Advertisement
ಸಾಮಾಜಿಕ ಭದ್ರತೆ ಯೋಜನೆಯಡಿಮಾಸಾಶನ, ಪಿಂಚಣಿ, ಜಮೀನು ದಾಖಲೆ ಮತ್ತಿತರ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ರೋಸಿ ಹೋಗಿದ್ದ ಗ್ರಾಮಸ್ಥರು ಇದೀಗ ಜಿಲ್ಲಾಡಳಿತವೇ ಗ್ರಾಮದಲ್ಲಿ ಬೀಡು ಬಿಡುತ್ತಿರುವುದರಿಂದ ಸಂತಸಗೊಂಡಿದ್ದು, ನಮ್ಮೂರಿನ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.
Related Articles
Advertisement
ಇ- ಸ್ವ ತ್ತು: ಇ-ಸ್ವತ್ತು, ಸಾಲ ಸೌಲಭ್ಯ, ಇನ್ನಿತರ ಕೆಲಸಗಳಿಗೆ ಗ್ರಾಮಸ್ಥರು ತಿಂಗಳಾನು ಗಟ್ಟಲೇ ಪಟ್ಟಣಕ್ಕೂ, ಗ್ರಾಮಕ್ಕೂ ಅಲೆದಾಡುವ ಸ್ಥಿತಿ ಒಂದೆಡೆಯಾದರೆ, ಮತ್ತೂಂದೆಡೆ ಆಧಾರ್ ಕಾರ್ಡ್ ನಲ್ಲಿ ಉಂಟಾಗಿರುವ ನ್ಯೂನತೆ ಸರಿಪಡಿಸಲು ಅಲೆದಾಟ, ಆರ್‌ಟಿಸಿಯಲ್ಲಿ ಗೊಂದಲ ಸೇರಿದಂತೆ ಅನೇಕ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿವೆ.
ಸ್ಮಶಾನ ವಿವಾದ: ಹೊಸ ಮಾಲಂಗಿ ಗ್ರಾಮ ಬಹು ಸಮಾ ಜದ ಜನರು ವಾಸಿ ಸುವ ಒಂದು ದೊಡ್ಡ ಗ್ರಾಮವಾಗಿದೆ. ಇಲ್ಲಿ ಸ್ಮಶಾನಕ್ಕಾಗಿ ಗ್ರಾಮಸ್ಥರು ಅರ್ಜಿಗಳನ್ನು ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಲ್ಲಿಸಿ, ಸ್ಮಶಾನಕ್ಕಾಗಿ ಹಲವಾರು ಬಾರಿ ಹೋರಾಟ ನಡೆಸಿದ್ದರು. ಗ್ರಾಮ ಸ್ಥರ ಒತ್ತಾಯದ ಮೇರೆಗೆ ಒಂದು ಎಕರೆ ಜಮೀನು ನೀಡಲಾಗಿತ್ತು. ಆದರೆ, ಈ ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದಕ್ಕೆ ತಾರ್ಕಿಕ ಅಂತ್ಯವಾಡಬೇಕಿದೆ.
ಕೆರೆ ಒತ್ತುವರಿ: ಗ್ರಾಮದಲ್ಲಿ ಸುಮಾರು 2 ಎಕರೆಗೂ ಹೆಚ್ಚು ವಿಸ್ತೀರ್ಣದ ದೊಡ್ಡ ಕೆರೆ ಇದೆ. ಇದನ್ನು ಹಲವರು ಒತ್ತುವರಿ ಮಾಡಿ ಕೊಂಡಿದ್ದಾರೆ. ಈ ಕುರಿತು
ಸಾರ್ವಜನಿಕರು ಹಲವು ಬಾರಿ ಗಮನ ಸೆಳೆದಿದ್ದರೂ ಇನ್ನೂ ಇತ್ಯರ್ಥವಾಗಿಲ್ಲ. ಯಾರೊಬ್ಬರೂ ತಲೆ ಕಡೆಸಿಕೊಂಡಿಲ್ಲ. ಗ್ರಾಮದಲ್ಲೇ ತಹಶೀಲ್ದಾರ್ ಸೇರಿದಂತೆ ಕಂದಾಯ ಹಾಗೂ ಗ್ರಾಪಂ ಅಧಿಕಾರಿಗಳು ವಾಸ್ತವ್ಯ ಹೂಡುತ್ತಿರುವುದರಿಂದ ಕರೆಒತ್ತುವರಿಯನ್ನು ತೆರವುಗೊಳಿಸಿ, ಪುನಶ್ಚೇನ ಕೈಗೊಳ್ಳಬೇಕಿದೆ. ಗ್ರಾಮಗಳ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿರುವ ಟಗರಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹ ದೇವ ಪ್ರಭು, ಹೊಸ ಮಾಲಂಗಿ ಗ್ರಾಮವು ಟಗರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಗ್ರಾಮಕ್ಕೆ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ಸೇರಿ ದಂತೆ ಮೂಲ ಭೂತ ಸೌಕ ರ್ಯ ಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ರೇಷನ್ ಕಾರ್ಡ್ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬಹುದು. ಕೆಲವು ಗ್ರಾಮಸ್ಥರ ಜಮೀನುಗಳು ಪೋಡು ಆಗಿಲ್ಲವೆಂದು ದೂರುಗಳು ಬಂದಿವೆ. ಅದೇ ರೀತಿ ಉಳಿದಂತೆ ಸಣ್ಣ ಪುಟ್ಟ ಸಮಸ್ಯೆಗಳು ಇದ್ದು, ಇವುಗಳನ್ನು ಸ್ಥಳದಲ್ಲೇ ಬಗೆ ಹರಿಸಲಾಗುವುದು. –ಕೆ.ಕುನಾಲ್, ತಹಶೀಲ್ದಾರ್
–ಡಿ.ನಟರಾಜು