Advertisement
ನಗರದ ಸ್ಕೌಟ್ ಭವನದಲ್ಲಿ ಬುಧವಾರ ಕರ್ನಾಟಕರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಆಯೋಜಿಸಿದ್ದ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನಸಹಕಾರ ಸಂಘಗಳ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಜಾಗ ಮಂಜೂರು: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಪ್ರಾಸ್ತಾವಿಕವಾಗಿ ಮಾತನಾಡಿ,ಮುಳಬಾಗಿಲಿನ ದಿ.ಆಲಂಗೂರು ಶ್ರೀನಿವಾಸ್ ಅವರುಸಚಿವರಾಗಿದ್ದ ಸಂದರ್ಭದಲ್ಲಿ ಸಹಕಾರ ಭವನಕ್ಕೆ 11ಸಾವಿರ ಚದರ ಅಡಿ ಜಾಗ ಮಂಜೂರು ಮಾಡಿದ್ದು,ಅಲ್ಲಿ ತರಬೇತಿ ಕೇಂದ್ರ, ಸಹಕಾರ ಭವನ ನಿರ್ಮಿಸಲುಅಗತ್ಯ ಅನುದಾನ ನೀಡಲು ಮನವಿ ಮಾಡಿದರು.ಕ್ರಿಯಾ ಯೋಜನೆ ಮಂಜೂರು: ಆಲಂಗೂರು ಶ್ರೀನಿವಾಸ್, ಶ್ರೀನಿವಾಸಗೌಡರು ಹಾಗೂದೇವೇಗೌಡರ ಸಹಕಾರ, ಯೂನಿಯನ್ ಅಧ್ಯಕ್ಷ ಮೂರಂಡಹಳ್ಳಿ ಗೋಪಾಲ್, ಯೂನಿಯನ್ ಕಟ್ಟಡದದುರಸ್ತಿಗೆ 24 ಲಕ್ಷ ರೂ. ಕ್ರಿಯಾ ಯೋಜನೆಯನ್ನುರೂಪಿಸಿರುವುದನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀನಿವಾಸಗೌಡರು ಫ್ಯಾಕ್ಸ್‌ಸಿಬ್ಬಂದಿಗಳಿಗೆ ವಿಮಾ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ5 ಲಕ್ಷ ರೂ.ವರೆಗೆ ಆರೋಗ್ಯ ವಿಮೆಯ ಬಾಂಡ್ ಅನ್ನುಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕನಿರ್ದೇಶಕ ಎಸ್.ಎನ್.ಅರುಣ್‌ಕುಮಾರ್ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಸ್ವಾಗತಿಸಿ, ಅರುಣಮ್ಮ ಪ್ರಾರ್ಥಿಸಿದರು.
ವೇದಿಕೆಯಲ್ಲಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಯೂನಿಯನ್ ನಿರ್ದೇಶಕರಾದ ಅ.ಮು.ಲಕ್ಷ್ಮೀನಾರಾಯಣ್, ಚೆಂಜಿಮಲೆ ರಮೇಶ್, ಎಸ್.ವಿ.ಗೋವರ್ಧನ ರೆಡ್ಡಿ, ಡಿ.ಆರ್. ರಾಮಚಂದ್ರೇಗೌಡ, ವಿ.ರಘುಪತಿರೆಡ್ಡಿ, ಪಿ.ಎಂ.ವೆಂಕಟೇಶ್, ಎನ್.ವೆಂಕಟೇಶ್, ಕೆ.ಎಂ.ವಿ.ಮಂಜುನಾಥ್, ಸಲಹೆಗಾರಶೇಖ್ ಮಹಮದ್, ಮುಂತಾದವರು ಹಾಜರಿದ್ದರು.ಇದಕ್ಕೂ ಮುನ್ನ ಸ್ವಸಹಾಯ ಗುಂಪುಗಳ ರಚನೆಜವಾಬ್ದಾರಿ ಮತ್ತು ಹಣಕಾಸಿನ ನೆರವು ಕುರಿತು ಅಪೆಕ್ಸ್‌ಬ್ಯಾಂಕಿನ ನಿವೃತ್ತ ಹಿರಿಯ ವ್ಯವಸ್ಥಾಪಕ ಎಚ್.ಎಸ್.ಸತೀಶ್, ಸರ್ಕಾರದ ವಿವಿಧ ಯೋಜನೆ ಬಡ್ಡಿ ಬಿಲ್ಲುಸಿದ್ಧಪಡೆಸುವ ಕುರಿತು ಎಸ್. ಜಿ.ಕುಲಕರ್ಣಿ ತರಬೇತಿ ನೀಡಿದರು.