Advertisement

ಆಧಾರ್‌-ಪಾನ್‌ ಲಿಂಕ್‌ಗೆ ವರ್ಷಾಂತ್ಯದ ಗಡುವು

06:30 AM Sep 01, 2017 | |

ಹೊಸದಿಲ್ಲಿ:  ನಿಮ್ಮ ಪ್ಯಾನ್‌ ಕಾರ್ಡ್‌ ಮತ್ತು ಆಧಾರ್‌ ಲಿಂಕ್‌ ಆಗಿಲ್ಲವೆಂದು ಚಿಂತೆ ಮಾಡುವುದು ಬೇಡ. ಅದನ್ನು ಡಿ.31ರ ವರೆಗೆ ವಿಸ್ತರಿಸಲಾಗಿದೆ. ಅಂದರೆ ಒಟ್ಟು 4 ತಿಂಗಳ ಅವಧಿ ಸಿಕ್ಕಿದಂತಾಗುತ್ತದೆ. ಹೀಗಾಗಿ ರಿಟರ್ನ್ಸ್ ಸಲ್ಲಿಕೆ ಮಾಡುವವರು ನಿಶ್ಚಿಂತರಾಗಿ ಸಲ್ಲಿಸಬಹುದು.

Advertisement

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಈ ಬಗ್ಗೆ ಗುರುವಾರ ಪ್ರಕಟನೆೆ ಹೊರಡಿಸಿದೆ. ಸರಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್‌ ಲಿಂಕ್‌ ಮಾಡುವ ಅವಧಿಯನ್ನು ಡಿ. 31ರ ವರೆಗೆ ವಿಸ್ತರಿಸಿರುವುದಾಗಿ ಸರಕಾರ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next