Advertisement

ಎಪಿಎಂಸಿ ರಸ್ತೆಯಲ್ಲಿ “ಮರಣಗುಂಡಿ’

03:40 PM Jul 18, 2019 | Team Udayavani |

ನಗರ: ನಗರಸಭಾ ವ್ಯಾಪ್ತಿಯಲ್ಲಿ ಕಳೆದ ವರ್ಷ ಕೃತಕ ನೆರೆ ಸಂದರ್ಭದಲ್ಲಿ ತೆಗೆದಿಟ್ಟ ಹೊಂಡಗಳು ಹಾಗೆಯೇ ಇದ್ದು, ಅಪಾಯಕಾರಿ ಸ್ಥಿತಿಯಲ್ಲಿವೆ. ಎಪಿಎಂಸಿ ರಸ್ತೆಯ ಪುತ್ತೂರು ಆದರ್ಶ ಆಸ್ಪತ್ರೆ ಪಕ್ಕದಲ್ಲಿ ತೆರೆದಿಟ್ಟ ಹೊಂಡ ಇದೀಗ “ಮರಣಗುಂಡಿ’ಯಾಗಿ ಪರಿಣಮಿಸಿದೆ.

Advertisement

ಕಳೆದ ವರ್ಷ ಉಂಟಾದ ಕೃತಕ ನೆರೆ ಸಂದರ್ಭದಲ್ಲಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ರಸ್ತೆ ಬದಿಯಲ್ಲೇ ಈ ಹೊಂಡ ತೆಗೆಯಲಾಗಿತ್ತು. ಇದೀಗ ಮತ್ತೂಂದು ಮಳೆಗಾಲ ಬಂದಿದೆ. ಈ ಹೊಂಡದಲ್ಲಿ ಮಳೆನೀರು ನಿಲ್ಲುವ ಕಾರಣ ಹೊಂಡವು ವಾಹನ ಚಾಲಕರ ಗಮನಕ್ಕೆ ಬರುವುದಿಲ್ಲ. ಹಾಗಾಗಿ ಕಳೆದ ಕೆಲವು ವಾರಗಳಿಂದ ಇಲ್ಲಿ ಹಲವಾರು ವಾಹನಗಳು ಹೊಂಡಕ್ಕೆ ಬಿದ್ದು ಅಪಾಯ ಸಂಭವಿಸಿದೆ. ಇಷ್ಟಾದರೂ ಈ ಗುಂಡಿಯನ್ನು ಮುಚ್ಚುವ ಕೆಲಸಕ್ಕೆ ನಗರಸಭೆ ಮುಂದಾಗಿಲ್ಲ.

ಈ ಹೊಂಡ ಮುಚ್ಚುವಂತೆ ಇಲ್ಲಿನ ರಿಕ್ಷಾ ಚಾಲಕರು ನಗರಸಭೆಗೆ ಮನವಿ ಮಾಡಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.

ಕ್ರಮ ಅಗತ್ಯ
ಕೆಲವು ದಿನಗಳಿಂದ ಈ ಹೊಂಡಕ್ಕೆ ಹಲವು ವಾಹನಗಳು ಬಿದ್ದಿವೆ. ಇಲ್ಲಿ ರಸ್ತೆಯ ಪಕ್ಕದಲ್ಲಿಯೇ ಹೊಂಡ ತೆಗೆದ ಕಾರಣ ಹೊಂಡ ಚಾಲಕರ ಅರಿವಿಗೆ ಬರುವುದಿಲ್ಲ. ದೊಡ್ಡ ಅಪಾಯ ಉಂಟಾಗುವ ಮೊದಲು ಈ ಹೊಂಡವನ್ನು ನಗರಸಭೆಯವರು ಮುಚ್ಚಬೇಕು ಎನ್ನುತ್ತಾರೆ ಇಲ್ಲಿನ ಆಟೋ ರಿಕ್ಷಾ ಚಾಲಕ ಬಾಲಕೃಷ್ಣ.

ನಗರದ ಎಪಿಎಂಸಿ ರಸ್ತೆಯ ಪುತ್ತೂರು ಆದರ್ಶ ಆಸ್ಪತ್ರೆಯ ಪಕ್ಕದಲ್ಲಿನ ಹೊಂಡ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next