾ ಸರೋವರ
ಅಸುರಕ್ಷಿತವಾಗಿದ್ದು ಪ್ರತಿ ವರ್ಷ ಸಾವು ನೋವು ಸಂಭವಿಸುತ್ತಿವೆ. ಸರೋವರಕ್ಕೆ ಸುತ್ತಲು ತಂತಿ ಬೇಲಿ ಅಳವಡಿಸುವಂತೆ ಒತ್ತಾಯ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next