Advertisement

ದೇಶದಲ್ಲಿ ಪ್ರತಿ 4 ನಿಮಿಷಕ್ಕೊಬ್ಬರು ರಸ್ತೆ ಅಪಘಾತಕ್ಕೆ ಬಲಿ

04:59 PM Mar 30, 2019 | pallavi |

ದಾವಣಗೆರೆ: ಭಾರತದಲ್ಲಿ ಪ್ರತಿ 4 ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ ಎಂದು ಡಿವೈಎಸ್ಪಿ ಡಾ| ಬಿ. ದೇವರಾಜ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ಯುಬಿಡಿಟಿ ಇಂಜಿನಿಯರಿಂಗ್‌ ಕಾಲೇಜಿನ ಎಂಬಿಎ ಪ್ರೋಗ್ರಾಂ ಆಶ್ರಯದಲ್ಲಿ ಗುಡ್‌ ಸಮರಿಟಾನ್‌ ಲಾ ಮತ್ತು ಪ್ರಿವೆನ್ಷನ್‌ ಆಫ್‌ ಸೆಕ್ಸುವಲ್‌ ಹರ್ಯಾಸ್‌ಮೆಂಟ್‌ ಇನ್‌ ವರ್ಕಿಂಗ್‌ ಪ್ಲೇಸ್‌… ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಅಪಘಾತ ಸಂಭವಿಸಿದ ಒಂದು ಗಂಟೆಯಲ್ಲಿ ಸೂಕ್ತ
ಚಿಕಿತ್ಸಾ ಸೌಲಭ್ಯ ದೊರಕಿಸಿದ್ದಲ್ಲಿ ಶೇ. 50 ರಷ್ಟು ಪ್ರಮಾಣದ ಸಾವು ತಡೆಯಬಹುದು ಎಂದರು.

ಭಾರತದಲ್ಲಿ ಮಾಹಿತಿ, ಜಾಗೃತಿ ಕೊರತೆ, ರಸ್ತೆ ವಿನ್ಯಾಸ, ಕಾಯ್ದೆ ಅನುಷ್ಠಾನದಲ್ಲಿನ ಕೊರತೆ ಇತರೆ ಕಾರಣಗಳಿಂದ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿವೆ. ದಿನಕ್ಕೆ 360 ಜನರಂತೆ ಒಂದು ವರ್ಷಕ್ಕೆ 4.07 ಲಕ್ಷದಷ್ಟು ಜನರು ಸಾವಿಗೆ ತುತ್ತಾಗುತ್ತಿದ್ದಾರೆ. ಅವರಲ್ಲಿ 406 ಮಕ್ಕಳು ಇರುತ್ತಾರೆ ಎಂಬುದು ಗಂಭೀರವಾದ ವಿಚಾರ. ಕಳೆದ 10 ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಮರಣ
ಹೊಂದಿದ್ದಾರೆ. 50 ಲಕ್ಷಕ್ಕೂ ಹೆಚ್ಚಿನ ಜನರು ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಸಾಕ್ಷಿಗಳಾಗಬೇಕಾಗುತ್ತದೆ, ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ ಎಂಬಿತ್ಯಾದಿ ಕಾರಣಕ್ಕೆ ಅಪಘಾತ ಸಂತ್ರಸ್ತರ ನೆರವಿಗೆ ಸಾರ್ವಜನಿಕರು ಬರದೇ ಇರುವುದನ್ನು ಮನಗಂಡ ಸರ್ವೋಚ್ಚ ನ್ಯಾಯಾಲಯ 2016ರಲ್ಲಿ ಗುಡ್‌ ಸಮರಿಟಾನ್‌ ಲಾ… ಜಾರಿಗೊಳಿಸಿದೆ. ಆದರೆ, ಈಗಲೂ ಅನೇಕರಿಗೆ ಗುಡ್‌ ಸಮರಿಟಾನ್‌ ಲಾ ಬಗ್ಗೆ ಹೆಚ್ಚಿನ ಮಾಹಿತಿಯೇ ಇಲ್ಲ ಎಂದು ತಿಳಿಸಿದರು.

ಗುಡ್‌ ಸಮರಿಟಾನ್‌ ಲಾ ಪ್ರಕಾರ ಸಂಬಂಧಿಕರಲ್ಲದೆ ಬೇರೆ ಯಾರೇ ಆಗಲಿ ಅಪಘಾತಕ್ಕೆ ತುತ್ತಾದವರನ್ನು ಸರ್ಕಾರಿ ಇಲ್ಲವೇ ಖಾಸಗಿ ಆಸ್ಪತ್ರೆಗೆ ಕರೆ ತಂದಾಗ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲೇಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಹಣ ಕಟ್ಟುವಂತೆ, ಪೊಲೀಸರು ಬರುವ ತನಕ ಇರುವಂತೆ ಒತ್ತಾಯ ಮಾಡುವಂತೆಯೂ ಇಲ್ಲ. ಒಂದೊಮ್ಮೆ ಅಪಘಾತದ ಬಗ್ಗೆ ಸಂಶಯ ಬಂದಲ್ಲಿ ಮಾತ್ರವೇ ಅವರನ್ನು ಪೊಲೀಸರು ಬರುವವರೆಗೆ ಆಸ್ಪತ್ರೆಯಲ್ಲಿ ಇರುವಂತೆ ಹೇಳಬೇಕು. ಗಾಯಾಳುಗಳಿಗೆ ದಾಖಲು ಮಾಡಿಕೊಳ್ಳಲು, ಚಿಕಿತ್ಸೆ ನೀಡಲು ನಿರಾಕರಿಸಿದರೆ ಗುಡ್‌ ಸಮರಿಟಾನ್‌
ಲಾ ಆ್ಯಕ್ಟ್-7ರ ಪ್ರಕಾರ ಕರ್ತವ್ಯ ನಿರ್ಲಕ್ಷ ಆಗುತ್ತದೆ. ಆ್ಯಕ್ಟ್-8 ರ ಪ್ರಕಾರ ಸಂಬಂಧಿತರನ್ನು ಶಿಕ್ಷೆಗೆ ಒಳಪಡಿಸಬಹುದು ಎಂದು ತಿಳಿಸಿದರು.

Advertisement

ಕೆಲಸದ ಸ್ಥಳಗಳಲ್ಲಿ ನಡೆಯುವಂತಹ ಲೈಂಗಿಕ ಕಿರುಕುಳ, ದೌರ್ಜನ್ಯದ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು. ಒಂದೊಮ್ಮೆ ಕಿರುಕುಳ, ದೌರ್ಜನ್ಯ ನಡೆದಲ್ಲಿ ಪೊಲೀಸ್‌ ಇಲಾಖೆ ಮೂಲಕ ನ್ಯಾಯ ಪಡೆಯಬಹುದು ಎಂದು ತಿಳಿಸಿದರು.

ಕಾಲೇಜು ಪ್ರಾಚಾರ್ಯ ಡಾ| ಶಿವಪ್ರಸಾದ್‌ ಬಿ. ದಂಡಗಿ ಅಧ್ಯಕ್ಷತೆ ವಹಿಸಿದ್ದರು. ಎಂಬಿಎ ವಿಭಾಗದ ಸಂಯೋಜನಾಧಿಕಾರಿ ಡಾ| ಟಿ. ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next