Advertisement

30 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಡಿಸಿಎಂ ಚಾಲನೆ

11:53 AM Sep 02, 2019 | Team Udayavani |

ಮುಧೋಳ: ಪ್ರಧಾನಿ ನರೇಂದ್ರ ಮೋದಿ ಸಮರ್ಥ ಆಡಳಿತದಿಂದ ದೇಶ-ವಿದೇಶಗಳ ಜನರ ಮನ ಗೆದ್ದಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಮರ್ಥ ಆಡಳಿತದ ಮೂಲಕ ದೇಶದಲ್ಲಿಯೇ ಮಾದರಿ ಸರ್ಕಾರ ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ರವಿವಾರ ನಗರದ ಬಸವೇಶ್ವರ ವೃತ್ತದಲ್ಲಿ ರೂ.16.15 ಕೋಟಿ ವೆಚ್ಚದ ವಿಜಯಪುರ-ಬೆಳಗಾವಿ ಹೆದ್ದಾರಿ ಸುಧಾರಣೆ ಹಾಗೂ ನಗರದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಆವರು, ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೃಷ್ಣಾ ನದಿಯಿಂದ ವರ್ಷದ 12 ತಿಂಗಳೂ ನೀರು ದೊರಕುವ ಸ್ಥಳ ಗುರುತಿಸಲಾಗಿದೆ. ಈ ಯೋಜನೆಗೆ ರೂ.30 ಕೋಟಿ ಅಗತ್ಯವಿದ್ದು, ರೂ.21 ಕೋಟಿ ಲಭ್ಯವಿದೆ. ಇನ್ನುಳಿದ 9 ಕೋಟಿ ರೂ. ಮಂಜೂರಾತಿಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದುಂಬಾಲು ಬಿದ್ದಿದ್ದೆ. ಆದರೆ ಅವರು ಅದನ್ನು ಮಾಡಲಿಲ್ಲ. ಈಗ ಮಂಜೂರಾತಿಯೊಂದಿಗೆ ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

20 ಕೋಟಿ ವಿಶೇಷ ಅನುದಾನಕ್ಕೆ ಮಂಜೂರಾತಿ ಪಡೆದು ಮುಧೋಳ ನಗರವನ್ನು ಒಂದು ಮಾದರಿ ನಗರವನ್ನಾಗಿ ನಿರ್ಮಿಸುವ ಯೋಜನೆ ರೂಪಿಸಿದ್ದೇನೆ. ಮಳೆ ಪ್ರವಾಹದಿಂದ ರಾಜ್ಯದ 22 ಜಿಲ್ಲೆಗಳ 103 ತಾಲೂಕಿಗೆ ಸುಮಾರು ರೂ.30 ಸಾವಿರ ಕೋಟಿ ಹಣ ನಷ್ಠವಾಗಿದೆ. ಅದಕ್ಕಾಗಿ ವಿಳಂಬವಾಗಬಹುದು ಎಂದರು ಕನಕಗಿರಿ ಶಾಸಕ ಬಸವರಾಜ ದಢೇಸೂಗುರ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸದಸ್ಯರಾದ ರತ್ನಕ್ಕ ತಳೇವಾಡ, ಭೀಮನಗೌಡ ಪಾಟೀಲ, ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಕೆ.ಆರ್‌.ಮಾಚಪ್ಪನವರ, ಗುರುರಾಜ ಕಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next