Advertisement

ಡಿಸಿಸಿ ಬ್ಯಾಂಕ್‌ ತಂಡಕ್ಕೆ ಅಹವಾಲು ಸಲ್ಲಿಸಿ : ಅಧ್ಯಕ್ಷರ ಸೂಚನೆ

03:39 PM Dec 30, 2021 | Team Udayavani |

ಕೋಲಾರ : ತಾಲೂಕಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಸಮಗ್ರ ಪರಿಶೀಲನೆಗೆ ಡಿ.30 ರಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕರ ತಂಡ ಹೊರಟಿದ್ದು, ಆಯಾ ಸಹಕಾರ ಸಂಘಗಳ
ವ್ಯಾಪ್ತಿಯಲ್ಲಿನ ರೈತರು, ಮಹಿಳೆಯರು ಸಾಲ ನೀಡಿಕೆಯಲ್ಲಿ ವಿಳಂಬ, ಸಾಲ ಸಿಗದಿರುವುದು ಮತ್ತಿತರ ಸಮಸ್ಯೆಗಳ ಕುರಿತು ಗಮನಕ್ಕೆ ತರುವಂತೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ
ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಯಾವ ಸೊಸೈಟಿಗೆ ಯಾವತ್ತು ಬರುತ್ತೇವೆ ಎಂಬ ಮಾಹಿತಿ ಹಂಚಿಕೊಂಡು, ಈ ಭಾಗದ ರೈತರು, ತಾಯಂದಿರು ಬ್ಯಾಂಕಿಂಗ್‌ ವಹಿವಾಟು, ಸಾಲ ವಿತರಣೆಯಲ್ಲಿ ಯಾವುದೇ ಲೋಪವಿದ್ದರೂ ತಮ್ಮ ಗಮನಕ್ಕೆ ತರಲು ಮನವಿ ಮಾಡಿದರು. ಅಹವಾಲು ಸಲ್ಲಿಸಿ: ಸಹಕಾರ ರಂಗವನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ ನಡೆಸಿದ್ದು, ಸಹಕಾರ ಸಂಘದಿಂದ ಸೌಲಭ್ಯ ಸಿಗದೇ ವಂಚಿತರಾದ ರೈತರು, ತಾಯಂದಿರು ತಮ್ಮ ಅಹವಾಲು ಸಲ್ಲಿಸಬಹುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣದ ಪ್ರಗತಿ ಪರಿಶೀಲನೆ, ಠೇವಣಿ ಸಂಗ್ರಹಣೆ, ಸದಸ್ಯರಿಂದ ಸಂಘಕ್ಕೆ ಸಾಲ ವಸೂಲಾತಿ ಪ್ರಗತಿ ಪರಿಶೀಲನೆ, ಸಹಕಾರ ಸಂಘಗಳ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

ಪರಿಶೀಲನೆ: ಈ ಸಂದರ್ಭದಲ್ಲಿ ಸೊಸೈಟಿಗಳ ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರು ಹಾಜರಿದ್ದು, ಪ್ಯಾಕ್ಸ್‌ನ ಪ್ರಗತಿ ಪರಿಶೀಲನೆಗೆ ಸಹಕಾರ ನೀಡುವಂತೆ ಕೋರಿದರು. ಅಲ್ಲದೇ,
ತಮ್ಮ ನೇತೃತ್ವದಲ್ಲಿ ಬ್ಯಾಂಕಿನ ಕೋಲಾರ ತಾಲೂಕು ನಿರ್ದೇಶಕರಾದ ವಿಧಾನಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌, ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್‌, ಯಲವಾರ
ಸೊಣ್ಣೇಗೌಡ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿರುವ ತಂಡ ಪ್ಯಾಕ್ಸ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.

ಇದನ್ನೂ ಓದಿ : ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 23 ಕೂಲಿ ಕಾರ್ಮಿಕರಲ್ಲಿ ಕೋವಿಡ್ ಸೋಂಕು

ದೇಶದಲ್ಲೇ ಮೊದಲು: ಸಹಕಾರ ಸಂಘಗಳ ಗಣಕೀಕರಣದ ಮೂಲಕ ಪಾರದರ್ಶಕತೆಗೆ ಅವಕಾಶ ಕಲ್ಪಿಸಿ, ರೈತರು, ಮಹಿಳೆಯರ ನಂಬಿಕೆ ಗಟ್ಟಿಗೊಳಿಸುವ ಪ್ರಯತ್ನ ದೇಶದಲ್ಲೇ ಮೊದಲು
ಎನ್ನುವಂತೆ ಕೈಗೊಂಡಿದ್ದೇವೆ. ಆದರೆ ಪ್ಯಾಕ್ಸ್‌ಗಳು ಇದರ ಅಳವಡಿಕೆಗೆ ತೋರುತ್ತಿರುವ ಉತ್ಸಾಹ ತೃಪ್ತಿದಾಯಕವಾಗಿಸಲು ಈ ಭೇಟಿ ಎಂದು ಸ್ಪಷ್ಟಪಡಿಸಿದರು.

Advertisement

ಗಣಕೀಕರಣ, ಇ-ಶಕ್ತಿ ಅನುಷ್ಠಾನ, ವಿವಿಧೋದ್ದೇಶ ಸೇವಾ ಕೇಂದ್ರಗಳ ಸ್ಥಾಪನೆಗೆ ಆಡಳಿತ ಮಂಡಳಿಗೆ ಸಲಹೆ ನೀಡುವುದು ಮತ್ತಿತರ ಅಂಶಗಳ ಕುರಿತು ಚರ್ಚಿಸಿ ಸಹಕಾರ ರಂಗದಲ್ಲಿ ಸಮಾಜದ ಕಟ್ಟಕಡೆ ವ್ಯಕ್ತಿಯೂ ಭಾಗಿಯಾಗುವಂತೆ ಮಾಡುವ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next