Advertisement
ಶರವೇಗದಲ್ಲಿ ಸ್ಪರ್ಧೆಗಿಳಿದಿರುವ ಖಾಸಗಿ ಶಾಲೆಗಳ ನಡುವೆ ಸಿಲುಕಿದ ಎಷ್ಟೋ ಸರ್ಕಾರಿ ಶಾಲೆಗಳ ಸ್ಥಿತಿ ಅಧೋಗತಿಯಲ್ಲಿದೆ. ಇದನ್ನೆಲ್ಲಾ , ಹೇಗೆ ಉದ್ದಾರ ಮಾಡುವುದು? ಬೆಂಗಳೂರಿನ ಮೈತ್ರೇಯಿ ಹೀಗೆ ಯೋಚನೆ ಮಾಡಿದಾಗ ಹೊಳೆದದ್ದು ಸರ್ಕಾರಿ ಶಾಲೆಗೆ ಹೋಗಿ ಪಾಠ ಮಾಡುವ ಯೋಜನೆ. ಅವರು ತಮ್ಮ ಸುತ್ತಮುತ್ತ ಇದ್ದ ಸರ್ಕಾರಿ ಶಾಲೆಯ ಶಿಕ್ಷಣದ ಗುಣಮಟ್ಟ, ಮಕ್ಕಳ ಆರ್ಥಿಕ ಸ್ಥಿತಿ ಎಲ್ಲವನ್ನು ಗಮನಿಸಿದರು. ಬಹುತೇಕ ಬಡ ಮಕ್ಕಳೇ ಓದುವ ಶಾಲೆಗಳಿಗೆ ಏನಾದರೂ ಮಾಡಬೇಕಲ್ಲ ಅಂತ ಸಮಾನ ಮನಸ್ಕರ ತಂಡವನ್ನು ಕಟ್ಟಿ , ಡ್ರೀಮ್ ಸ್ಕೂಲ್ ಫೌಂಡೇಶನ್ ಅಂತ ಶುರು ಮಾಡಿಯೇ ಬಿಟ್ಟರು.ಮೊದಲು ಬೆಂಗಳೂರಿನ ವಿವಿಧ ಕಡೆಗಳಲ್ಲಿರುವ ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಹಾಗೂ ಸ್ಲಂಗಳಲ್ಲಿರುವ ಶಾಲೆಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸುತ್ತಾರೆ. ಅಗತ್ಯವಿರುವ ಸಾಮಗ್ರಿಗಳ ಯೋಜನಾಪಟ್ಟಿ ತಯಾರಿಸಿ, ಅದಕ್ಕೆ ಬೇಕಾದ ಖರ್ಚನ್ನು ಸರಿದೂಗಿಸಲು ಸದಸ್ಯರೇ ಮೊದಲು ಕೈಯಿಂದ ಹಣ ವ್ಯಯಿಸುತ್ತಾರೆ. ಆನಂತರ ಟ್ರಸ್ಟ್‌ನ ವೆಬ್‌ಸೈಟ್, ಫೇಸ್ ಬುಕ್, ವಾಟ್ಸಾಪ್ ಮೂಲಕ, ನಾವು ಹೀಗೆ ಹೀಗೆ ಮಾಡ್ತಾ ಇದ್ದೀವಿ. ಆಸಕ್ತರು ಸ್ಪಂದಿಸಿ ಎಂದು ಪ್ರಕಟಿಸುತ್ತಾರೆ. “ಜನರಿಂದ ಬಂದ ಹಣದ ಜೊತೆಗೆ, ಟ್ರಸ್ಟಿನ ಹಣ ವಿನಿಯೋಗಿಸಿಕೊಂಡು ಸಮಸ್ಯೆ ಇರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳುತ್ತಾರೆ. ಆಯಾ ಶಾಲೆಗಳ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸುತ್ತಾ ಹೋಗುತ್ತೇವೆ’ ಎನ್ನುತ್ತಾರೆ ಟ್ರಸ್ಟ್‌ನ ನಿರ್ದೇಶಕಿ ಮೈತ್ರೇಯಿ.
Related Articles
Advertisement
ಅಗ್ರಿಮೆಂಟ್ಶಾಲೆಗಳನ್ನು ದತ್ತು ಪಡೆದುಕೊಳ್ಳುವ ಮುನ್ನ ಆ ಪ್ರದೇಶದ ಬಿಇಓ ಹತ್ತಿರ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ನಂತರ ಆಯಾ ಶಾಲಾ ಮುಖ್ಯಶಿಕ್ಷಕರ ಒಪ್ಪಿಗೆ ಪಡೆದು ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಶಾಲೆಗಳಲ್ಲಿ ಪಾಠ ಮಾಡುವುದಕ್ಕಾಗಿಯೇ ಟ್ರಸ್ಟಿನಲ್ಲಿ ಮೂವರು ಬೋಧಕರಿದ್ದಾರೆ. ಒಬ್ಬೊಬ್ಬರನ್ನು ಒಂದೊಂದು ಶಾಲೆಗಳಿಗೆ ನೇಮಿಸಲಾಗುತ್ತದೆ. ಈ ರೀತಿಯ ಅತಿಥಿ ಶಿಕ್ಷಕರ ಬೋಧನೆ ಅವಧಿ, ಶಾಲಾ ಸಮಯದಲ್ಲೇ ನಿಗದಿಯಾಗುವುದರಿಂದ ಮಕ್ಕಳಿಗೆ ಕಿರಿಕಿರಿ ಎನಿಸುವುದಿಲ್ಲ. ಇವರು ಬರೀ ಪಠ್ಯದ ವಿಚಾರವನ್ನು ಮಾತ್ರ ತಿಳಿಸುವುದಿಲ್ಲ, ಬದುಕುವುದು ಹೇಗೆ ಅನ್ನೋದನ್ನೂ ಕಲಿಸಿಕೊಡುತ್ತಾರೆ. ಶೈಕ್ಷಣಿಕ ಮಟ್ಟ ತಿಳಿಯೋದು ಹೀಗೆ
ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಂತರ, ಪಾಠ ಪ್ರವಚನ ಪ್ರಾರಂಭಿಸುವುದಕ್ಕೂ ಮುಂಚೆ ಮಕ್ಕಳ ಬೌದ್ದಿಕ ಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಹೇಗೆಂದರೆ: ಪ್ರೌಢಶಾಲಾ ಮಕ್ಕಳಿಗೆ ಮೂರನೇ ತರಗತಿ ಪಠ್ಯಪುಸ್ತಕವೊಂದನ್ನು ಕೊಟ್ಟು ಓದಲು ಹಾಗೂ ಬರೆಯಲು ಹೇಳುತ್ತಾರೆ. ಅದರಲ್ಲಿ ಯಾವ ಯಾವ ಮಕ್ಕಳು ವಿಷಯವನ್ನು ಅರ್ಥೈಸಿಕೊಂಡಿದ್ದಾರೆ ಎಂಬುದರ ಪಟ್ಟಿಯನ್ನು ತಯಾರಿಸಿಕೊಳ್ಳಲಾಗುತ್ತದೆ. ಮಕ್ಕಳ ಶೈಕಣಿಕ ಕೊರತೆ ಗಮನಿಸಿ, ಅದಕ್ಕೆ ತಮ್ಮದೇ ಆದ ಕೆಲವು ಬೇಸಿಕ್ ಸ್ಕಿಲ್ಸ್‌ಗಳನ್ನು ಹೇಳಿಕೊಡುತ್ತಾರೆ. ನಂತರ, ಬೋಧನೆ ಪೂರ್ವ, ನಂತರ ಹೀಗೆ ಎರಡು ಅಸೈನ್‌ಮೆಂಟ್‌ಗಳನ್ನು ಕೊಡಲಾಗುತ್ತದೆ. ಕೆಲವು ಮೌಖೀಕ ಪರೀಕ್ಷೆಗಳನ್ನು ನಡೆಸಿ, ನಮ್ಮ ಬೋಧನೆಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ಮಕ್ಕಳು ಶೈ ಕ್ಷಣಿಕ ಮಟ್ಟ ಹೇಗಿತ್ತು ಎನ್ನುವುದನ್ನು ಪಟ್ಟಿ ಮಾಡಲಾಗುತ್ತದೆ.