Advertisement

ಬಿಮ್ಸ್ ಕೋವಿಡ್ ವಾರ್ಡ್ ಗೆ ಭೇಟಿ ನೀಡಿ ಸೋಂಕಿತರಿಗೆ ಧೈರ್ಯ ತುಂಬಿದ ಡಿಸಿಎಂ ಸವದಿ

10:55 AM May 29, 2021 | Team Udayavani |

ಬೆಳಗಾವಿ: ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಶನಿವಾರ ನಗರದಲ್ಲಿನ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.    ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್ ಗಳಿಗೆ ಭೇಟಿ ನೀಡಿದ ಅವರು ಕೋವಿಡ್ ಸೋಂಕಿತರನ್ನು ಮಾತನಾಡಿಸಿ ಧೈರ್ಯ ತುಂಬಿದರು.

Advertisement

ಚಿಕಿತ್ಸೆ ಉತ್ತಮ ಫಲಕಾರಿಯಾಗಿದ್ದು ಯಾರು ಎದೆಗುಂದಬಾರದು ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದರು. ಸೋಂಕಿತರಿಗೆ ಪೌಷ್ಟಿಕ ಆಹಾರ ಹಾಗೂ ಉತ್ತಮ ರೀತಿಯ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ:ಚಿತ್ರದುರ್ಗ: ಪತ್ನಿಗೆ ಕೋವಿಡ್ ಪಾಸಿಟಿವ್; ಹೆದರಿದ ಗಂಡ ನೇಣಿಗೆ ಶರಣು!

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ಬಿಮ್ಸ್ ನಿರ್ದೇಶಕ ಡಾ ವಿನಯ ದಾಸ್ತಿಕೊಪ್ಪ, ಆಸ್ಪತ್ರೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next