Advertisement

ಡಿಸಿಸಿ ಬ್ಯಾಂಕ್‌ಗೆ 12.5 ಕೋ. ಷೇರು ಸಂಗ್ರಹಿಸಿ

04:46 PM Mar 12, 2017 | Team Udayavani |

ಕೋಲಾರ: ಕ್ಯಾಪಿಟಲ್‌ ರಿಸ್ಕ್ ವೈಟೆಡ್‌ ಅಸೆಟ್ಸ್‌ (ಸಿಆರ್‌ಎಆರ್‌) ಶೇ.9ಕ್ಕೇರಲೇ ಬೇಕಿರುವುದರಿಂದ ಮಾರ್ಚ್‌ ಅಂತ್ಯ ದೊಳಗೆ 12.5 ಕೋಟಿ ರೂ ಷೇರು ಬಂಡವಾಳ ಸಂಗ್ರಹಣೆಗೆ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಕೋಲಾರ -ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕಿನ ಸಿಬ್ಬಂದಿಗೆ ಕರೆ ನೀಡಿದರು. ಶನಿವಾರ ಜಿಲ್ಲಾ ಸಹಕಾರಿ ಯೂನಿ ಯನ್‌ ಸಭಾಂಗಣದಲ್ಲಿ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಸಿಎಆರ್‌ ಏರಿಕೆ ಅನಿವಾರ್ಯ: ಬಂಡ ವಾಳಕ್ಕೆ ಅಪಾಯದ ಅಂಚಿನಲ್ಲಿರುವ ಆಸ್ತಿಗಳ (ಸಿಆರ್‌ಎಆರ್‌) ಪ್ರಮಾಣ ಶೇ.9 ತಲುಪಲೇಬೇಕು, ಇದಕ್ಕಾಗಿ ಷೇರು ಬಂಡ ವಾಳ ಏರಿಕೆ ಅನಿವಾರ್ಯ ಎಂದರು. ಕಳೆದ 3 ವರ್ಷಗಳಿಂದ ಬ್ಯಾಂಕನ್ನು ಸಂಕಷ್ಟದಿಂದ ಪಾರು ಮಾಡಿ ಮೇಲೆತ್ತಿ ದ್ದೇವೆ, ಇದೀಗ ಮತ್ತೆ ಉಳಿಸಿ ಬೆಳೆಸುವ ಹೊಣೆ ಸಿಬ್ಬಂದಿಯ ಮೇಲಿದೆ ಎಂದರು. ಬಂಡವಾಳ ಅಪಾಯದ ಅಂಚಿನಲ್ಲಿ ರುವ ಆಸ್ತಿಗಳ ಪ್ರಮಾಣ ಶೇ.9ಕ್ಕೇರದಿ ದ್ದರೆ ನಬಾರ್ಡ್‌ ಮರು ಸಾಲ ಕೊಡುವುದಿಲ್ಲ, ಬ್ಯಾಂಕ್‌ ಲೈಸೆನ್ಸ್‌ ಸಹಾ ಮುಂದು ವರಿಯುವುದಿಲ್ಲ ಎಂದರು.

ಅವಧಿ ಮೀರಿದ ಚಿನ್ನ ಹರಾಜು ಮಾಡಿ: ಬ್ಯಾಂಕ್‌ನಲ್ಲಿ ಇರುವ ಅವಧಿ ಮೀರಿದ ಚಿನ್ನವನ್ನು ಹರಾಜು ಮಾಡಬೇಕು. ಸುಸ್ತಿ ಆಗಿರುವ ಸಾಲದ ಖಾತೆಗೆ ಬಡ್ಡಿ ಕಟ್ಟಿಸಿಕೊಂಡು ಮರು ಸಾಲ ಪಾವತಿ ಮಾಡ ಬೇಕು ಹಾಗಾದಾಗ ಬ್ಯಾಂಕ್‌ ಮೇಲೆ ಒತ್ತಡ ಕಡಿಮೆ ಆಗುತ್ತದೆ ಎಂದು ತಿಳಿಸಿದರು.

ಬ್ಯಾಂಕ್‌ ಸುಭದ್ರವಾಗಿದೆ: ನೋಟು ಅಮಾನ್ಯಿàಕರಣದ ನಂತರ ದೇಶದ 537 ಸಹಕಾರಿ ಬ್ಯಾಂಕುಗಳು ಆತಂಕದಲ್ಲಿ ದ್ದರೂ, ಕೋಲಾರ ಡಿಸಿಸಿ ಬ್ಯಾಂಕ್‌ ಆರ್ಥಿಕವಾಗಿ ಸದೃಢತೆ ಹೊಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದೇ ಸ್ಥಿತಿ ಮುಂದುವರಿಯಲು ಸಿಬ್ಬಂದಿ ಬದ್ಧತೆ ಯಿಂದ ಕೆಲಸ ಮಾಡಿ ಎಂದರು.

ಯುಗಾದಿ ಹೊರತು ಬೇರೆ ರಜೆ ಇಲ್ಲ: ಪ್ರಸಕ್ತ ಸಾಲಿನ ಯಾವುದೇ ಕೆಲಸಗಳು ಬಾಕಿ ಇರದಂತೆ ಪೂರ್ಣಗೊಳಿಸಬೇಕು. ಎಲ್ಲಾ ಸಿಬ್ಬಂದಿಗಳಿಗೂ ಯುಗಾದಿ ಹಬ್ಬ ಹೊರತು ಪಡಿಸಿ ಯಾವುದೇ ಕಾರಣಕ್ಕೂ ರಜೆ ನೀಡಲಾಗದು ಎಂದರು. ನಿಮ್ಮ ಕೆಲಸಗಳನ್ನು ನಿಗದಿತ ಅವಧಿ ಯೊಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

Advertisement

ಸಾಲ ವಸೂಲಾತಿ ಮಾಡಿ: ಸಾಮಾನ್ಯ ಸಾಲ, ಕೃಷಿ ಸಾಲ,ಮನೆ ಸಾಲ, ಚಿನ್ನಾಭರ ಣದ ಸಾಲ,ಖರೀದಿ ಸಾಲ ಹಾಗೂ ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲಗಳ ವಸೂಲಾತಿಯ ಗುರಿಯನ್ನು ನಿಗದಿತ ಅವಧಿಯಲ್ಲಿ ತಲುಪಿದಾಗ ಮಾತ್ರ ಬ್ಯಾಂಕಿನ ಉಳಿವು ಸಾಧ್ಯ ಎಂದು ಹೇಳಿದರು.

ಪ್ರತಿ ಖಾತೆ ಕನಿಷ್ಠ ಠೇವಣಿ 30 ಸಾವಿರ: ಪ್ರಸಕ್ತ ಸಾಲಿನಲ್ಲಿ ಸ್ವಸಹಾಯ ಸಂಘಗಳಿಗೆ ಹೆಚ್ಚು ಸಾಲ ವಿತರಿಸಲಾಗಿದೆ. ಸಾಲ ತೀರುವವರೆಗೆ ಪ್ರತಿ ಉಳಿತಾಯ ಖಾತೆ ಯಲ್ಲಿ ಕನಿಷ್ಠ ಠೇವಣೆ 30 ಸಾವಿರ ಇರಲೇಬೇಕು, ಇತರೆ ಖಾತೆಗಳಲ್ಲಿ 50 ಸಾವಿರ ಠೇವಣಿಯನ್ನು ಏಪ್ರಿಲ್‌ನಿಂದ ಜಾರಿ ಮಾಡಲಾಗುವುದು. ಅದನ್ನು ಡ್ರಾ ಮಾಡುವಂತಿಲ್ಲ. ಸಾಲ ಎಷ್ಟೇ ಇದ್ದರೂ ಕನಿಷ್ಠ ಠೇವಣೆಯನ್ನು ಮುಟ್ಟುವಂತಿಲ್ಲ ಎಂದರು.

15 ದಿನದಲ್ಲಿ ಬಡ್ತಿ ಪ್ರಕ್ರಿಯೆ: ಎಲ್ಲ ಸಿಬ್ಬಂದಿ ಕಂಪ್ಯೂಟರ್‌ ಸಾಕ್ಷರರಾಗುವ ಮೂಲಕ ಗ್ರಾಹಕರಿಗೆ ಉತ್ತಮವಾಗಿ ಸೇವೆ ಸಲ್ಲಿಸಬೇಕು. ಮುಂದಿನ 15 ದಿನಗಳಲ್ಲಿ ಬ್ಯಾಂಕ್‌ ಸಿಬ್ಬಂದಿಗೆ ಬಡ್ತಿ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಭರವಸೆ ನೀಡಿದರು. ಪ್ರತಿಯೊಬ್ಬ ಸಿಬ್ಬಂದಿ ಸೌಜನ್ಯದಿಂದ, ಮಾನವೀಯತೆ ದೃಷ್ಟಿಯಿಂದ ಕೆಲಸ ನಿರ್ವಹಿಸಬೇಕು. ಯಾವೂದೇ ಕಾರಣಕ್ಕೂ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿದರು. ನೀವು ಪಡೆಯುವ ವೇತನಕ್ಕೆ ತಕ್ಕ ಹಾಗೆ ಕೆಲಸ ಮಾಡಿ ಬ್ಯಾಂಕಿನ ಋಣ ತೀರುಸಿ ಎಂದು ಕಿವಿಮಾತು ಹೇಳಿದರು.

ಮಹಿಳಾ ಸ್ವಸಹಾಯ ಸಂಘಗಳ ಸಾಲಗಳಿಗೆ ಬಿಲ್‌ಗ‌ಳನ್ನು ಶೀಘ್ರವಾಗಿ ಪೂರ್ಣಗೊಳಿಸ ಬೇಕು. ಷೇರುಗಳನ್ನು ನಿಗದಿತ ಅವಧಿಯಲ್ಲಿ ಸಂಗ್ರಹಿಸಬೇಕು, ರೈತರ ಕೆ.ಸಿ.ಸಿ. ಸಾಲ ನವೀಕರಣ, (ಎನ್‌ಪಿಎ) ಸುಸ್ತಿಸಾಲ ಕಡಿಮೆ, ಹಾಗೂ ರುಪೇ ಕಾರ್ಡ್‌ ಇವುಗಳೆಲ್ಲವು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಮಾರ್ಚ್‌ ಅಂತ್ಯದೊಳಗೆ ಬ್ಯಾಂಕ್‌ ಬ್ಯಾಲೆನ್ಸ್‌ ಪೂರ್ಣ ಗೊಳ್ಳಬೇಕು ಎಂಬು ದನ್ನು ಗಮನಹರಿಸಿ ಎಂದರು.

ಶೂನ್ಯ ಬಡ್ಡಿ ಸಾಲ ಆಕರ್ಷಣೆ: ಮಹಿಳೆ ಸ್ವಸಹಾಯ ಸಂಘಗಳು ಪ್ರಸ್ತುತ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚಾಗಿ ಡಿ.ಸಿ.ಸಿ. ಬ್ಯಾಂಕ್‌ಗಳತ್ತ ಒಲವು ತೋರಿ ಆಕರ್ಷಿತರಾಗುತ್ತಿದ್ದಾರೆ. ಏಪ್ರಿಲ್‌ ನಂತರ ಶೂನ್ಯ ಬಡ್ಡಿ ಸಾಲ ಸಿಗಲಿದೆ ಇದರಿಂದಾಗಿ ಮಹಿಳಾ ಸಂಘಗಳ ಖಾತೆಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದರು. ಈ ಹಿನ್ನೆಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಶೇ.10 ಷೇರುಧನವನ್ನು ಖಾತೆಯಲ್ಲಿ ಇಡುವುದು ಕಡ್ಡಾಯವಾಗಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಶಾಖೆಗಳಲ್ಲೂ ಇದೇ ನಿಯಮವನ್ನು ಪಾಲಿಸಬೇಕೆಂದು ನುಡಿದರು. ನೋಟ್‌ ಬ್ಯಾನ್‌ನಿಂದಾಗಿ ಕೆಲವೊಂದು ಮಹಿಳಾ ಸಂಘಗಳ ಸಾಲ ಮರುಪಾವತಿ ಸ್ವಲ್ಪ ತೊಡಕಾಗಿದ್ದು ಹೀಗಾಗಿ ಸಂಬಂಧ ಪಟ್ಟವರ ಮನವೊಲಿಸಬೇಕಿರುವ ಸಿಬ್ಬಂದಿ ಸುಸ್ತಿಯನ್ನು ತಪ್ಪಿಸುವ ಕೆಲಸ ಮಾಡಬೇಕು. ಇನ್ನು ಮುಂದೆ ಮನೆಸಾಲವನ್ನು ನಿಲ್ಲಿಸಿ ಮುಂದಿನ ಆರ್ಥಿಕ ವರ್ಷದಿಂದ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.

ಪ್ರಗತಿ ಬಗ್ಗೆ ಚರ್ಚೆ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಯ 11 ತಾಲೂಕುಗಳ 12 ವಿಧಾನಸಭಾ ಕ್ಷೇತ್ರದ ಬ್ಯಾಂಕ್‌ ಶಾಖೆಗಳ ಪ್ರಗತಿ ಬಗ್ಗೆ ಅಧಿಕಾರಿಗಳೊಂದಿಗೆ ಸುದೀರ್ಘ‌ವಾಗಿ ಚರ್ಚಿಸಿದರು. ಕೇಂದ್ರ ಬ್ಯಾಂಕಿನ ಹಿರಿಯ ಅಧಿಕಾರಿ ಗಳಾದ ಬೈರೇಗೌಡರಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಶಿವಕುಮಾರ್‌ ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಯಿತು. ಸಭೆಯಲ್ಲಿ ನಿರ್ದೇಶಕರಾದ ಹನುಮೇಗೌಡ, ದಯಾನಂದ್‌, ಶಂಕರನಾರಾ ಯಣ್‌, ವೆಂಕಟೇಶಪ್ಪ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ, ಬ್ಯಾಂಕಿನ ಅಧಿಕಾರಿಗಳಾದ ನಾಗೇಶ್‌, ಶಿವಕುಮಾರ್‌, ಬೈರೇಗೌಡ, ದೊಡ್ಡಮುನಿ, ಖಲೀಮುಲ್ಲಾ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next