Advertisement

ಧರಣಿ ಸ್ಥಳಕ್ಕೆ ಡಿಸಿ ಭೇಟಿ, ರೈತರಿಂದ ಮನವಿ

11:54 AM Jul 20, 2019 | Team Udayavani |

ಸವಣೂರು: ರೈತರ ನಿರಂತರ ಶಾಂತಿಯುತ ಧರಣಿ ಸ್ಥಳಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಭೇಟಿ ನೀಡಿ, ರೈತ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಮನವಿ ಸ್ವೀಕರಿಸಿದರು.

Advertisement

ಸವಣೂರು, ಶಿಗ್ಗಾವಿ ಹಾಗೂ ಹಾನಗಲ್ಲ ತಾಲೂಕುಗಳ ಕೆರೆಗಳ ಅಭಿವೃದ್ಧಿ, ಜಲಾಶಯ ನಿರ್ಮಾಣ, ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸವಣೂರು ಉಪ ವಿಭಾಗಾಧಿಕಾರಿ ಕಾರ್ಯಾಲಯದ ಎದುರಿಗೆ ನರಗುಂದ ಮಾದರಿಯಲ್ಲಿ ನಡೆಸುತ್ತಿರುವ ನಿರಂತರ ಶಾಂತಿಯುತ ಧರಣಿ ಶುಕ್ರವಾರ 23ನೇ ದಿನಕ್ಕೆ ಮುಂದುವರಿಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ರೈತರೊಂದಿಗೆ ಚರ್ಚಿಸಿ, ರೈತರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಧರಣಿ ಕುರಿತು ಸರ್ಕಾರದ ಗಮನಕ್ಕೆ ತಂದು ಅಂತರ್ಜಲದ ಹೆಚ್ಚಳ ಹಾಗೂ ಡ್ಯಾಂ ನಿರ್ಮಾಣ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಧರಣಿ ನೇತೃತ್ವ ವಹಿಸಿರುವ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ ಬಾರ್ಕಿ ಮಾತನಾಡಿ, ಸವಣೂರು ತಾಲೂಕು ಮನ್ನಂಗಿ, ಕುಣಿಮೆಳ್ಳಿಹಳ್ಳಿ ಮಧ್ಯದಲ್ಲಿ ಬಾಜಿರಾಯನ ಹಳ್ಳಕ್ಕೆ ಪೂರ್ವ, ಪಶ್ಚಿಮ ಮುಖವಾಗಿ ಅಡ್ಡಲಾಗಿ ‘ಯು’ ಆಕಾರದಲ್ಲಿ 2000 ಎಕರೆ ಪ್ರದೇಶದಲ್ಲಿ ಜಲಾಶಯ ನಿರ್ಮಿಸಿ, ಜಲಾಶಯಕ್ಕೆ ಹಲಸೂರ ವರದಾ ಬ್ಯಾರೇಜ್‌ನಿಂದ ಸುರಂಗ ಮಾರ್ಗ ಮೂಲಕ ನೀರು ಸಂಗ್ರಹಿಸುವ ಮೂಲಕ ಜಲಾಶಯದಿಂದ ಸವಣೂರು, ಶಿಗ್ಗಾವಿ ಏತ ನೀರಾವರಿಗೆ ಸಹಕಾರಿ ಯಾಗಲಿದೆ ಎಂಬ ಬೇಡಿಕೆ ಸೇರಿದಂತೆ 18 ವಿವಿಧ ಬೇಡಿಕೆ ವಿವರಿಸಿದರು.

ಉಪ ವಿಭಾಗಾಧಿಕಾರಿ ಬೋಯಾರ್‌ ಹರ್ಷಲ್ ನಾರಾಯಣರಾವ್‌, ತಹಸೀಲ್ದಾರ್‌ ವಿ.ಡಿ.ಸಜ್ಜನ್‌, ರೈತ ಸಂಘದ ಪದಾಧಿಕಾರಿಗಳಾದ ರಾಮಣ್ಣ ಅಗಸರ, ಬಾಬನಸಾಬ್‌ ರಾಯಚೂರ, ಪಾಂಡಪ್ಪ ತಿಪ್ಪಕ್ಕನವರ, ಶಿವಾಜಿ ಮಾದಾಪೂರ, ಹೊನ್ನಪ್ಪ ಮರೆಮ್ಮನವರ, ನಾಗೇಶ ದೊಡ್ಡಮನಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next