Advertisement
ಮಂಗಳವಾರ(ಮೇ. 18) ಎ ಎಸ್ ಸಿ ಕಮಾಂಡರ್ ಲೆಫ್ಟಿನೆಂಟ್ ಬಿ.ಕೆ.ರೆಸ್ ಪಾಸ್ ವಾಲ್ ಅವರೊಂದಿಗೆ ಚರ್ಚಿಸಿದ ಡಿಸಿಎಂ ಅಶ್ವತ್ಥನಾರಾಯಣ, ಎ ಎಸ್ ಸಿ ಸೆಂಟರ್ ನಲ್ಲಿ ಕೊನೆ ಪಕ್ಷ 500 ಬೆಡ್ ಗಳ ಕೋವಿಡ್ ಕೇಂದ್ರ ಸ್ಥಾಪನೆಯ ಪ್ತಸ್ತಾಪನೆಯನ್ನು ಮುಂದಿಟ್ಟರಲ್ಲದೆ, ಈ ಕೋವಿಡ್ ಕೇರ್‌ಗೆ ಅಗತ್ಯವಾದ ಮೂಲಸೌಕರ್ಯವನ್ನು ಸರಕಾರ ಒದಗಿಸಲಿದೆ. ಸೇನೆ ವತಿಯಿಂದ ವೈದ್ಯರು, ಸಿಬ್ಬಂದಿ ಮತ್ತು ಅರೆವೈದ್ಯ ಸಿಬ್ಬಂದಿಯನ್ನು ಒದಗಿಸುವಂತೆ ಕೋರಿದ್ದಾರೆ.
Related Articles
Advertisement
ಈ ಸಂದರ್ಭದಲ್ಲಿ ಎ ಎಸ್ ಸಿ ಕೇಂದ್ರದಲ್ಲಿ ಕೋವಿಡ್ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಲೆಫ್ಟಿನೆಂಟ್ ಬಿ.ಕೆ.ರೆಸ್ ಪಾಸ್ ವಾಲ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿದರಲ್ಲದೆ, ಆ ಸೌಲಭ್ಯಗಳನ್ನು ತೋರಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಡಿಸಿಎಂ ಕಾರ್ಯದರ್ಶಿ ಪ್ರದೀಪ್ ಪ್ರಭಾಕರ್, ಭಾರತ್ ಸ್ಕೌಟ್ಸ್ & ಗೈಡ್ಸ್‌ನ ರಾಜ್ಯ ಸರಕಾರದ ಸಲಹೆಗಾರರಾದ ಜಿ.ಎಂ.ಬಾಬು ಮುಂತಾದವರು ಇದ್ದರು.
ಇದನ್ನೂ ಓದಿ : ಭಾರತದ ವನಿತಾ ಕ್ರಿಕೆಟ್ ಆಟಗಾರ್ತಿ ಪ್ರಿಯಾ ಪೂನಿಯಾ ತಾಯಿ ಕೋವಿಡ್ ಗೆ ಬಲಿ!