Advertisement
ನಗ್ರಿ ಶಾಂತಿನಗರದಲ್ಲಿ ಮೃತದೇಹವಿರುವ ಕಾರೊಂದು ನಿಂತಿದೆ ಎಂಬ ಸುದ್ದಿ ರವಿವಾರ ಮಧ್ಯಾಹ್ನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಪ್ರಾರಂಭದಲ್ಲಿ ಅದು ಅಪರಿಚಿತ ಶವವೆಂದು ಭಾವಿಸಿದ್ದರೂ, ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ತಸ್ಲೀಮ್ ಎರಡು ದಿನಗಳ ಹಿಂದೆ ಗುಲ್ಬರ್ಗಾ ಜೈಲಿನಿಂದ ಬಿಡುಗಡೆಗೊಂಡಿದ್ದು, ಅಲ್ಲಿಂದಲೇ ಆತನನ್ನು ಅಪಹರಣ ಮಾಡಿದ್ದ ಗ್ಯಾಂಗ್ ಕೊಲೆ ನಡೆಸಿದೆ.
Related Articles
Advertisement
ಘಟನಾ ಸ್ಥಳಕ್ಕೆ ದ.ಕ.ಜಿಲ್ಲಾ ಚಾರ್ಜ್‌ನಲ್ಲಿರುವ ಉಡುಪಿ ಎಸ್‌ಪಿ ವಿಷ್ಣುವರ್ಧನ್, ದ.ಕ.ಅಡಿಶನಲ್ ಎಸ್‌ಪಿ ಡಾ| ವಿಕ್ರಂ ಅಮ್ಟೆ, ಮಂಗಳೂರು ಡಿಸಿಐಬಿ ಇನ್ಸ್‌ಪೆಕ್ಟರ್ ಚೆಲುವರಾಜು, ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್, ಬಂಟ್ವಾಳ ನಗರ ಪಿಎಸ್‌ಐ ಅವಿನಾಶ್, ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಹಾಗೂ ಸಿಬಂದಿ ತೆರಳಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಜ್ಯುವೆಲ್ಲರಿ ಕಳವಿನ ಪ್ರಮುಖ ಆರೋಪಿಕೊಲೆಯಾದ ತಸ್ಲೀಮ್ 2019ರಲ್ಲಿ ಸೆಪ್ಟೆಂಬರ್‌ನಲ್ಲಿ ಮಂಗಳೂರು ಭವಂತಿ ಸ್ಟ್ರೀಟ್ ನ ಜ್ಯುವೆಲ್ಲರಿವೊಂದರಲ್ಲಿ ನಡೆದ ಕಳವು ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಇಬ್ಬರು ಅಪಾ^ನ್ ಮೂಲದ ಕುಖ್ಯಾತ ರೌಡಿಗಳ ಜತೆ ಸೇರಿ ಈ ಕಳವು ಪ್ರಕರಣ ನಡೆಸಿ, ಮಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಜತೆಗೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಲಿಯಾ ರಫೀಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ. ಈತ ಕಾಸರಗೋಡಿನಿಂದ ಮುಂಬಯಿಗೆ ತೆರಳಿದ ಬಳಿಕ ಅಲ್ಲಿ ಕುತ್ಯಾತ ರೌಡಿಗಳು ಹಾಗೂ ಭೂಗತ ಪಾತಕಿಗಳ ಸಂಪರ್ಕ ಬೆಳೆಸಿಕೊಂಡಿದ್ದ. ಈತನ ವಿರುದ್ಧ ಕಾಸರಗೋಡಿನ ಬೇಕಲ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ ಸೇರಿದಂತೆ ಹೊಸದಿಲ್ಲಿಯ ವಿಶೇಷ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಒಳಸಂಚು ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕುರಿತು ಕಳೆದ ಸೆಪ್ಟೆಂಬರ್‌ನ ಜ್ಯುವೆಲ್ಲರಿ ಕಳವು ಪ್ರಕರಣದ ಸಂದರ್ಭ ಮಂಗಳೂರು ಪೊಲೀಸರು ತಿಳಿಸಿದ್ದರು. ತಸ್ಲೀಮ್ ಕೆಲ ದಿನಗಳ ಹಿಂದೆಯಷ್ಟೇ ಗುಲಾºರ್ಗಾ ಜೈಲಿನಿಂದ ಬಿಡುಗಡೆಗೊಂಡು ಹೊರ ಬರುತ್ತಿದ್ದಂತೆ ಆತನನ್ನು ಯಾವುದೇ ತಂಡವೊಂದು ಅಪಹರಣ ನಡೆಸಿತ್ತು. ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಡ್ನಾಪ್ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದರು. ಯಾವುದೋ ಹಳೆ ಪ್ರಕರಣದ ದ್ವೇಷದ ಹಿನ್ನೆಲೆಯಲ್ಲೇ ಕೊಲೆ ನಡೆದಿರುವ ಸಾಧ್ಯತೆ ಇದೆ.