ಬೇತಮಂಗಲ: ಡಿಸಿಸಿ ಬ್ಯಾಂಕ್‌ನಲ್ಲಿ ಲಕ್ಷಾಂತರ ರೂ. ಬಡ್ಡಿ ಹಣ ಕ್ಲೇಮ್ ಮಾಡುವುದು, ಫಲಾನು ಭವಿಗಳಿಗೆ ತಿಳಿಯದೆ ಸಾಲ ಪಡೆದಿರುವ ಘಟನೆಗಳು ಬೆಳಕಿಗೆ ಬರುತ್ತಿರುವುದು ಕಂಡರೆ ಬ್ಯಾಂಕ್‌ಸೂಪರ್ ಸೀಡ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ಮಾಜಿ ಶಾಸಕ ವೈ.ಸಂಪಂಗಿ ಆರೋಪಿಸಿದರು.
ಪಟ್ಟಣದ ಬಳಿಯ ಎನ್.ಜಿ.ಹುಲ್ಕೂರು ಗ್ರಾಪಂನಲ್ಲಿ “ನಮ್ಮ ನಡೆ ಹಳ್ಳಿ ಕಡೆ’ ಎಂಬ ಕಾರ್ಯಕ್ರಮದನ್ವಯ ಪಂತನಹಳ್ಳಿ, ಜೀಡಮಾಕನಹಳ್ಳಿ ಗ್ರಾಮಗಳಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದರು. ಡಿಸಿಸಿ ಬ್ಯಾಂಕ್‌ನಿಂದ ಈಗಾಗಲೇ ಸಾಲ ಪಡೆದಿರುವ ಪ್ರತಿಯೊಬ್ಬರ ಹೆಸರಲ್ಲಿ ತಲಾ 5 ಲಕ್ಷರೂ.ನಂತೆ ಜಿಲ್ಲೆಯಲ್ಲಿ 500 ರಿಂದ 600 ಕೋಟಿರೂ.ವರೆಗೆ ಸಾಲ ಕ್ಲೇಮ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಖಜಾನೆ ಖಾಲಿ ಮಾಡಿದ್ದಾರೆ: ಡಿಸಿಸಿ ಬ್ಯಾಂಕ್ ನಿಂದ ಬಡವರಿಗೆ, ಮಹಿಳೆಯರಿಗೆ ಸಾಲ ನೀಡುವಸಂದರ್ಭದಲ್ಲಿ ನೇರವಾಗಿ ಅವರ ಖಾತೆಗೆ ಹಣವರ್ಗಾಯಿಸದೇ ಮನೆಗೆ ತೆರಳಿ ಸಾಲದ ಹಣದಿಂದಮಡಿಲು ತುಂಬಿದರು. ಜನರು ಹಣವನ್ನು ಪಾವತಿ ಸುತ್ತಿಲ್ಲ, ಆದರೂ ಶೇ.100 ಪಾವತಿಸುತ್ತಿದ್ದಾರೆಎಂದು ನಂಬಿಸುತ್ತಿದ್ದಾರೆ. ವಾಸ್ತವಾಂಶ ಸಂಗತಿ ಏನೆಂ ದರೆ ಬ್ಯಾಂಕ್‌ನಲ್ಲಿ ಖಜಾನೆ ಖಾಲಿ ಮಾಡುತ್ತಿ ದ್ದಾರೆ. ಆದ್ದರಿಂದ ಬ್ಯಾಂಕ್ ಮುಳುಗುತ್ತಿರುವದೋಣಿಯಾಗಿದೆ ಎಂದು ಆರೋಪಿಸಿದರು.
10 ಸಾವಿರ ಮನೆ ಮಂಜೂರು: ತಮ್ಮ ಅಧಿಕಾರ ಅವಧಿಯಲ್ಲಿ ಕ್ಷೇತ್ರಕ್ಕೆ 10 ಸಾವಿರ ಮನೆಗಳನ್ನು ಮಂಜೂರು ಮಾಡಿದ್ದೇನೆ. ತಾಯಿ ರಾಮಕ್ಕಅವಧಿಯಲ್ಲಿಯೂ ಸಾವಿರಾರು ಮನೆಗಳುಮಂಜೂರು ಮಾಡಲಾಗಿದೆ. ಹಳ್ಳಿಗಳಲ್ಲಿಕುಡಿಯುವ ನೀರು, ವಿದ್ಯುತ್ ಸಬ್‌ಸ್ಟೇಷನ್,ಐಮಾಸ್ಟ್ ದ್ವೀಪ, ಕಾಂಕ್ರೀಟ್ ರಸ್ತೆ, ಡಾಂಬರೀಕರಣಕಾಮಗಾರಿಗಳನ್ನು ಮಾಡಿದ್ದೇನೆ ಎಂದು ವಿವರಿಸಿದರು.
ವಿಶೇಷ ಅನುದಾನ ತಂದು ಅಭಿವೃದ್ಧಿ: ತಾವು ಅಧಿಕಾರದಲ್ಲಿ ಇಲ್ಲದಿದ್ದರೂ ಬೂತ್ ಮಟ್ಟದಲ್ಲಿ ಸಭೆ ನಡೆಸಿ ಮೂಲ ಸೌಕರ್ಯಗಳ ಬಗ್ಗೆ ಮತ್ತು ಕುಂದು ಕೊರತೆ ಆಲಿಸಿ ಸಂಬಂಧಿಸಿದ ಇಲಾಖೆಯ ಸಚಿವರನ್ನು ಭೇಟಿ ಮಾಡಿ ವಿಶೇಷ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದು ಹೇಳಿದರು.
ಈಗಾಗಲೇ ಸ್ಮಶಾನ ಅಭಿವೃದ್ಧಿಗೆ 1 ಕೋಟಿ ರೂ.ಗೂ ಹೆಚ್ಚು ಅನುದಾನ ತಂದಿದ್ದೇನೆ. ಇದೀಗ ಮತ್ತೆ 4 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲೇಕಾಂಕ್ರೀಟ್ ರಸ್ತೆಗಳು ಪ್ರಾರಂಭಗೊಳ್ಳಲಿವೆ ಎಂದು ವಿವರಿಸಿದರು.
ಗ್ರಾಪಂ ಅಧ್ಯಕ್ಷ ಸುನೀಲ್, ಪಾರಂಡಹಳ್ಳಿ ದಶರಥ ರೆಡ್ಡಿ, ಕ್ಯಾಸಂಬಳ್ಳಿ ಜಗದಭಿರಾಮ್,ಹಂಗಳ ರಮೇಶ್, ಮಾಜಿ ಅಧ್ಯಕ್ಷ ಮುರಳಿ,ಮುನಿಯಪ್ಪ, ಮುಖಂಡರಾದ ಕಮ್ಮಸಂದ್ರ ಕುಮಾರ್, ಗೋಪೇನಹಳ್ಳಿ ಮುನಿಯಪ್ಪ,ಅಂಬರೀಶ್, ಲೋಕನಾಥ್, ಪುರುಷೋತ್ತಮ್,ಪ್ರಸಾದ, ನಾರಾಯಣಸ್ವಾಮಿ, ಲೋಕನಾಯ್ಡು,ಮಂಜುನಾಥ್, ಶ್ರೀನಿವಾಸ, ಜೀಡಮಾಕನಹಳ್ಳಿಆಂಜಿ, ಸುಧಾಕರ್, ಶ್ಯಾಮಲಮ್ಮ, ಹಲವು ಕಾರ್ಯಕರ್ತರು ಇದ್ದರು.