Advertisement

ಭತ್ತ ಖರೀದಿ ಕೇಂದ್ರ, ಉಗ್ರಾಣಕ್ಕೆ ಡೀಸಿ ಭೇಟಿ

08:59 AM Mar 18, 2021 | Team Udayavani |

ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿಸಲುವಾಗಿ ಕೊಳ್ಳೇಗಾಲದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆಯಲಾಗಿರುವಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ಎಂ. ಆರ್‌. ರವಿ ಭೇಟಿ ನೀಡಿ ಪ್ರಕ್ರಿಯೆಯನ್ನು ವೀಕ್ಷಿಸಿದರು.

Advertisement

ಇದುವರೆಗೆ ಎಷ್ಟು ಮಂದಿ ರೈತರು, ಬೆಳೆಗಾರರು ನೋಂದಣಿ ಮಾಡಿಸಿದ್ದಾರೆ. ಎಷ್ಟು ಪ್ರಮಾಣದಲ್ಲಿ ಖರೀದಿ ನಡೆದಿದೆ? ಜ್ಯೋತಿ ಭತ್ತ ಎಷ್ಟು ಕ್ವಿಂಟಲ್‌ ಸಂಗ್ರಹಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದರು. ಖರೀದಿ ಕೇಂದ್ರಗಳಲ್ಲಿ ಜ್ಯೋತಿ ಭತ್ತ ಖರೀದಿಗೂ ಅವಕಾಶ ಮಾಡಿಕೊಡಲಾಗಿರುವ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಖರೀದಿ ಕೇಂದ್ರಗಳು ಹೋಬಳಿ ಕೇಂದ್ರಗಳಲ್ಲಿಯೂ ನಿರ್ವಹಿಸಿ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಬೇಕು. ಈ ಸಂಬಂಧ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ವ್ಯಾಪಕವಾಗಿ ಈಗಾಗಲೇಸೂಚನೆ ನೀಡಿರುವಂತೆ ಎಲ್ಲಾ ಅಗತ್ಯವ್ಯವಸ್ಥೆಗಳಿಗೆ ಮುಂದಾಗಬೇಕೆಂದು ನಿರ್ದೇಶನ ನೀಡಿದರು.

ಖರೀದಿಸಲಾಗಿರುವ ರಾಗಿ ದಾಸ್ತಾನು ಮಾಡಲಾಗಿರುವ ಕೊಳ್ಳೇಗಾಲ ಪಟ್ಟಣದರಾಜ್ಯ ಉಗ್ರಾಣಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಗುಣಮಟ್ಟ,ಪ್ರಮಾಣವನ್ನು ವೀಕ್ಷಿಸಿದರು.ರೈತರ, ಬೆಳೆಗಾರರ ಅನುಕೂಲಕ್ಕಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಇರುವ ಖರೀದಿ ಕೇಂದ್ರಗಳು ಸದುಪಯೋಗವಾಗಬೇಕು. ಖರೀದಿ ನೋಂದಣಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯ ಬೇಕು.ಯಾವುದೇ ಗೊಂದಲ ಲೋಪ ಗಳಿಗೆಅವಕಾಶವಾಗದಂತೆ ಅಧಿಕಾರಿಗಳು ಖರೀದಿಕೇಂದ್ರಗಳನ್ನು ನಿರ್ವಹಿಸ ಬೇ ಕೆಂದು ಡಾ. ರವಿ ಸೂಚಿಸಿದರು.

ಉಪ ವಿಭಾಗಾಧಿಕಾರಿ ಡಾ.ಗಿರೀಶ್‌ ದಿಲೀಪ್‌ ಬಡೋಲೆ,ತಹಶೀಲ್ದಾರ್‌ ಕೆ.ಕುನಾಲ್‌, ಆಹಾರ ನಾಗರಿಕಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಯೋಗಾನಂದ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next