Advertisement

“ಮಕ್ಕಳ ಮನಃಸ್ಥಿತಿಯನ್ನರಿತು ವ್ಯವಹರಿಸಿ’

08:11 PM Apr 24, 2019 | Team Udayavani |

ಬೆಳ್ತಂಗಡಿ: ಶಿಕ್ಷಕ ವೃತ್ತಿ ಪವಿತ್ರವಾದುದು ಮತ್ತು ಶ್ರೇಷ್ಠವಾದುದು. ಶಿಕ್ಷಕರು ಕೇವಲ ಮಕ್ಕಳ ಕಲಿಕಾ ಸಾಧನೆ ಯನ್ನು ಮಾತ್ರ ಗುರುತಿಸದೆ ಮಕ್ಕಳ ಸೃಜನಶೀಲತೆಯನ್ನು ಗುರುತಿಸುವುದರೂಂದಿಗೆ ಮಕ್ಕಳ ಮನಃಸ್ಥಿತಿಯನ್ನರಿತು ವ್ಯವ ಹರಿಸಬೇಕು ಎಂದು ಗೋಳಿತೊಟ್ಟು ಸ.ಹಿ.ಪ್ರಾ. ಶಾಲೆಯ ಪದವೀಧರ ಸಹಶಿಕ್ಷಕ ಮಹಮ್ಮದ್‌ ಲತೀಫ್‌ ಅಭಿಪ್ರಾಯಪಟ್ಟರು.

Advertisement

ಉಜಿರೆಯ ಎಸ್‌.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ದರ್ಪಣದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ವರ್ಣನ್‌ ಮೆಂಡೋನ್ಸ ಮಾತನಾಡಿ, ಶಿಕ್ಷಕರು ಕೇವಲ ಹಣ ಗಳಿಕೆಗಾಗಿ ತಮ್ಮ ವೃತ್ತಿಯನ್ನು ಮಾಡದೆ ವೃತ್ತಿಗೌರವಕ್ಕೆ ಪೂರಕವಾಗಿ ವ್ಯವಹರಿಸಿ ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ| ನಿತ್ಯಾನಂದ ಕೆ. ಅವರು, ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ನಿಜಕ್ಕೂ ಆನಂದದ ಅನುಭವಗಳನ್ನು ಮೆಲುಕು ಹಾಕುವಂತೆ ಮಾಡಿದೆ. ಈಗಿನ ಹೊಸ ವಿದ್ಯಾರ್ಥಿಗಳಿಗೆ ಕಲಿಯಲು ಹೊಸ ಹುಮ್ಮಸ್ಸು, ಪ್ರೋತ್ಸಾಹವನ್ನು ನೀಡುತ್ತದೆ. ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾಲೇಜಿನಲ್ಲಿ ಉಪಯುಕ್ತವಾದ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಲಿ ಎಂದು ಹಾರೈಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಸಂಯೋ ಜಕ ಸಂತೋಷ್‌ ಸಾಲ್ದಾನಾ ಸಂಘದ ಗುರಿ ಉದ್ದೇಶಗಳನ್ನು ಹಾಗೂ ಅದು ಬೆಳೆದು ಬಂದ ಬಗೆಯನ್ನು ವಿವರಿಸಿದರು. ಸಂಘದ ಅಧ್ಯಕ್ಷ ಅನಿಲ್‌ ಪಿರೇರಾ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿದ್ಯಾಶ್ರೀ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಶ್ರೀಜಾ ವಂದಿಸಿ, ಸಹನಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next