Advertisement

ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಬಾವಿಯಲ್ಲಿ ಪತ್ತೆ; ಕೊಲೆ ಶಂಕೆ

01:15 PM Jan 19, 2021 | Team Udayavani |

ಹೊಳೆನರಸೀಪುರ: ತಾಲೂಕಿನ ಮಾರಗೋಡನ ಹಳ್ಳಿಯ ಮೂರ್ತಿ (48) ಎಂಬಾತನ ಮೃತದೇಹವು ಗ್ರಾಮದಲ್ಲಿನ ಬಾವಿಯೊಂದರಲ್ಲಿ ಕಲ್ಲು ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗ್ರಾಮಸ್ಥರು ಇದು ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

Advertisement

ಸಂಕ್ರಾಂತಿ ಹಬ್ಬಕ್ಕೆಂದು ಬೆಂಗಳೂರಿನಿಂದ ಊರಿಗೆ ಬಂದಿದ್ದ ಮೂರ್ತಿ, ಭಾನುವಾರ ಮಧ್ಯಾಹ್ನ ತಾವು ಜಮೀನಿಗೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ ಹೋದವರು ಸಂಜೆ ಆದರೂ ಹಿಂತಿರುಗಿಲ್ಲ. ನಂತರ ಎಲ್ಲಾ ಕಡೆ ಹುಡುಕಾಟ ನಡೆಸಿದಾಗ ಆತನ ಮೃತದೇಹ ಗ್ರಾಮದ ತೆರೆದ ಬಾವಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆ ಆಗಿದೆ. ಸ್ಥಳಕ್ಕೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಅಶೋಕ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅವರ ಸಾವಿಗೆ ಕಾರಣ ಏನೆಂದು ಇಲ್ಲಿಯವರೆಗೂ ಗೊತ್ತಾಗಿಲ್ಲ. ಆತನ ಸಾವಿನ ಹಿಂದೆ ಯಾವುದೇ ರಾಜಕೀಯ ದ್ವೇಷ ಕಂಡು ಬರುತ್ತಿಲ್ಲ. ಸಿಬ್ಬಂದಿ ಸಮೇತ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿದೆ. ಕೊಲೆಯಾಗಿರುವ ವ್ಯಕ್ತಿ
ಬೆಂಗಳೂರಿನಲ್ಲಿ ನೆಲೆಸಿದ್ದು, ಹಬ್ಬ ಹರಿದಿನಗಳಿಗೆ ಗ್ರಾಮಕ್ಕೆ ಬಂದು ಹೋಗುತ್ತಿದ್ದನೆಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಆದರೆ, ಈತನ ಸಾವಿನ  ಹಿಂದೆ ವೈಯಕ್ತಿಕ ಕಾರಣಗಳು ಇರಬಹು ದೆಂಬ ಸಂದೇಹ ತಮ್ಮ ಇಲಾಖೆಗೆ ಗಮನಕ್ಕೆ ಬಂದಿದ್ದು, ಕೊಲೆಗೈದ ವ್ಯಕ್ತಿಗಳ ಪತ್ತೆಗೆ ಇಲಾಖೆ ಬಲೆ ಬೀಸಿದೆ ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಗಾಬ್ಬಾದಲ್ಲಿ ಅಬ್ಬರಿಸಿದ ಗಿಲ್, ಪಂತ್: ಭಾರತದ ಮುಡಿಗೆ ಬಾರ್ಡರ್- ಗವಾಸ್ಕರ್ ಟ್ರೋಫಿ

ಮೃತ ವ್ಯಕ್ತಿ ಅಮಾಯಕ; ಸೂಕ್ತ ತನಿಖೆ ನಡೆಸಲಿ ಮೃತಪಟ್ಟಿರುವ ಮೂರ್ತಿ (48) ಅಮಾಯಕ. ಈತನ ಸಾವಿನ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪೊಲೀಸರ ತನಿಖೆಯಿಂದ ಬಹಿರಂಗಪಡಿಸಬೇಕೆಂದು ಬಿಜೆಪಿ ಮುಖಂಡ ಎಂ.ಎನ್‌.ರಾಜು ಆಗ್ರಹಿಸಿದ್ದಾರೆ. ಕೊಲೆಗೀಡಾದ ಮೂರ್ತಿ ಭಾನುವಾರ ಮಧ್ಯಾಹ್ನದ ತನಕ ಮನೆಯಲ್ಲೇ ಇದ್ದರು. ಈ ಘಟನೆಗೆ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ. ಪತ್ತೆ ಆಗಿರುವ ಮೃತದೇಹಕ್ಕೆ ಹಗ್ಗದಿಂದ ಕಲ್ಲು ಕಟ್ಟಿರುವುದು
ಪತ್ತೆಯಾಗಿದೆ. ಇದು ಸಾಕಷ್ಟು ಅನುಮಾನ ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಕಳೆದ ಗ್ರಾಪಂ ಚುನಾವಣೆ ವೇಳೆ ಗ್ರಾಮದಲ್ಲಿ
ಉದ್ವಿಗ್ನ ಪರಿಸ್ಥಿತಿ ಇತ್ತು. ಇದಕ್ಕೆ ಉದಾಹರಣೆ ಎಂದರೆ ಇಂದಿಗೂ ಗ್ರಾಮದಲ್ಲಿ ಪೊಲೀಸ್‌ ವಾಹನ ನಿಂತಿರುವುದು.

Advertisement

ಮೃತಪಟ್ಟಿರುವ ವ್ಯಕ್ತಿ ಮೂರ್ತಿಗೆ ಬೆಂಗಳೂರಿನಲ್ಲಿ ನೆಲೆಸಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಮೃತನ ಪತ್ನಿ ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

ಈತ ಹಬ್ಬ ಹರಿದಿನಗಳಲ್ಲಿ ಊರಿಗೆ ಬಂದು ಹೋಗುತ್ತಿದ್ದ. ಇತ್ತೀಚಿಗೆ ನಡೆದ ಗ್ರಾಪಂ ಚುನಾವಣೆ ವೇಳೆ ಊರಿಗೆ ಬಂದಿದ್ದ ಈತ, ಮತ್ತೆ ಬೆಂಗಳೂರಿಗೆ ಹೋಗಿ ಸಂಕ್ರಾಂತಿ ಹಬ್ಬಕ್ಕೆಂದು ಬಂದವರು, ಮಂಗಳವಾರ ಮತ್ತೆ ವಾಪಸ್‌ ಹೋಗುವವರು ಇದ್ದರು. ಅಷ್ಟರಲ್ಲಿ ಈ ಘಟನೆ ನಡೆದಿದೆ, ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ರಾಜು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next