Advertisement

ದಿಲ್ಲಿ IIT ಹಾಸ್ಟೆಲ್‌ ಬ್ರೇಕ್‌ ಫಾಸ್ಟ್‌ ನಲ್ಲಿ ಸತ್ತ ಇಲಿ ಪತ್ತೆ

05:25 PM Sep 28, 2017 | udayavani editorial |

ಹೊಸದಿಲ್ಲಿ : ದಿಲ್ಲಿ ಐಐಟಿಯ ಅರಾವಳಿ ಹಾಸ್ಟೆಲ್‌ನಲ್ಲಿ  ಮೊನ್ನೆ ಮಂಗಳವಾರ ವಿದ್ಯಾರ್ಥಿಗಳಿಗೆ ಕೊಡಲಾದ ಬ್ರೇಕ್‌ ಫಾಸ್ಟ್‌ ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿರುವುದು ವರದಿಯಾಗಿದೆ.

Advertisement

ಈ ಗಂಭೀರ ಹಾಗೂ ಕಳವಳಕಾರಿ ವಿಷಯವನ್ನು ವಿದ್ಯಾರ್ಥಿ ವ್ಯವಹಾರಗಳ ಡೀನ್‌ ಅವರ ಗಮನಕ್ಕೆ ವಿದ್ಯಾರ್ಥಿಗಳು ತಂದಿದ್ದಾರೆ. ದೂರನ್ನು ಅನುಸರಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರೂಪಿಸಲಾಗಿದೆ. 

ದಿಲ್ಲಿ ಐಐಟಿ ವಿದ್ಯಾರ್ಥಿಯೋರ್ವ ಫೇಸ್‌ ಬುಕ್‌ನಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾನೆ. “ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಕೊಡಲಾದ ಬೆಳಗ್ಗಿನ ಉಪಾಹಾರದಲ್ಲಿನ ಚಟ್ನಿಯಲ್ಲಿ ಸತ್ತ ಇಲಿ ಬಿದ್ದಿರುವುದು ಪತ್ತೆಯಾಗಿದೆ. ‘ಇಲಿ ಚಟ್ನಿ’ ಯನ್ನು ತಿನ್ನುವ ಮಾತು ಹಾಗಿರಲಿ; ಅದನ್ನು ನೆನೆಸಿದರೇ ಹಲವಾರು ಬಗೆಯ ರೋಗಗಳನ್ನು ನಮ್ಮನ್ನು ಮುತ್ತಿಕೊಂಡಿರುವ ಭಯ ಉಂಟಾಗುತ್ತದೆ’ ಎಂದಾತ ಭೀತಿಯನ್ನು ತೋಡಿಕೊಂಡಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next