Advertisement
ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಶನಿವಾರ ಅಭ್ಯರ್ಥಿಗಳು ಸರದಿಯಲ್ಲಿ ನಿಂತು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರಸಲ್ಲಿಸಿದರು. ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ವೇಳೆ ಶಾಸಕರು, ಮಾಜಿ ಶಾಸಕರುಹಾಜರಿದ್ದು, ಬೆಂಬಲಿಸಿದರು. ಹೀಗಾಗಿ ಶನಿವಾರ ಇಡೀ ದಿನ ಬ್ಯಾಂಕ್ ಆವರಣಜನ ಜಂಗುಳಿಯಿಂದ ಕೂಡಿತ್ತು. ಒಬ್ಬೊಬ್ಬ ಅಭ್ಯರ್ಥಿಗಳು ಎರಡ್ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದರಿಂದ ಒಟ್ಟಾರೆ 42 ನಾಮಪತ್ರಗಳು ಸಲ್ಲಿಕೆಯಾಗಿವೆ.
Related Articles
Advertisement
ಚಿಂಚೋಳಿ ತಾಲೂಕಿನಿಂದ ಹಾಲಿ ನಿರ್ದೇಶಕ ಗೌತಮ ವೈಜನಾಥ ಪಾಟೀಲ, ಶೈಲೇಶಕುಮಾರ ಪ್ರಭುಲಿಂಗ ಹುಲಿ ನಾಮಪತ್ರ ಸಲ್ಲಿಸಿದ್ದಾರೆ. ಅಫಜಲಪುರ ತಾಲೂಕಿನಿಂದ ಮಹಾಂತಗೌಡ ಸಿದ್ದಣ್ಣಗೌಡ ಪಾಟೀಲ (ಎಸ್.ವೈ. ಪಾಟೀಲ ಪುತ್ರ) ಹಾಗೂ ಸೋಮನಾಥ ಶರಣಪ್ಪ ನೂಲಾ ನಾಮಪತ್ರ ಸಲ್ಲಿಸಿದ್ದು, ಚಿತ್ತಾಪುರ ತಾಲೂಕಿನಿಂದ ಬಸವರಾಜ ಅಣ್ಣಾರಾವ ಪಾಟೀಲ ಹೇರೂರ, ಭೀಮರೆಡ್ಡಿ ಮಲ್ಲಣ್ಣಗೌಡ ಕುರಾಳ ನಾಮಪತ್ರ ಸಲ್ಲಿಸಿದ್ದಾರೆ. ಸೇಡಂ ತಾಲೂಕಿನಿಂದ ಬಿ. ನಂದಕಿಶೋರ ರೆಡ್ಡಿ ಜನಾರ್ಧನರೆಡ್ಡಿ ಮಾತ್ರನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಯಾದಗಿರಿ ತಾಲೂಕಿನಿಂದ ಮಲ್ಲಿಕಾರ್ಜುನ ರೆಡ್ಡಿ ಕೌಳುರ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇವರು ಅವಿರೋಧವಾಗಿ ಪುನರಾಯ್ಕೆಯಾಗಲಿದ್ದಾರೆ. ಶಹಾಪುರ ತಾಲೂಕಿನಿಂದ ಹಾಲಿ ನಿರ್ದೇಶಕ ಸಿದ್ರಾಮರೆಡ್ಡಿ ವಿ. ಪಾಟೀಲ ಹಾಗೂ ಗುರುನಾಥರೆಡ್ಡಿ ಪರ್ವತರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. ಸುರಪುರ ತಾಲೂಕಿನಿಂದ ಹಾಲಿ ನಿರ್ದೇಶಕ ಬಾಪುಗೌಡ ದುಂಡಪ್ಪಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇವರೂ ಪುನರಾಯ್ಕೆಯಾಗಲಿದ್ದಾರೆ.
ಟಿಎಪಿಸಿಎಂ ಕ್ಷೇತ್ರದಿಂದ ಅಫಜಲಪುರ ತಾಲೂಕಿನಿಂದ ಶಿವಾನಂದ ಮಾನಕರ ಹಾಗೂ ಶಿವಮಾಂತಪ್ಪ ಹಣಮಂತರಾಯ ಶಹಾಪುರ ತಾಲೂಕಿನಿಂದ ಹಾಗೂ ಮಹ್ಮದ ಇಬ್ರಾಹಿಂ ಶಿರವಾಳ ನಾಮಪತ್ರ ಸಲ್ಲಿಸಿದ್ದಾರೆ. ಪಟ್ಟಣ ಸಹಕಾರಿ ಸಂಘಗಳ ಕ್ಷೇತ್ರದಿಂದ ಹಾಲಿ ನಿರ್ದೇಶಕ ಸೋಮಶೇಖರ ಗೋನಾಯಕ ಹಾಗೂ ಸಾವಿತ್ರಿ ಶಿವಶರಣಪ್ಪ ಕುಳಗೇರಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನುಳಿದಂತೆ ಇತರೆ ಸಹಕಾರಿ ಸಂಸ್ಥೆಗಳಿಂದಸುರೇಶ ಸಜ್ಜನ, ಬಸವರಾಜ ಮಲ್ಲಪ್ಪ ಪೂಜಾರಿ ಕೂಟನೂರ, ಹಾಗೂ ಗುರುಬಸಪ್ಪ ಮಲ್ಲಿಕಾರ್ಜುನ ಪಾಟೀಲ್,ಕಲ್ಯಾಣಪ್ಪ ಶಿವಶರಣಪ್ಪ ಜೇವರ್ಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಲ್ವರು ಅವಿರೋಧಾಯ್ಕೆ: ಎಲ್ಲರೂ ಕಾಂಗ್ರೆಸ್ಸಿಗರು : ಯಾದಗಿರಿ ತಾಲೂಕಿನಿಂದ ಹಾಲಿ ನಿರ್ದೇಶಕ, ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಕೌಳುರ, ಸೇಡಂ ತಾಲೂಕಿನಿಂದ ಬಿ. ನಂದಕಿಶೋರ ರೆಡ್ಡಿ ಜನಾರ್ಧನರೆಡ್ಡಿ, ಅಫಜಲಪುರ ತಾಲೂಕಿನಿಂದ ಮಹಾಂತಗೌಡ ಸಿದ್ದಣ್ಣಗೌಡ ಪಾಟೀಲ ಹಾಗೂ ಸುರಪುರ ತಾಲೂಕಿನಿಂದ ಹಾಲಿ ನಿರ್ದೇಶಕ ಬಾಪುಗೌಡ ದುಂಡಪ್ಪಗೌಡ ಅವಿರೋಧವಾಗಿ ಆಯ್ಕೆಯಾಗಲಿದ್ದು, ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ. ಈ ನಾಲ್ವರೂ ಕಾಂಗ್ರೆಸ್‌ನವರಾಗಿದ್ದಾರೆ. ಒಟ್ಟಾರೆ 13 ನಿರ್ದೇಶಕ ಸ್ಥಾನಗಳಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನ ಪಡೆದಂತಾಗಿದೆ.