ಕುದೂರು: ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎನ್ನುವಸರ್ಕಾರದ ಆಶಯದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನುಆಯೋಜಿಸಿದ್ದು, ಅಧಿಕಾರಿಗಳು ಗ್ರಾಮ ಮತ್ತು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.
ಕುದೂರು ಹೋಬಳಿಯ ಸುಗ್ಗನಹಳ್ಳಿ ಗ್ರಾಮದಲ್ಲಿ ರಾಮನಗರ ಜಿಲ್ಲಾಡಳಿತ, ಜಿಪಂವತಿಯಿಂದ ನಡೆದ ಜಿಲ್ಲಾಧಿಕಾರಿಗಳ ನಡೆಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿ, ಪಿಂಚಣಿ, ಆಶ್ರಯ ಯೋಜನೆ,ಪೌತಿಖಾತೆ, ಸ್ಮಶಾನ, ಪಹಣಿ ತಿದ್ದುಪಡಿ, ಭೂಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ,ಬರ ಪ್ರವಾಹ ಪರಿಶೀಲನೆ ಹಾಗೂ ಪರಿಹಾರನೀಡುವುದು. ಅರ್ಹ ಕುಟುಂಬಗಳಿಗೆ ಬಿಪಿಎಲ್‌ಕಾರ್ಡ್ ವಿತರಣೆ, ಪೋಡಿ ಪ್ರಕರಣ ಇತ್ಯರ್ಥ,ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಅಡೆತಡೆ ನಿವಾರಣೆ ಇನ್ನಿತರ ಗ್ರಾಮದಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದರೆಪರಿಹರಿಸಲಾಗದ ಅರ್ಜಿಯನ್ನು ಕಾಲಮಿತಿಯಲ್ಲಿಪರಿಹರಿಸಲು ಆದ್ಯತೆ ನೀಡಲಾಗುವುದು ಎಂದರು.
ಕಾರ್ಯಕ್ರಮದ ಲಾಭ ಪಡೆದುಕೊಳ್ಳಿ: ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್‌ಮಾತನಾಡಿ, ಗ್ರಾಮದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ಗ್ರಾಮವ್ಯಾಸ್ತವ್ಯ ನಡೆಸಲಾಗುತ್ತಿದೆ. ಈಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮಅಹವಾಲು ಸಲ್ಲಿಸಿ, ಕಾರ್ಯಕ್ರಮದ ಪೂರ್ಣಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಧ ಇಲಾಖೆಯಿಂದ ಜಾಗೃತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆಯಿಂದ ವಿಶ್ವ ತಂಬಾಕು ನಿಯಂತ್ರಣಕಾರ್ಯಕ್ರಮ, ಮಲೇರಿಯಾ, ಡೆಂ à ತಡೆಗೆಕ್ರಮ, ಮೆದುಳು ಜ್ವರ, 2025ರ ವೇಳೆಗೆಕ್ಷಯರೋಗ ನಿರ್ಮೂಲನೆ ಗುರಿ, ಬಾಯಿ ಆರೋಗ್ಯ ಶಿಬಿರ, ಕುಟುಂಬ ಕಲ್ಯಾಣಯೋಜನಾ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಸಾರ್ವಜನಿಕರಿಗೆ ಉಚಿತಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಿ.ಡಿ.ಎಲ್.ಆರ್‌ಸಂತೋಷ್, ಉಪ ತಹಶೀಲ್ದಾರ್‌ಸೋಮಶೇಖರ್, ಎ.ಡಿ.ಎಲ್.ಆರ್ ಪರಮೇಶ್,ಕಣ್ಣೂರು ಗ್ರಾಪಂ ಅಧ್ಯಕ್ಷ ಜಗದೀಶ್,ಉಪಾಧ್ಯಕ್ಷೆಮಮತಾ ಮತ್ತು ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.