ನವದೆಹಲಿ : ಜಾಗತಿಕ ವೇದಿಕೆಗಳಲ್ಲಿ ವಿವಿಧ ಅಂತರಾಷ್ಟ್ರೀಯ ಬೆಳವಣಿಗೆಗಳ ಕುರಿತು ಭಾರತದ ದೃಷ್ಟಿಕೋನವನ್ನು ಮಂಡಿಸಲು ಮತ್ತು ಅದರ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರದರ್ಶಿಸಲು ಅಮೆರಿಕಾ , ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ದೂರದರ್ಶನ ಇಂಡಿಯಾ ಈಗ ತನ್ನ ವೀಕ್ಷಕರಿಗೆ ಓವರ್-ದಿ-ಟಾಪ್ (OTT) ವೇದಿಕೆಯ ಮೂಲಕ ಜಗತ್ತಿಗೆ ಲಭ್ಯವಿರುತ್ತದೆ ಎಂದು ಸರಕಾರ ಸೋಮವಾರ ಹೇಳಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಓಟಿಟಿ ಪ್ಲಾಟ್‌ಫಾರ್ಮ್ ವೇದಿಕೆ ಯುಪ್ಪ್ ಟಿವಿಯೊಂದಿಗೆ ಪ್ರಸಾರ ಭಾರತಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ದೂರದರ್ಶನದ ಡಿಡಿ ಇಂಡಿಯಾ ಚಾನೆಲ್‌ನ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುವ ಸಾರ್ವಜನಿಕ ಪ್ರಸಾರಕರ ದೃಷ್ಟಿಯ ಭಾಗವಾಗಿದೆ ಎಂದು ಹೇಳಿದೆ.
ದೂರದರ್ಶನ ವೀಕ್ಷಕರಿಗೆ ಒಂದು ಗೇಟ್‌ವೇ ಆಗಿರುವ ಅತಿ ಉನ್ನತ ‘Yupp TV’, ಪ್ಲಾಟ್‌ಫಾರ್ಮ್‌ನೊಂದಿಗೆ ಪ್ರಪಂಚದಾದ್ಯಂತ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಜಗತ್ತಿಗೆ ಪ್ರದರ್ಶಿಸಲು ಭಾರತದ ಸಾರ್ವಜನಿಕ ಪ್ರಸಾರಕ ಪ್ರಸಾರ ಭಾರತಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಿಕೆ ತಿಳಿಸಿದೆ.
ಇದರೊಂದಿಗೆ ಡಿಡಿ ಇಂಡಿಯಾ ಈಗ ಅಮೆರಿಕಾ , ಇಂಗ್ಲೆಂಡ್, ಯೂರೋಪ್, ಮಧ್ಯಪ್ರಾಚ್ಯ, ಸಿಂಗಾಪುರ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ OTT ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.