Advertisement

ಆಗಸ್ಟ್‌ನಲ್ಲಿ ನಿವೃತ್ತಿ ಕುರಿತು ಡಿವಿಲಿಯರ್ಸ್‌ ನಿರ್ಧಾರ 

03:45 AM Jun 27, 2017 | Team Udayavani |

ಬರ್ಮಿಂಗ್‌ಹ್ಯಾಂ: ದಕ್ಷಿಣ ಆಫ್ರಿಕಾ ತಂಡದ ನಾಯಕ, ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಬಿಡಿ, ನನ್ನ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾ
ಮಂಡಳಿಯನ್ನು ಸಂಪರ್ಕಿಸುತ್ತೇನೆ. ಬರುವ ಆಗಸ್ಟ್‌ನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. 

Advertisement

ಮುಂದಿನ ದಿನಗಳಲ್ಲಿ ದೇಶದಲ್ಲಿಯೇ ನನ್ನ ಕುಟುಂಬದ ಜತೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಿದ್ದೇನೆ. ರಾಷ್ಟ್ರೀಯ ತಂಡಕ್ಕೆ ಹೊಸ ಯುವಕರ ಸೇರ್ಪಡೆಯಾಗುವುದನ್ನು ಸ್ವಾಗತಿಸುತ್ತೇನೆ. ಆದರೆ ಸೆಪ್ಟೆಂಬರ್‌ ನಲ್ಲಿ ಬಾಂಗ್ಲಾ ವಿರುದ್ಧ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಯಕೆ ಇದೆ ಎಂದು ತಿಳಿಸಿದ್ದಾರೆ.

2019ರ ಏಕದಿನ ವಿಶ್ವಕಪ್‌ ದೃಷ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹಿರಿಯ ಆಟಗಾರರ ಜಾಗದಲ್ಲಿ ಯುವಕರಿಗೆ ಮನ್ನಣೆ ನೀಡುವ ಸಾಧ್ಯತೆ ಇದೆ. ಎಬಿಡಿ ನೇತೃತ್ವದಲ್ಲಿ
ದಕ್ಷಿಣ ಆಫ್ರಿಕಾ ತಂಡ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವೈಫ‌ಲ್ಯ ಎದುರಿಸುತ್ತಿದೆ.

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಗುಂಪುಹಂತದಲ್ಲಿಯೇ ಸೋತರೆ, ಇಂಗ್ಲೆಂಡ್‌ ವಿರುದಟಛಿ ಏಕದಿನ ಸರಣಿಯಲ್ಲಿ 2-1ರಿಂದ ಸೋಲುಂಡಿದೆ. ಹೀಗಾಗಿ ಇದು ಸಹಜವಾಗಿ ನಾಯಕ ಎಬಿಡಿ ನಿವೃತ್ತಿಗೆ ಒತ್ತಡ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next