Advertisement

ಗ್ರಾಮೀಣರ ಆಶಾಕಿರಣ ಡಿಸಿಸಿ ಬ್ಯಾಂಕ್‌

04:15 PM Nov 03, 2020 | Suhan S |

ಬಂಗಾರಪೇಟೆ: ಕಳೆದ ಏಳೆಂಟು ತಿಂಗಳಿಂದ ಕೋವಿಡ್ ದಿಂದ ಕೆಂಗೆಟ್ಟಿರುವ ಗ್ರಾಮೀಣ ಮಹಿಳೆಯರ ಹಾಗೂ ರೈತರ ಆಶಾಕಿರಣವಾಗಿ ಸಾಲ ನೀಡಿ ರೈತರು ಹಾಗೂ ಮಹಿಳಾ ಸಂಘಗಳು ಆರ್ಥಿಕವಾಗಿ ಮುಂದುವರಿಯಲು ಡಿಸಿಸಿ ಬ್ಯಾಂಕ್‌ ಶ್ರಮಿಸುತ್ತಿದೆ ಎಂದು ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ನೀಲಕಂಠೇಗೌಡ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಡಿಸಿಸಿ ಬ್ಯಾಂಕ್‌ ಆವರಣದಲ್ಲಿ ಅಪೇಕ್ಸ್‌ ಬ್ಯಾಂಕ್‌ ವತಿಯಿಂದ ತಾಲೂಕಿನ ಎಲ್ಲಾ ವಿಎಸ್‌ಎಸ್‌ ಎನ್‌ ಸಂಘಗಳಿಗೆ ಉಚಿತವಾಗಿ ಕಂಪ್ಯೂಟರ್‌ ವಿತರಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಡಿಸಿಸಿ ಬ್ಯಾಂಕ್‌ ಎಂದರೆ ಮೂಗು ಮುರಿಯು ವಂತಹ ವಾತಾವರಣ ನಿರ್ಮಾಣವಾಗಿತ್ತು. ಆದರೆ ಬ್ಯಾಂಕ್‌ನ ಸಾರಥ್ಯ ಅಧ್ಯಕ್ಷ ಗೋವಿಂದಗೌಡ ವಹಿಸಿಕೊಂಡಬಳಿಕ ವಾತಾವರಣ ಬದಲಾಗಿದೆ ಎಂದರು.

ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ರೈತರನೆರವಿಗೆ ಧಾವಿಸಿಲ್ಲ, ಆದರೆ ಡಿಸಿಸಿ ಬ್ಯಾಂಕ್‌ ಮಾತ್ರ ತಾಲೂಕಿನಲ್ಲೇ ನೂರಾರು ಕೋಟಿ ಸಾಲ ನೀಡಿದೆ. ವ್ಯವಹಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಂತೆ ಎಲ್ಲವೂ ಪಾರದರ್ಶಕವಾಗಿರ  ಬೇಕೆಂಬ ಉದ್ದೇಶದಿಂದ ವಿಎಸ್‌ಎಸ್‌ಎನ್‌ ಸಂಘಗಳಿಗೂ ಉಚಿತವಾಗಿ ಕಂಪ್ಯೂಟರ್‌ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ಚಂದ್ರಶೇಖರ್‌ಮಾತನಾಡಿ, ರೈತರು ತಮ್ಮ ಎಲ್ಲಾ ವ್ಯವಹಾರಗಳನ್ನು ಡಿಸಿಸಿ ಬ್ಯಾಂಕ್‌ನಲ್ಲೇ ನಡೆಸಿದರೆ ರಾಷ್ಟ್ರೀಕೃತ ಬ್ಯಾಂಕ್‌ ನಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೋವಿಂದರಾಜು, ವಿಎಸ್‌ಎಸ್‌ಎನ್‌ಗಳ ಕಾರ್ಯದರ್ಶಿಗಳಾದ ಬೂದಿಕೋಟೆ ಚಂದ್ರಶೇಖರ್‌ಗೌಡ, ಹುಲಿಬೆಲೆ ರಾಮಪ್ಪ, ದಿನ್ನೂರು ಮುನಿಯಪ್ಪ, ಕಾಮಸಮುದ್ರ ಕೋದಂಡಪ್ಪ ಹಾಜರಿದ್ದರು.

Advertisement

ಕನ್ನಡ ಭಾಷೆಗೆ ಅಗ್ರಸ್ಥಾನ ನೀಡಿ: ಶ್ರೀನಿವಾಸ್‌ :

ಶ್ರೀನಿವಾಸಪುರ: ನಮ್ಮದು ವಿಶಾಲ ಕರ್ನಾಟಕವಾಗಿದೆ. ಇಲ್ಲಿ ಎಲ್ಲಾ ಜಾತಿ ಧರ್ಮಗಳು ಎಲ್ಲಾ ಭಾಷೆಗಳನ್ನು ಗೌರವಿಸುವಂತಹ ಈ ನೆಲದಲ್ಲಿ ಹುಟ್ಟಿದ ಎಲ್ಲರು ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವ ಮೂಲಕ ಇತರೆ ಜನರನ್ನು ಪ್ರೀತಿಯಿಂದ ಕಾಣಬೇಕೆಂದು ರಾಷ್ಟ್ರೀಯ ಹಬ್ಬಗಳಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ತಿಳಿಸಿದರು.

ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜುಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿದ ನಂತರ ಕನ್ನಡ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮಾತೃ ಭಾಷೆ, ಹಾಡು ಭಾಷೆ , ರಾಜ್ಯದ

ಭಾಷೆ ಕನ್ನಡಮಯವಾಗಿ ಎಲ್ಲೆಲ್ಲೂ ಕನ್ನಡ ಕಂಪು ಹರಡಲಿ. ಅದೇ ರೀತಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮೂಲಕ ಗಡಿ ಭಾಗಗಳಲ್ಲಿ ಕನ್ನಡ ಪಸರಿಸಬೇಕು. ಈನಿಟ್ಟಿನಲ್ಲಿ ನಮ್ಮ ನಿಮ್ಮ ಸಹಕಾರ ಅಗತ್ಯವೆಂದು ಅಭಿಪ್ರಾಯಿಸಿದರು.

ತಾಪಂ ಇಒ ಎಸ್‌.ಆನಂದ್‌, ಸಹಾಯಕ ನಿರ್ದೇಶಕ ರಾಮಪ್ಪ, ಬಿಇಒ ಉಮಾ ದೇವಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್‌, ಬಾಲಕಿಯರ ಕಾಲೇಜು ಉಪ ಪ್ರಾಂಶು  ಪಾಲ ಶ್ರೀಧರ್‌, ಸಹ ಪ್ರಾಧ್ಯಾಪಕ ಆರ್‌.ಸುಬ್ರಹ್ಮಣಿ, ಎಸ್‌ಡಿಎಂಸಿ ಅಧ್ಯಕ್ಷ ಕುವ್ವಣ್ಣ, ಕಸಬಾ ರಾಜಸ್ವ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next