Advertisement

ಭೂಮಿಯೊಳಗಿನ ಮನುಷ್ಯರೊಂದಿಗೆ ವ್ಯವಹಾರ ಒಪ್ಪಂದ!

12:30 AM Jan 17, 2019 | |

ವಿಜ್ಞಾನ ಒಪ್ಪಿದ ಸಿದ್ದಾಂತಗಳು ಎಷ್ಟಿವೆಯೋ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತರ್ಕವಿಲ್ಲದ, ತಲೆ ಬುಡವಿಲ್ಲದ ಸಿದ್ದಾಂತಗಳೂ ನಮ್ಮ ನಡುವೆ ಇವೆ. ಇವುಗಳಲ್ಲಿ ಬಹುತೇಕವು ನಂಬಲು ಅಸಾಧ್ಯವಾದುದಷ್ಟೆ ಅಲ್ಲ, ನಮ್ಮನ್ನು ಬಿದ್ದೂ ಬಿದ್ದು ನಗಿಸುವಂಥವು. ಇಂಥ ಸಿದ್ಧಾಂತವೊಂದನ್ನು ಮಂಡಿಸಿದಾತ ಪ್ರೊ. ಜಾನ್‌ ಕ್ಲೀವ್ಸ್‌ ಜೂನಿಯರ್‌. ಆತ ಅಮೆರಿಕದ ಸೇನೆಯಲ್ಲಿ ಆಫೀಸರ್‌ ಆಗಿದ್ದಾತ. ಅಮೆರಿಕದಾದ್ಯಂತ ಶಾಲಾ ಕಾಲೇಜುಗಳಲ್ಲಿ ಜಾನ್‌ ತನ್ನ ವಿಚಿತ್ರ ಸಿದ್ದಾಂತವನ್ನು ಮಂಡಿಸಿ ಬರುತ್ತಿದ್ದ. ಈ ಮಹಾಶಯ ಭೂಮಿ ಟೊಳ್ಳಿನಿಂದ ಕೂಡಿದೆ ಎಂದು ನಂಬಿದ್ದ. ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿ ದೊಡ್ಡ ಕುಳಿಯಿದ್ದು ಅದರೊಳಗಿಂದ ಭೂಮಿಯ ಮಧ್ಯಭಾಗಕ್ಕೆ ಪ್ರಯಾಣಿಸಬಹುದೆಂದುಕೊಂಡಿದ್ದ. ಅದಕ್ಕಿಂತ ಮಿಗಿಲಾಗಿ ಭೂಮಿಯ ಮೇಲೆ ಮನುಷ್ಯರು ವಾಸಿಸುತ್ತಿರುವಂತೆಯೇ ಭೂಮಿಯ ಒಳಗೂ ಮನುಷ್ಯರು ವಾಸಿಸುತ್ತಿದ್ದಾರೆ ಎಂಬುದು ಆತನ ವಾದವಾಗಿತ್ತು. ಈ ನಿಟ್ಟಿನಲ್ಲಿ ಆತ ಅದೆಷ್ಟು ಕಾರ್ಯಪ್ರವೃತ್ತನಾಗಿದ್ದ ಎಂದರೆ 100 ಜನರ ತಂಡವನ್ನು ಉತ್ತರ ಧೃವಕ್ಕೆ ಕಳಿಸಲು ಸರ್ಕಾರದ ಮುಂದೆ ಬೇಡಿಕೆ ಇಟ್ಟು, ಸಾಹಸಯಾನದ ರೂಪುರೇಷೆಯನ್ನು ವಿವರಿಸಿದ್ದ. ಅಷ್ಟೇ ಅಲ್ಲದೆ ಆತ ಭೂಮಿಯೊಳಗಿನ ಮನುಷ್ಯರೊಂದಿಗೆ ವ್ಯವಹಾರ ನಡೆಸುವ ಬಗ್ಗೆಯೂ ಸರಕಾರದ ಅನುಮತಿ ಕೋರಿದ್ದ. ಅಚ್ಚರಿ ಎಂದರೆ 1820ರಲ್ಲಿ ದೇಶದ ಅಧ್ಯಕ್ಷರಾಗಿದ್ದ ಜಾನ್‌ ಕ್ವಿನ್ಸಿ ಆ್ಯಡಮ್ಸ್‌ರವರು ಈ ಯೋಜನೆಗೆ ಒಪ್ಪಿಗೆ ನೀಡಿದ್ದು. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರುವಷ್ಟರಲ್ಲಿ ಅಧ್ಯಕ್ಷ ಕ್ವಿನ್ಸಿಯವರ ಆಡಳಿತಾವಧಿ ಮುಗಿದಿತ್ತು. ನಂತರ ಬಂದ ಅಧ್ಯಕ್ಷರು ಈ ಯೋಜನೆಗೆ ಪೂರ್ಣವಿರಾಮ ಚುಕ್ಕಿ ಇಟ್ಟರು. 

Advertisement

ಹವನ

Advertisement

Udayavani is now on Telegram. Click here to join our channel and stay updated with the latest news.

Next