Advertisement
ಶಿಶಿಲದಿಂದ 8 ಕಿ.ಮೀ. ದೂರದಲ್ಲಿ ಪ್ರೌಢಶಾಲೆ ಇದ್ದು, ಪದವಿ ಕಾಲೇಜಿಗೆ ತೆರಳು ವವರು ಉಪ್ಪಿನಂಗಡಿ (45 ಕಿ.ಮೀ.) ಮತ್ತು ಬೆಳ್ತಂಗಡಿ (48 ಕಿ.ಮೀ.) ಗೇ ಹೋಗಬೇಕು. ಉಳಿದಂತೆ ಖಾಸಗಿ ಕಾಲೇಜಿಗೆ ಉಜಿರೆ ಅಥವಾ ನೆಲ್ಯಾಡಿ ಜೂನಿಯರ್ ಕಾಲೇಜೇ ಆಶ್ರಯ. ಶಿಶಿಲದಲ್ಲಿ 1ರಿಂದ ಪದವಿವರೆಗೆ ಸುಮಾರು 350ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿ¨ªಾರೆ.
Related Articles
Advertisement
3 ಕಿ.ಮೀ. ರಸ್ತೆ ಬಾಕಿ :
ರಸ್ತೆಯಾದಲ್ಲಿ ಪೇರಿಕೆ, ಕಾಲನಿ ಗ್ರಾಮದ 60 ಮನೆಗಳಿಗೆ ಅನುಕೂಲ ವಾಗಲಿದೆ. ಕಾಲನಿಯಿಂದ ಶಿಶಿಲ ದೇವಸ್ಥಾನಕ್ಕೆ 4 ಕಿ.ಮೀ., ರಸ್ತೆಯಾದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ, ಊರಿನವರಿಗೆ ಪರ್ಯಾಯ ರಸ್ತೆಯಾಗಲಿದೆ. ಮಳೆಗಾಲದಲ್ಲಿ ತೂಗು ಸೇತುವೆ, ಡ್ಯಾಮ್ ಮುಳುಗಡೆಯಾದರೆ ಸುತ್ತಿ ಬಳಸಿ ಬರುವ ಸಮಸ್ಯೆ ತಪ್ಪಲಿದೆ. ಪ್ರಸ್ತಾವನೆ ಹಂತದಲ್ಲಿದ್ದು, ಮಂಜೂರಿಗೆ ಕಾಯುವಂತಾಗಿದೆ. ಶಿಶಿಲ ದೇವಸ್ಥಾನದಿಂದ ಒಟ್ಟು 4 ಕಿ.ಮೀ. ರಸ್ತೆ ಮತ್ತು ಹೊಸ ಮೋರಿ ಅಳವಡಿಸಿದಲ್ಲಿ ಪರ್ಯಾಯವಾಗಿ ಸುದೆ ಪರಂಬೋಕಿನಲ್ಲಿ ಸಾಗುತ್ತಿರುವ ಮಂದಿಗೆ ಶಾಶ್ವತ ರಸ್ತೆಯಾಗಲಿದೆ. ಈಗಾಗಲೇ ಹೊಳೆದಂಡೆ ಕಾಮಗಾರಿ ನಡೆಯುತ್ತಿದ್ದು, ಅದೇ ದಾರಿಯಾಗಿ ಮಾಡಿದರೆ ಅನುಕೂಲವಾಗಲಿದೆ ಎಂಬುದು ಇಲ್ಲಿನವರ ಬೇಡಿಕೆಯಾಗಿದೆ.
ಇತ್ತ ಗಮನ ಹರಿಸಿ :
ಬಸವಕಲ್ಯಾಣ ಯೋಜನೆ :
ಬಸವಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸಿದ ಮಂದಿಯ ಮನೆ ನಿರ್ಮಾಣ ಅನುದಾನ ಬಾರದ್ದರಿಂದ ಅಪೂರ್ಣವಾಗಿದೆ. ಫಲಾನುಭವಿಗಳು ಆ್ಯಪ್ ಮೂಲಕ ಪರಿಶೀಲಿಸಿದಾಗ ಅವರ ಹೆಸರು ಇದ್ದು, ಗ್ರಾ.ಪಂ.ಗೆ ಅನುದಾನ ಬಂದಿದೆ ಎನ್ನಲಾಗುತ್ತದೆ. ಆದರೆ ಗ್ರಾ.ಪಂ. ನಲ್ಲಿ ವಿವರ ಇಲ್ಲ. ಹಣ ಎಲ್ಲಿ ಹೋಯಿತೋ ತಿಳಿಯುತ್ತಿಲ್ಲ.
ಬಂಗ್ಲೆಗುಡ್ಡೆ ಮಂದಿಗೆ ನೀರಿನ ಬರ :
ಶಿಶಿಲ ಬಂಗ್ಲೆಗುಡ್ಡೆಯ 30 ಮನೆಗಳಿಗೆ ಬೇನೋಡಿ ಬಳಿಯ ಟ್ಯಾಂಕಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಆದರೆ ಪೈಪ್ ಹಾಳಾಯಿತು. ಬಳಿಕ ಪ್ರತಿಭಟನೆ ನಡೆಸಿದ್ದರಿಂದ ಬೇರೆ ಕಡೆಯಿಂದ ನೀರು ಕಲ್ಪಿಸಲಾಗಿತ್ತು. ಮತ್ತೆ ಪೈಪ್ ಒಡೆದು ಹೋಗಿದ್ದು, ದುರಸ್ತಿಯಾಗಬೇಕು. ಜತೆಗೆ ಶಾಶ್ವತವಾಗಿ ಸಮಸ್ಯೆ ಬಗೆಹರಿಸಬೇಕು.
ಮಲೆಕುಡಿಯ ಕಾಲನಿ ಭೂ ಹಂಚಿಕೆ :
ವೈಕುಂಠಪುರ ಮಲೆಕುಡಿಯ ವ್ಯಾವಸಾಯಿಕ ಕಾಲನಿಯಲ್ಲಿ ಆಗಿನ ವಿ.ಸಭಾ ಅಧ್ಯಕ್ಷರು, ಬೆಳ್ತಂಗಡಿ ತಾಲೂಕಿನ ಶಾಸಕರಾಗಿದ್ದ ವೈಕುಂಠ ಬಾಳಿಗ ಅವರು 1960ಕ್ಕೂ ಹಿಂದೆ 24 ಕುಟುಂಬಗಳಿಗೆ 4 ಎಕ್ರೆಯಂತೆ ಹಂಚಲಾಗಿತ್ತು. ಅಂದು ಅಂದಾಜು ಪ್ರಕಾರ ಜಮೀನು ಹಂಚಿದ್ದರಿಂದ ಈಗ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಬೇಕು.
ಬೆಳೆ ರಕ್ಷಣೆಗೆ ಬೇಕಿದೆ ಕೋವಿ :
ಶಿಶಿಲ ಪ್ರದೇಶ ಅತ್ತ ಅರಣ್ಯದಂಚು ಇತ್ತ ತಾಲೂಕು ಕೆಂದ್ರದಿಂದಲೂ ದೂರ ಉಳಿದಿದ್ದರಿಂದ ಕಾಡು ಪ್ರಾಣಿಗಳ ಉಪಟಳ ಹೇಳತೀರದಂತಿದೆ. ಬೆಳೆದ ಬೆಳೆ ಕೈ ಸೇರುತ್ತಿಲ್ಲ. ಕಳ್ಳಕಾಕರು ಅದೇ ಸಮಯದಲ್ಲಿ ಹೆಚ್ಚಾಗುತ್ತಿ¨ªಾರೆ. ಈ ಹಿನ್ನೆಲೆಯಲ್ಲಿ ಕೋವಿಯನ್ನು ಇಟ್ಟುಕೊಳ್ಳಲು ರೈತರಿಗೆ ಅನುಮತಿ ನೀಡಬೇಕು.
ಗಜಪಡೆ ನಿಯಂತ್ರಣಕ್ಕೆ ಬೇಕಿದೆ ಆನೆ ಕಂದಕ ;
ಕುದುರೆಮುಖದಿಂದ ವಯನಾಡಿನವರೆಗೆ ಸವಾರಿ ಬೆಳೆಸುವ ಗಜಪಡೆಗಳು ಕೃಷಿ ಭೂಮಿಯನ್ನು ಹಾಳು ಮಾಡುತ್ತಿವೆ. . ಯಾವುದೇ ಬೆದರಿಕೆಗೂ ಜಗ್ಗದ ಆನೆಗಳ ಉಪಟಳದಿಂದ ವರ್ಷಂಪ್ರತಿ ಕೃಷಿಕರು ನಷ್ಟ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅರಣ್ಯ ಇಲಾಖೆ ಆನೆ ಕಂದಕ ರಚಿಸಬೇಕು ಎಂಬ ಬೇಡಿಕೆಯೂ ಜನರದ್ದು.
ಉದ್ಯೋಗ ತರಬೇತಿ ಕೇಂದ್ರವಾಗಲಿ ;
ಸಮಾಜ ಕಲ್ಯಾಣ ಇಲಾಖೆಯ ಗಿರಿಜನರ ಕೈಗಾರಿಕಾ ತರಬೇತಿ ಕೇಂದ್ರ ಪಾಳು ಬಿದ್ದಿದೆ. ಹಲವು ವರ್ಷಗಳ ಹಿಂದೆ ಆರು ತಿಂಗಳ ಅವಧಿಯ 2 ತರಬೇತಿ ಶಿಬಿರಗಳು ನಡೆದಿದ್ದವು. ಈಗ ಮುಚ್ಚಿದ್ದು, ಯಂತ್ರೋ ಪಕರಣಗಳು ಕಾಣೆಯಾಗಿವೆ. ಈಗಲಾದರೂ ಡಿಸಿ ಗಮನಹರಿಸಿ ಸ್ಥಳೀಯರಿಗೆ ಉದ್ಯೋಗ ತರಬೇತಿ ಕೇಂದ್ರವನ್ನಾಗಿಸಬೇಕು.
ಇಂದು ಏನೇನು ? :
- ದ.ಕ. ಡಿ.ಸಿ. ಡಾ| ರಾಜೇಂದ್ರ ಕೆ.ವಿ. ಶಿಶಿಲದಲ್ಲಿ ವಾಸ್ತವ್ಯ.
- ಪರಿಶಿಷ್ಟ ಕಾಲನಿಯ ಆಶ್ರಮ ಶಾಲೆಯಲ್ಲಿ ವಾಸ್ತವ್ಯ.
- ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಭೆ.
- 200 ಮಂದಿ ಗ್ರಾಮಸ್ಥರು ಸೇರುವ ನಿರೀಕ್ಷೆ
- ವಿವಿಧ ಇಲಾಖೆಯ 50 ಮಂದಿ ಅಧಿಕಾರಿಗಳು ಭಾಗಿ