Advertisement

Football: ಫುಟ್‌ಬಾಲ್‌ ಆಡುವಾಗಲೇ ಸಿಡಿಲು ಬಡಿದು ಸಾವು!

11:17 PM Feb 13, 2024 | Team Udayavani |

ಬಾಂಡುಂಗ್‌ (ಇಂಡೋನೇಷ್ಯಾ): ಫ‌ುಟ್‌ಬಾಲ್‌ ಆಡುತ್ತಿರುವಾಗಲೇ ಸಿಡಿಲು ಬಡಿದು ಆಟಗಾರನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಇಂಡೋನೇಷ್ಯಾದಲ್ಲಿ ಸಂಭವಿಸಿದೆ.

Advertisement

ಪಶ್ಚಿಮ ಜಾವಾದ ಬಾಂಡುಂಗ್‌ನ “ಸಿಲಿವಾಂಗಿ ಸ್ಟೇಡಿಯಂ” ನಲ್ಲಿ “2 ಎಫ್ಎಲ್‌ಒ ಎಫ್ಸಿ” ಮತ್ತು “ಎಫ್ಬಿಐ ಸುಬಾಂಗ್‌” ತಂಡಗಳ ನಡುವೆ ಸೌಹಾರ್ದ ಫ‌ುಟ್‌ಬಾಲ್‌ ಪಂದ್ಯ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿತು. ಸುಬಾಂಗ್‌ ತಂಡದ ಆಟಗಾರ ಸಪ್ತೇನ್‌ ರಹರ್ಜಾ ಅವರಿಗೆ ಸಿಡಿಲು ಬಡಿಯಿತು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಸಿಡಿಲಿನಿಂದ ಅವರ ದೇಹ ತೀವ್ರವಾಗಿ ಸುಟ್ಟುಹೋದ ಪರಿಣಾಮ ಉಳಿಸಿಕೊಳ್ಳಲಾಗಲಿಲ್ಲ ಎಂದು ವೈದ್ಯರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next