ಹೀಗೆಂದು ಹೇಳಿದ್ದು ಯಾವುದೋ ಜ್ಯೋತಿಷಿ ಗಳಲ್ಲ. ಬದಲಿಗೆ ನಾಸಾ ವಿಜ್ಞಾನಿಗಳು… ಇದಕ್ಕೆ ಅವರು ಸೂಕ್ತ ಪುರಾವೆಯನ್ನೂ ಒದಗಿಸಿದ್ದಾರೆ. ಭೂಮಿಯ ಪರಿಭ್ರಮಣದ ವೇಗ 2018ರಲ್ಲಿ ವ್ಯತ್ಯಯವಾಗಲಿದೆ. ಇದರಿಂದಾಗಿ ಹೆಚ್ಚು ಜನ ಸಂಖ್ಯೆಯಿರುವ ಉಷ್ಣವಲಯದಲ್ಲಿ ಭೂಕಂಪದ ತೀವ್ರತೆ ಮತ್ತು ಸಂಖ್ಯೆ ಹೆಚ್ಚಿರಲಿದೆ. ಭೂಮಿಯ ಪರಿಭ್ರಮಣ ಮತ್ತು ಭೂಕಂಪದ ಮಧ್ಯೆ ಸಂಬಂಧವಿದೆ ಎಂದು ಅಮೆರಿಕದ ಜಾಗತಿಕ ಭೂಗರ್ಭಶಾಸ್ತ್ರಜ್ಞರ ಸಂಘಟನೆಯ ವಾರ್ಷಿಕ ಸಭೆಯಲ್ಲಿ ಕೊಲರಾಡೋ ವಿಶ್ವವಿದ್ಯಾಲಯದ ರೋಜರ್ ಬಿಲ್ಹಮ್ ಎಂಬವರು ಮಂಡಿಸಿರುವ ಸಂಶೋಧನಾ ಪ್ರಬಂಧದಲ್ಲಿ ವಿವರಿಸಲಾಗಿದೆ.
Advertisement
ಭೂಮಿ ಪರಿಭ್ರಮಣ ವೇಗ ಕಡಿಮೆಯಾದಾ ಗಲೆಲ್ಲ ಭೂಕಂಪದ ತೀವ್ರತೆ ಹಾಗೂ ಸಂಖ್ಯೆಯೂ ಹೆಚ್ಚಾಗಿರುವುದು ಕಂಡುಬಂದಿದೆ. ಈ ಹಿಂದೆಯೂ ಇದು ಕಂಡುಬಂದಿದೆ. 2017ರಲ್ಲಿ ಭೂಮಿ ಪರಿಭ್ರಮಣ ವೇಗ ಸಾಧಾರಣ ಮಟ್ಟದಲ್ಲಿತ್ತು. ಹೀಗಾಗಿ 6 ತೀವ್ರ ಪ್ರಮಾಣದ ಭೂಕಂಪ ಸಂಭವಿಸಿವೆ. ಆದರೆ 2018ರಲ್ಲಿ 20 ಬಾರಿ ತೀವ್ರ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆ ಯಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.