Advertisement

2ನೇ ಬಾರಿಗೆ ಡಿಡಿಜಿ ಕಮಾಂಡೇಶನ್ ಅವಾರ್ಡ್ ಗೆ ಪಾತ್ರರಾದ ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ

07:32 PM May 07, 2022 | Team Udayavani |

ಹುನಗುಂದ: ಪಟ್ಟಣದ ವಿ.ಎಂ.ಎಸ್.ಆರ್. ವಸ್ತ್ರದ ಹಾಗೂ ವಿ.ಎಸ್. ಬೆಳ್ಳಿಹಾಳ ಪದವಿ ಮಹಾವಿದ್ಯಾಲಯದ ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ ಅವರು 2ನೇ ಬಾರಿಗೆ ಕರ್ನಾಟಕ-ಗೋವಾ ಡೈರೆಕ್ಟರ್‌ರೇಟ್‌ನ ‘ಡೆಪ್ಯುಟಿ ಡೈರೆಕ್ಟರ್ ಜನರಲ್ ಕಮಾಂಡೇಶನ್ ಅವಾರ್ಡ’ಗೆ ಪಾತ್ರರಾಗಿದ್ದಾರೆ.

Advertisement

ಹುನಗುಂದದ ವಿಎಂಎಸ್‌ಆರ್‌ವಿ ಕಾಲೇಜಿನ ಎನ್‌ಸಿಸಿ ಘಟಕದಲ್ಲಿ ಎನ್‌ಸಿಸಿಯ ಧ್ಯೇಯ, ಉದ್ದೇಶಗಳು ಸಾಕಾರಗೊಂಡಿವೆ. ಕೆಡೆಟ್‌ಗಳ ಸಾಧನೆ, ಶಿಸ್ತು, ನೈಪುಣ್ಯತೆಗಳು ಉನ್ನತ ಮಟ್ಟದಲ್ಲಿರುವ ಕಾರಣ 2ನೇ ಬಾರಿಗೆ ಡಿಡಿಜಿ ಕಮಾಂಡೇಶನ್ ಅವಾರ್ಡ್ ಲಭಿಸಿರುವುದ್ದನ್ನು ಪ್ರಶಂಸಿಸುವ ಮೂಲಕ ಇತ್ತೀಚಗೆ ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಳಗೇರಿ ಅವರಿಗೆ ಕಮಾಂಡಿಂಗ್ ಆಫೀಸರ್ ಕರ್ನಲ್ ರವಿ ಖಾಸನೀಸ್ ಅವರು ಪ್ರಶಸ್ತಿ ಪತ್ರ,ಪದಕ ಪ್ರಧಾನ ಮಾಡಿದರು.

ಕರ್ನಲ್ ರವಿ ಖಾಸನೀಸ್ ಅವರು ಮಾತನಾಡಿ, ‘ಎನ್‌ಸಿಸಿ ಯುವಶಕ್ತಿಯಲ್ಲಿ ಶಿಸ್ತು,ಧೈರ್ಯ,ಸಮರ್ಪಣಾ ಮನೋಭಾವ ಬೆಳೆಸಿ, ಯುವಕರನ್ನು ದೇಶ ಸೇವೆಗೆ ಸಿದ್ದಗೊಳಿಸುತ್ತದೆ. ಚಳಗೇರಿ ಅವರು ಎನ್‌ಸಿಸಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಕ್ಷಿತ್ ಶೆಟ್ಟಿ ಜೊತೆ ಬೇರೆ ಸಿನಿಮಾ ಮಾಡ್ದೇ ಇರೋಕೆ ಇದೇ ಕಾರಣ! Part -2

2019 ರಲ್ಲಿ ಎಸ್.ಬಿ. ಚಳಗೇರಿ ಅವರಿಗೆ ಡೈರೆಕ್ಟರ್ ಜನರಲ್ ಅಪ್ರಿಶಿಯೇಶನ್ ಅವಾರ್ಡ್ ಹಾಗೂ ವಿಎಂಎಸ್‌ಆರ್‌ವಿ ಕಾಲೇಜಿನ ಎನ್‌ಸಿಸಿ ಘಟಕಕ್ಕೆ ಬೆಸ್ಟ್ ಇನ್‌ಸ್ಟಿಟ್ಯೂಶನ್ ಅವಾರ್ಡ ಲಭಿಸಿತ್ತು.

Advertisement

2 ನೇ ಬಾರಿಗೆ ಡಿಡಿಜಿ ಕಮಾಂಡೇಶನ್ ಅವಾರ್ಡ್ಗೆ ಭಾಜನರಾದ ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ ಅವರನ್ನು ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ ಹಾಗೂ ಶಾಸಕರಾದ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಡಾ.ಮಹಾಂತೇಶ ಕಡಪಟ್ಟಿ, ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಪ್ರಾಚಾರ್ಯೆ ಪ್ರೊ.ಎಸ್.ಕೆ. ಮಠ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್.ಎಸ್. ಬೊಳಿಶೆಟ್ಟಿ, ಕಾಲೇಜಿನ ಸಿಬ್ಭಂದಿ, ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next