Advertisement

ಲಕ್ಷ್ಮೀನಾರಾಯಣ ದೇಗುಲಕ್ಕೆ ಡಿಸಿಎಂ ಭೇಟಿ

05:21 PM Nov 28, 2019 | Suhan S |

ಕೆ.ಆರ್‌.ಪೇಟೆ: ತಾಲೂಕಿನ ಇತಿಹಾಸ ಪ್ರಸಿದ್ಧ ಹೊಸಹೊಳಲು ಗ್ರಾಮದ ಹೊಯ್ಸಳರ ಕಾಲದ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ದೇವಾಲಯದ ಶಿಲ್ಪಕಲಾ ವೈಭವಕ್ಕೆ ಮನಸೋತರು. ಹೊಸಹೊಳಲು ಶ್ರೀಲಕ್ಷ್ಮೀನಾರಾಯಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಗೆಲುವಿಗಾಗಿ ಪ್ರಾರ್ಥಿಸಿದರು.

Advertisement

ಪ್ರವಾಸಿ ಕೇಂದ್ರವಾಗಿಸಲು ಕ್ರಮ: ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಮಾತನಾಡಿ, ಶ್ರೀ ಲಕ್ಷ್ಮೀನಾರಾ ಯಣ ಸ್ವಾಮಿ ದೇವಸ್ಥಾನ ಪ್ರವಾಸಿಗರಿಂದ ದೂರ ಉಳಿದಿದೆ. ಅದಕ್ಕೆ ಮಾಹಿತಿ ಕೊರತೆಯೇ ಕಾರಣ. ದೇವ ಸ್ಥಾನದ ಅಭಿವೃದ್ಧಿಗೆ ಕ್ರಮ ಕೈಗೊಂಡು, ಪ್ರವಾಸಿ ಕೇಂದ್ರವಾಗಿಸಿ ಟೂರ್‌ ಗೈಡ್‌ ಮ್ಯಾಪಿನಲ್ಲಿ ಸೇರಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ವಿವಿಧ ದೇಗುಲಗಳ ಅಭಿವೃದ್ಧಿ: ತಾಲೂಕಿನಲ್ಲಿರುವ ಸುಪ್ರಸಿದ್ಧ ಹೊಯ್ಸಳ ದೇವಾಲಯಗಳಾದ ಕಿಕ್ಕೇ ರಿಯ ಶ್ರೀ ಬ್ರಹ್ಮೇಶ್ವರ ದೇವಾಲಯ, ಗೋವಿಂದನ ಹಳ್ಳಿಯ ಪಂಚಲಿಂಗೇಶ್ವರ ದೇವಾಲಯ, ಕಲ್ಲಹಳ್ಳಿಯ ಭೂವರಾಹನಾಥ ದೇವಾಲಯ ಮತ್ತು ಸಾಸಲು ಕ್ಷೇತ್ರದ ಶಂಭುಲಿಂಗೇಶ್ವರ, ಸೋಮೇ ಶ್ವರದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಹಾಗೂ ಮುಜುರಾಯಿ ಸಚಿ ವ ರಲ್ಲಿ ಮನವಿ ಮಾಡುತ್ತೇನೆ ಎಂದೂ ಹೇಳಿದರು.

ಇದೇ ಸಂದರ್ಭದಲ್ಲಿ ಹೊಸಹೊಳಲು ಗ್ರಾಮದಲ್ಲಿ ಮತಪ್ರಚಾರ ಮಾಡಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಪರ ಮತಯಾಚಿಸಿ, ಕೆಸಿಎನ್‌ ಅವರನ್ನು ಗೆಲ್ಲಿಸಿದರೆ ಮಂಡ್ಯ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next