Advertisement

ಮಾಸ್ಕ್ ಧರಿಸದವರಿಗೆ ದಂಡ ಹಾಕಿದ ಜಿಲ್ಲಾಧಿಕಾರಿ

11:59 AM Mar 27, 2021 | Team Udayavani |

ದೊಡ್ಡಬಳ್ಳಾಪುರ: ನಗರದ ತಾಲೂಕು ಕಚೇರಿ ವೃತ್ತ, ಬಸ್‌ ನಿಲ್ದಾಣ, ಬಸವ ಭವನ ವೃತ್ತ ಸೇರಿ ಪ್ರಮುಖ ಜನಸಂದಣಿ ಸ್ಥಳಗಳಿಗೆ ಶುಕ್ರವಾರ ಸಂಜೆ ಪೊಲೀಸರೊಂದಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರು.

Advertisement

ಬಸ್‌ ನಿಲ್ದಾಣದಲ್ಲಿನ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಕುಳಿತಿದ್ದ ಪ್ರಯಾಣಿಕರನ್ನುಭೇಟಿ ಮಾಡಿ ಮಾಸ್ಕ್ ಧರಿಸಿ, ಅಂತರ ಕಾಪಾಡುವಂತೆ ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಜನ ಕಡ್ಡಾಯವಾಗಿಮಾಸ್ಕ್ ಧರಿಸಲು, ಧರಿಸದವರಿಂದ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಗೆ ಒಳಪಟ್ಟ ದಂಡವಿಧಿಸಲು ಪೊಲೀಸ್‌ ಇಲಾಖೆ, ನಗರಸಭೆ, ಪುರಸಭೆ ಮುಖ್ಯಾಧಿಕಾರಿಗೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಳೀಯ ಸಂಸ್ಥೆ, ತಾಲೂಕು ಹಂತದ ವಿವಿಧ ಇಲಾಖೆಗಳ ಮುಖ್ಯಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದರು.

ಪೊಲೀಸ್‌ ಇಲಾಖೆಗೆ ಸೂಚನೆ: ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಸಮಾರಂಭ, ಆಚರಣೆ ಹಾಗೂ ಮುಂದೆ ಬರುವ ಧಾರ್ಮಿಕಹಬ್ಬಗಳಾದ ಯುಗಾದಿ, ಹೋಳಿ, ಶಬ್‌ – ಇಬರತ್‌, ಗುಡ್‌ ಫ್ರೈಡೇ ಇತರೆ ಹಬ್ಬಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕಮೈದಾನ, ಪಾರ್ಕ್‌, ಮಾರ್ಕೆಟ್‌ ಹಾಗೂ

ಧಾರ್ಮಿಕ ಸ್ಥಳಗಳಲ್ಲಿ ಗುಂಪು ಸೇರಿ ಆಚರಿಸದಂತೆತಹಶೀಲ್ದಾರ್‌, ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭಾ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ ಎಂದರು.

Advertisement

ಇಲಾಖೆಗೆ ಜವಾಬ್ದಾರಿ: ಮದುವೆ ಹಾಗೂ ಇತರೆ ಸಮಾರಂಭಗಳನ್ನು ಹೆಚ್ಚು ಜನ ಸೇರಿಆಚರಿಸಲು ಅನುಮತಿ ನೀಡುವ ಹಾಲ್‌,ಹೋಟೆಲ್‌, ರೆಸಾರ್ಟ್‌, ಕಲ್ಯಾಣ ಮಂಟಪಗಳಿಗೆಸಂಬಂಧಪಟ್ಟ ಮಾಲಿಕರ ಮೇಲೆ ಸರ್ಕಾರದಆದೇಶದಲ್ಲಿ ನಿರ್ದೇಶಿಸಿರುವಂತೆ ಪ್ರಕರಣದಾಖಲಿಸಲು ತಹಶೀಲ್ದಾರ್‌, ನಗರಸಭಾ ಆಯುಕ್ತರು, ಮುಖ್ಯಾಧಿಕಾರಿಗಳು ಪುರಸಭೆ,ಪೊಲೀಸ್‌ ಇಲಾಖೆಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದರು.

ಸರ್ಕಾರದ ನಿರ್ದೇಶನ ಪಾಲಿಸದಿದ್ದಲ್ಲಿಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಸೆಕ್ಷನ್‌ 22ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಹಾಗೂಸೆಕ್ಷನ್‌ 51 ರಿಂದ 60, ಐಪಿಸಿ 188 ಮತ್ತು ಸೆಕ್ಷನ್‌4,5 ಮತ್ತು 10ರ ಕರ್ನಾಟಕ ಸಾಂಕ್ರಾಮಿಕರೋಗ ಕಾಯ್ದೆ 2020ರ ಅನ್ವಯ ಸೂಕ್ತ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅರುಳ್‌ಕುಮಾರ್‌, ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌,ಡಿವೈಎಸ್‌ಪಿ ಟಿ.ರಂಗಪ್ಪ, ಸಬ್‌ ಇನ್ಸ್‌ಪೆಕ್ಟರ್‌ ಕೆ.ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next