ರಾಯಚೂರು: ಖಾತೆ ಬದಲಾವಣೆ ಮಾಡುವುದು ಸಹಜ ಪ್ರಕ್ರಿಯೆ. ಖಾತೆ ಬಗ್ಗೆ ಕೆಲವರಿಗೆ ಆಸಕ್ತಿ, ಹವ್ಯಾಸ ಇರುವುದರಿಂದ, ಹವ್ಯಾಸಕ್ಕೆ ಅನುಗುಣವಾಗಿ ಬೇಡಿಕೆಗಳು ಇಟ್ಟಿರುತ್ತಾರೆ. ಸಿಎಂ ಅದನ್ನು ಸರಿದೂಗಿಸುವ ಕೆಲಸ ಮಾಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವೂ ಸರಿಯಾಗಿದೆ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದರು.
ಇದನ್ನೂ ಓದಿ: ನಮ್ಮ ಶಕ್ತಿ ಪ್ರದರ್ಶನಕ್ಕೆ ಅವಕಾಶ ನೀಡಬೇಡಿ: ರೈತ ಮುಖಂಡ ಬಾಬಾಗೌಡ ಪಾಟೀಲ
ರೈತರ ದಾರಿ ತಪ್ಪಿಸುವ ಕಾರ್ಯವನ್ನು ಕೆಲವು ರಾಜಕೀಯ ಪಕ್ಷಗಳು ಮಾಡುತ್ತಿವೆ. ಮುಗ್ದ ರೈತರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇಂದು ನಡೆದ ರೈತರ ಟ್ರ್ಯಾಕ್ಟರ್ ರಾಲಿ ರಾಜಕೀಯ ಪ್ರೇರಿತ ಎಂದರು.
ಇದನ್ನೂ ಓದಿ: ಕೆಂಪುಕೋಟೆಗೆ ನುಗ್ಗಿದ ರೈತರು: ಪ್ರಧಾನಿ ಧ್ವಜಾರೋಹಣ ಮಾಡುವ ಸ್ಥಳದಲ್ಲಿ ರೈತರಿಂದ ಧ್ವಜಾರೋಹಣ!
ಶಾಲಾ ಕಾಲೇಜು ಆರಂಭಿಸಿದ್ದರಿಂದ ಗ್ರಾಮೀಣ ಭಾಗಕ್ಕೆ ಈ ಹಿಂದೆ ಸಂಚರಿಸುತ್ತಿದ್ದ ಮಾದರಿಯಲ್ಲಿಯೆ ಬಸ್ ಗಳನ್ನು ಓಡಿಸಲು ನಿರ್ದೇಶಿಸಲಾಗಿದೆ. ಬಸ್ ಪಾಸ್ ವಿತರಣೆ ಗೊಂದಲ ಆಗುತ್ತಿರುವ ಹಳೆಯ ಪಾಸ್ ಗಳನ್ನೇ ಪರಿಗಣಿಸಲು ಸೂಚಿಲಾಗಿದೆ ಎಂದರು.