Advertisement
ನಂಗೆ ಗೊತ್ತು. ಈ ಪತ್ರ ಕಂಡದ್ದೇ ನೀನು ಗಾಬರಿಯಾಗ್ತಿàಯ. ಓದುವುದಕ್ಕೆ ಮೊದಲೇ ಬೆಚ್ಚಿ ಬೀಳ್ತೀಯ. ಈ ಪತ್ರ ಯಾವ ಸಂಕಟಕ್ಕೆ ಮುನ್ನುಡಿ ಎಂದು ಯೋಚಿಸಿ ಹಣ್ಣಾಗಿರಿ¤àಯ. ರಾತ್ರಿ ಗುಡ್‌ನೈಟ್ ಹೇಳಿ ಮಲಗಿಸಿದ ಅಪ್ಪ, ಮಧ್ಯರಾತ್ರಿ ಎದ್ದುಬಂದು ಹಣೆಗೆ ಮುತ್ತಿಟ್ಟ ಅಪ್ಪ, ಬೆಳಗ್ಗೆ ಹಾರ್ಲಿಕ್ಸ್‌ನ ಜತೆಗೇ ಬಂದು ಗುಡ್‌ಮಾರ್ನಿಂಗ್ ಹೇಳಿದ ಅಪ್ಪ, ಬಲವಂತ ಮಾಡಿ ತಿಂಡಿ ತಿನ್ನಿಸಿದ ಅಪ್ಪ, ಕಾಲೇಜಿಂದ ಬೇಗ ಬಂದಿºಡೂ…ಎಂದು ಎಚ್ಚರಿಸಿದ ಅಪ್ಪ, ನಿಧಾನವಾಗಿ ಸ್ಕೂಟಿ ಓಡಿಸು ಎಂದು ಬುದ್ಧಿ ಹೇಳಿದ ಅಪ್ಪ, ಗಂಟೆಗಂಟೆಗೂ ಫೋನ್ ಮಾಡಿ ಕಷ್ಟ ಸುಖ ವಿಚಾರಿಸುವ ಅಪ್ಪ, ಹುಡುಗ್ರು ಕಾಟ ಕೊಡ್ತಾರೋ ಎಂದು ಕೇಳಿ ಕಣ್ಣು ಹೊಡೆದ ಅಪ್ಪ, ಈಗ ಇದ್ದಕ್ಕಿದ್ದಂತೆ ಪತ್ರ ಬರೆದದ್ದೇಕೆ ಎಂಬುದು ನಿನ್ನ ಪ್ರಶ್ನೆಯಲ್ಲವಾ ಮಗಳೇ?
Related Articles
Advertisement
ಆದರೆ… ಯಾಕೋ ಇತ್ತೀಚೆಗೆ ನನ್ನ ಮಾತುಗಳ ಮೇಲೆ ನನಗೇ ನಂಬಿಕೆ ಬರ್ತಾ ಇಲ್ಲ. ನನ್ನ ದೇವರು ನನಗೆ ಮೋಸ ಮಾಡೋಕೆ ಪ್ರಯತ್ನಿಸ್ತಾ ಇದಾನೆ ಅನ್ನಿಸ್ತಿದೆ. ನನ್ನ ಪುಟ್ಟ ಪ್ರಪಂಚಕ್ಕೆ ಇನ್ಯಾರೋ ಎಂಟ್ರಿಯಾದ ಹಾಗೆ ಕಾಣಿಸ್ತಿದೆ. ಅದಕ್ಕೇ ಇರಬೇಕು; ನನಗೆ ಯಾಕೋ ಸಂಕಟವಾಗ್ತಿದೆ. ಯಾಕೋ ಕೋಪ ಬರ್ತಾ ಇದೆ. ಇದ್ದಕ್ಕಿದ್ದ ಹಾಗೆ ನನ್ನ ಮುದ್ದಾದ ಗೊಂಬೆಯನ್ನು ಬೇರೆ ಯಾರೋ ಕಿತ್ಕೊàತಾ ಇದಾರೆ ಅನ್ನಿಸ್ತಿದೆ. ಈ ಜಗತ್ತಿನಲ್ಲಿ ನಾನು ಒಂಟಿ, ಒಂಟಿ, ಒಬ್ಬಂಟಿ ಅನಿಸೋಕೆ ಶುರುವಾಗಿದೆ. ನಿಜ ಹೇಳಲಾ ಮಗಳೇ-
ಹೌದು, ನೀನೀಗ ಮೊದಲಿನಂತಿಲ್ಲ. ನನ್ನಿಂದ ಅದೇನೋ ಮುಚ್ಚಿಡ್ತಾ ಇದೀಯ. ಗುಟ್ಟು ಮಾಡೋಕೆ ನೋಡ್ತಾ ಇದೀಯ. ಮುಂಜಾನೆಯೇ ದೇವರು ಮುಂದೆ ನಿಂತು- “ಯಾಕುಂದೇಂದು ತುಷಾರ ಹಾರ ಧವಳಾ…’ ಎಂದು ಶ್ಲೋಕ ಹೇಳ್ತಿದ್ದೆ ನಿಜ. ಆದ್ರೆ, ನಿನ್ನ ಕಣ್ಮುಂದೆ ಬೇರೆ ಯಾರದೋ ಚಿತ್ರವಿದ್ದ ಹಾಗಿತ್ತು. ನನಗೆ ಅರ್ಥವಾಗದ ಹಾಗೆ, ತುಂಬ ಸಂದರ್ಭದಲ್ಲಿ ನನ್ನ ಸಮಾಧಾನಕ್ಕಾಗಿ ಮಾತ್ರ ನೀನು ಶ್ಲೋಕ ಹೇಳಿದ ಹಾಗಿತ್ತು. ಆನಂತರದಲ್ಲಿ, ಮಗಳೇ- ಅಗತ್ಯ ಬಿದ್ದಾಗಲೆಲ್ಲ ನೀನು ಕೈಗೆ ಸಿಗದೆ ಅಡ್ಡಾಡಿದೆ. ಅಕಸ್ಮಾತ್ ಸಿಕ್ಕಾಗ ಕೂಡ ಏನೋ ನೆಪ ಹೇಳಿ ಮಾತು ಮರೆಸಿದೆ. ಮಾತಿಗೆ ಕೂತಾಗ ಕೂಡ ಸುಮ್ಮಸುಮ್ಮನೇ ಮೊಬೈಲು ಕಿವಿಗಿಟ್ಟುಕೊಂಡು ಎದ್ದು ಹೋಗುತ್ತಿದ್ದೆ!
ಹೌದು ಮಗಳೇ, ಸುದ್ದಿ ನನಗೇ ತಲುಪಿದೆ. ನೀನು ಯಾರನ್ನೋ ಪ್ರೀತಿಸ್ತಿದೀಯಂತೆ! ಅವನು ಯಾರು? ಹೇಗಿದ್ದಾನೆ? ಎಲ್ಲಿಯವನು? ಏನು ಮಾಡ್ತಾನೆ? ಯಾವ ಜಾತಿಯವನು? ಉಹುಂ, ಇಂಥ ಯಾವ ಪ್ರಶ್ನೆಯನ್ನೂ ನಾನು ಕೇಳಲ್ಲ. ಯಾಕೆಂದರೆ ನಿನ್ನ ಸೆಲೆಕ್ಷನ್ ಯಾವತ್ತೂ ಗ್ರ್ಯಾಂಡ್ ಆಗಿಯೇ ಇರ್ತದೆ- ನಿನ್ನ ಹಾಗೆ! ನಿಜ ಹೇಳಲಾ? ನನ್ನ ಪ್ರಕಾರ ಪ್ರೀತಿಸುವುದು ತಪ್ಪಲ್ಲ, ಪ್ರೀತಿಸದೇ ಬದುಕ್ತೀವಲ್ಲ? ಅದು ತಪ್ಪು! ನೀನು ಪ್ರೀತಿಸ್ತಾ ಇದೀಯ ಅನ್ನೋ ವಿಷಯ ಕೇಳಿದಾಗಿನಿಂದ ಯಾಕೋ ನಾನು ಒಂಟಿ ಅನ್ನಿಸ್ತಿದೆ. ಇನ್ನು ಮುಂದೆ, ಪ್ರೀತಿಸಿದ ಹುಡುಗನೇ ನಿನ್ನ ಪ್ರಪಂಚ ಆಗಿಬಿಡ್ತಾನೇನೋ; ಅವನ ಪ್ರೀತಿಯಲ್ಲಿ, ಅವನ ಮೋಹದಲ್ಲಿ, ಅವನ ಧ್ಯಾನದಲ್ಲಿ, ಅವನ ಆರೈಕೆಯಲ್ಲಿ ನನ್ನನ್ನು ನೀನು ಮರೆತುಬಿಡ್ತೀಯೇನೋ? ಎಂದೆಲ್ಲ ಅನಿಸಿಬಿಡುತ್ತೆ ನನಗೆ. ಅಂಥ ಸಂದರ್ಭದಲ್ಲೆಲ್ಲ- ಹೂಂ ಕಣೇ, ಯಾಕೋ ಕಣ್ತುಂಬಿ ಬರುತ್ತೆ. ನಿನ್ನ ಹೆಸರು ಕೂಗಲು ನೋಡಿದ್ರೆ ಧ್ವನಿ ಗದ್ಗದ. ಕಣ್ಣುಜ್ಜಿಕೊಳ್ಳೋಣ ಅಂದ್ರೆ ಅಷ್ಟು ಹೊತ್ತಿಗಾಗಲೇ ಕಣ್ಣೀರು ಕೆನ್ನೆಗಿಳಿದಿರುತ್ತದೆ. ಮಗಳು ಹೊರಟುಹೋದರೆ ಈ ಬದುಕಿಗೆ ಅರ್ಥವೇ ಇರೋದಿಲ್ಲ. ಆಗ ನನ್ನ ನಗುವಿಗೆ ಸಂಭ್ರಮಿಸುವವರಿಲ್ಲ. ಅಳುವಿಗೆ ಸಂಕಟಪಡೋರಿಲ್ಲ. ನಾನು ಬದುಕಲಿ ಅಂತ ಪ್ರಾರ್ಥಿಸುವವರೂ ಇರಲ್ಲ ಅನ್ನಿಸಿಬಿಡುತ್ತೆ. ಹೀಗೆ ಅನ್ನಿಸಿದಾಗಲೆಲ್ಲ-ಜಾತ್ರೆಯ ಮಧ್ಯೆ ಮಾತು ಬಾರದ ಮಗುವನ್ನು ಬಿಟ್ಟುಹೋದ್ರೆ ಆಗುತ್ತೆ ನೋಡು? ಅಂಥ ಸಂಕಟ ಆಗುತ್ತೆ.
ಅರ್ಥವಾಯ್ತು ಮಗಳೇ, ನಾನಿಲ್ಲದೆ, ನನ್ನ ಹಾರೈಕೆಯಿಲ್ಲದೆ, ನನ್ನ ಪ್ರೀತಿಯಿಲ್ಲದೆ, ನನ್ನ ಸಿಡಿಮಿಡಿ ಇಲ್ಲದೆ, ನನ್ನ ರಕ್ಷಣೆಯೂ ಇಲ್ಲದೆ ನೀನು ಬದುಕಬಲ್ಲೆ ನಿಜ. ಆದರೆ, ನೀನಿಲ್ಲದೆ ನಾನು ಬದುಕಲಾರೆ. ನಿನ್ನ ಹುಸಿಮುನಿಸು, ಕರಡಿ ಪ್ರೀತಿ, ಬೆಚ್ಚನೆಯ ಗುಡ್‌ಮಾರ್ನಿಂಗ್ ಕೇಳದೆ ನಾನು ಬದುಕಲಾರೆ. ನಿನಗೆ ಹಲೋ ಹೇಳದೆ ನಾನು ಉಸಿರಾಡಲಾರೆ ಮಗಳೇ…ನಿನ್ನ ಕನವರಿಕೆ ಇಲ್ಲದೆ ನಿದ್ರಿಸಲಾರೆ. ಹೌದು ಕಣೇ, ನಿನ್ನ ಮುನಿಸು ನೋಡದೆ ಮಾತೂ ಆಡಲಾರೆ.
ಒಂದು ಮಾತು ಕೇಳು: ಇಷ್ಟು ಚಿಕ್ಕ ವಯಸ್ಸಿಗೇ ಪ್ರೀತಿಯ ಹೊಳೆಗೆ ಬೀಳುವ ಅರ್ಜೆಂಟು ನಿನಗಿಲ್ಲ. ಪ್ರೀತಿಯ ನೆಪದಲ್ಲಿ ಎಲ್ಲರನ್ನೂ ಧಿಕ್ಕರಿಸಿ ಹೋಗುವ ವಯಸ್ಸೂ ನಿನ್ನದಲ್ಲ. ಗೊತ್ತಲ್ಲ, ನಿನಗಿನ್ನೂ ಓದಲಿಕ್ಕಿದೆ. ಸಾಧಿಸಲು ಬಹಳಷ್ಟಿದೆ. ಮೊದಲು ಬದುಕಲ್ಲಿ ನೆಲೆ ಕಂಡುಕೋ. ಅವೆಲ್ಲಕ್ಕಿಂತ ಹೆಚ್ಚಾಗಿ, ಈಗ ನಿನ್ನ ಒಲುಮೆಯಿಂದಷ್ಟೇ ಉಸಿರಾಡುತ್ತಿರುವ ಈ ಬಡಪಾಯಿ ಅಪ್ಪನ ಮೇಲೆ ಒಂದೆರಡು ವರ್ಷಗಳ ಮಟ್ಟಿಗಾದರೂ ಕರುಣೆ ತೋರಿರು.
ಕಂದಾ, ಹೇಳಲಿಕ್ಕೆ ಇನ್ನೂ ತುಂಬಾ ಇದೆ. ಆದರೆ, ಅದನ್ನೆಲ್ಲ ಅಕ್ಷರಗಳಲ್ಲಿ ಹಿಡಿದಿಡಲು ಆಗುತ್ತಿಲ್ಲ. ಸಂಜೆ ಬಂದಾಗ ಒಂದೇ ಒಂದು ಬಾರಿ ನನ್ನ ಕಣ್ಣು ನೋಡು. ಎಲ್ಲವೂ ನಿನಗೇ ಅರ್ಥವಾಗುತ್ತೆ….ನಿನ್ನ
ಪಪ್ಪ -ಅಪರಿಚಿತ