Advertisement

ಇಶಾ ಪಂಥ್‌ ವರ್ಗಾವಣೆ ರದ್ದು, ಮತ್ತೆ ವರ್ಗಾವಣೆ !

09:04 AM Mar 01, 2020 | sudhir |

ಬೆಂಗಳೂರು: ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್‌ ಅವರನ್ನು ನಾಲ್ಕು ದಿನಗಳ ಹಿಂದಷ್ಟೇ ಸಿಐಡಿಗೆ ವರ್ಗಾವಣೆ ಮಾಡಿದ್ದ ಸರ್ಕಾರ ಶನಿವಾರ ಬೆಳಗ್ಗೆ ಆದೇಶ ರದ್ದುಗೊಳಿಸಿತ್ತು. ಅದಾದ ಕೆಲ ಹೊತ್ತಿನಲ್ಲೇ ಮತ್ತೂಂದು ಆದೇಶ ಹೊರಡಿಸಿದ್ದು, ಅವರನ್ನು ಬೆಂಗಳೂರು ನಗರ ಕಮಾಂಡ್‌ ಸೆಂಟರ್‌ ಡಿಸಿಪಿಯಾಗಿ ವರ್ಗಾವಣೆಗೊಳಿಸಿದೆ.

Advertisement

ಫೆ.26ರಂದು ಇಶಾ ಪಂಥ್‌ ಅವರನ್ನು ಸಿಐಡಿಗೆ, ಜೋಶಿ ಶ್ರೀನಾಥ್‌ ಮಹದೇವ ಅವರನ್ನು ಆಗ್ನೇಯ ವಿಭಾಗ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಕೇವಲ ನಾಲ್ಕೆ ದಿನಗಳಲ್ಲಿ ಸರ್ಕಾರ ಮರು ಆದೇಶ ಹೊರಡಿಸಿದೆ.
ಈ ಮಧ್ಯೆ ಬೆಂಗಳೂರು ನಗರ ಕಮಾಂಡ್‌ ಸೆಂಟರ್‌ನ ಡಿಸಿಪಿಯಾಗಿದ್ದ ಜಿನೇಂದ್ರ ಖಣಗಾವಿ ಅವರನ್ನು ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ)ಗೆ ವರ್ಗಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next