Advertisement

Miracle: ಮೃತ ವ್ಯಕ್ತಿಯ ಜೀವ ಉಳಿಸಿದ ರಸ್ತೆ ಗುಂಡಿ… ಹರಿಯಾಣದಲ್ಲೊಂದು ವಿಚಿತ್ರ ಘಟನೆ

01:47 PM Jan 13, 2024 | Team Udayavani |

ಹರಿಯಾಣ: ರಸ್ತೆ ಹೊಂಡಗಳು ಅದೆಷ್ಟೋ ಜನರ ಜೀವ ತೆಗೆದುಕೊಂಡಿರುತ್ತದೆ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ತುರ್ತು ಚಿಕಿತ್ಸೆಗೆ ಸಾಗಿಸಬೇಕಾದರೆ ಹಾಳಾದ ರಸ್ತೆ ಹೊಂಡಗಳಿಂದ ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಲು ವಿಳಂಬವಾಗಿ ಅದೆಷ್ಟೋ ರೋಗಿಗಳು ದಾರಿ ಮಧ್ಯೆಯೇ ಜೀವ ಬಿಟ್ಟಿದ್ದಾರೆ ಆದರೆ ಹರಿಯಾಣದ 80 ವರ್ಷದ ವ್ಯಕ್ತಿಯೊಬ್ಬರಿಗೆ ಈ ರಸ್ತೆಯ ಹೊಂಡವೇ ಜೀವರಕ್ಷಕವಾಗಿ ಪರಿಣಮಿಸಿದೆ.

Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಹರಿಯಾಣದ 80 ವರ್ಷದ ದರ್ಶನ್ ಸಿಂಗ್ ಬ್ರಾರ್ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ, ಈ ವೇಳೆ ಆಸ್ಪತ್ರೆಯಲ್ಲಿದ್ದ ಅವರ ಕುಟುಂಬ ಸದಸ್ಯರು ತಮ್ಮ ಮನೆಗೆ ದರ್ಶನ್ ಸಿಂಗ್ ಅವರು ಮೃತಪಟ್ಟ ವಿಚಾರವನ್ನು ತಿಳಿಸಿದ್ದಾರೆ. ಮನೆಯಲ್ಲಿ ವ್ಯಕ್ತಿ ಮೃತಪಟ್ಟ ವಿಚಾರ ತಿಳಿಸುತ್ತಲೇ ಕುಟುಂಬ ಸದಸ್ಯರಲ್ಲಿ ದುಃಖ್ಖದ ವಾತಾವರಣ ಮನೆ ಮಾಡಿತ್ತು.

ಇನ್ನೊಂದೆಡೆ ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ತಯಾರಿ ನಡೆಸಲು ಸಿದ್ದತೆಯನ್ನು ಮಾಡಲು ನಿರ್ಧರಿಸಿದ್ದರು ಅದರಂತೆ ಕುಟುಂಬದ ಇತರ ಸದಸ್ಯರಿಗೆ ಸಾವಿನ ಸುದ್ದಿಯನ್ನು ತಿಳಿಸಲಾಯಿತು.

ಇತ್ತ ಆಸ್ಪತ್ರೆಯಲ್ಲಿ ಮೃತದೇಹವನ್ನು ಮನೆಗೆ ತರುವ ವ್ಯವಸ್ಥೆಯನ್ನು ಮಾಡಲಾಯಿತು ಅದರಂತೆ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಯಿತು. ದರ್ಶನ್ ಸಿಂಗ್ ಬ್ರಾರ್ ಅವರ ದೇಹವನ್ನು ಪಟಿಯಾಲದಿಂದ ಕರ್ನಾಲ್ ಬಳಿಯ ಅವರ ಮನೆಗೆ ಕೊಂಡೊಯ್ಯಲಾಯಿತು ಈ ನಡುವೆ ವೇಗವಾಗಿ ಬರುತ್ತಿದ್ದ ಆಂಬ್ಯುಲೆನ್ಸ್ ರಸ್ತೆಯಲ್ಲಿದ್ದ ಹೊಂಡಕ್ಕೆ ಹಾರಿಸಿಕೊಂಡು ಬಂದಿದ್ದಾನೆ ಈ ವೇಳೆ ಆಂಬ್ಯುಲೆನ್ಸ್ ನಲ್ಲಿ ದರ್ಶನ್ ಸಿಂಗ್ ಅವರ ಬಳಿ ಕುಳಿತ್ತಿದ್ದ ಮೊಮ್ಮಗನಿಗೆ ತಾತನ ತನ್ನ ಕೈಯನ್ನು ಆಚೆ ಈಚೆ ಮಾಡುವುದು ಕಂಡಿದ್ದಾನೆ ಕೂಡಲೇ ಅಜ್ಜನ ಹೃದಯ ಬಡಿತವನ್ನು ಪರಿಶೀಲಿಸಿದ ವೇಳೆ ಅಜ್ಜನ ಹೃದಯ ಬಡಿತದ ಸದ್ದು ಕೇಳಿದೆ.
ಕೂಡಲೇ ವಿಚಾರವನ್ನು ಆಂಬ್ಯುಲೆನ್ಸ್ ಚಾಲಕನಿಗೆ ತಿಳಿಸಿ ಹತ್ತಿರದ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾನೆ ಅದರಂತೆ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಪರಿಶೀಲಿಸಿದ ವೇಳೆ ವ್ಯಕ್ತಿ ಬದುಕಿರುವುದು ಗೊತ್ತಾಗಿದೆ. ಸದ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದೆ.
ವ್ಯಕ್ತಿ ಬದುಕಿರುವ ವಿಚಾರ ಮನೆಯವರಿಗೆ ತಿಳಿಸುತ್ತಿದ್ದಂತೆ ಇದೊಂದು ಪವಾಡ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Desi Swara: ನೆನಪಿನಂಗಳದ ಸಂಕ್ರಾಂತಿ ;ರಂಗೋಲಿಯ ಚಿತ್ತಾರ, ರಾಸುಗಳ ಕಿಚ್ಚು ಹಾಯಿಸುವಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next