Advertisement

ರಸ್ತೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

02:54 PM Oct 13, 2020 | Suhan S |

ಕೋಲಾರ: ನಗರದಲ್ಲಿ ವಿವಿಧ ಅನುದಾನದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಸೋಮ ವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಪ್ರದಕ್ಷಿಣೆ ನಡೆಸಿ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಆದೇಶಿಸಿದರು.

Advertisement

ಮಳೆಗಾಲ ಪ್ರಾರಂಭವಾಗಿದ್ದು ಎಲ್ಲಿ ನೋಡಿದರೂ ರಸ್ತೆಯ ಗುಂಡಿಗಳದ್ದೇ ಸದ್ದು ಆಗಿದ್ದರ ಬಗ್ಗೆ ಸಾಕಷ್ಟು ದೂರುಗಳು ಬಂದ ಕಾರಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಗುಂಡಿಮಯ ರಸ್ತೆಗಳು, ಚರಂಡಿಗಳಿಂದ ಹೊರಗೆ ಹರಿಯುತ್ತಿದ್ದ ಕೊಳಚೆ ನೀರು ಹಾಗೂ ರಸ್ತೆ ಬದಿಯ ಕಸದ ರಾಶಿ ಕಂಡು ಅಸಮಾಧಾನಗೊಂಡರು.

ನೋಟಿಸ್‌ ನೀಡುವ ಎಚ್ಚರಿಕೆ: ನಗರಸಭೆ,ಒಳಚರಂಡಿ ಮತ್ತು ನೀರು ಸರಬರಾಜುಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಬೇಗ ಕೆಲಸ ಮುಗಿಸಿ, ಇಲ್ಲದಿದ್ದರೆ ನೋಟಿಸ್‌ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಗರದ ಅಂಬೇಡ್ಕರ್‌ ಸರ್ಕಲ್‌,ಕಾಲೇಜು ವೃತ್ತ, ಎಂ.ಜಿ ರಸ್ತೆ, ದೊಡ್ಡಪೇಟೆ ಸೇರಿದಂತೆ ಪ್ರಮುಖಸ್ಥಳಗಳಲ್ಲಿಸಂಚರಿಸಿದ ಜಿಲ್ಲಾಧಿಕಾರಿ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹರಿಸುವ ಭರವಸೆ ನೀಡಿದರು. ಯುಜಿಡಿ ಸಮಸ್ಯೆ ಗಂಭೀರವಾಗಿದೆ. ಸ್ಥಳೀಯರು ಸಮಸ್ಯೆ ನೀವೇ ನೋಡುತ್ತಿದ್ದೀರಿ, ಹಾಳಾಗಿರುವ ಯುಜಿಡಿ ಮಾರ್ಗವನ್ನು ರಸ್ತೆಗೆ ಅನುಸಾರವಾಗಿರುವ ಹಾಗೇ ಶೀಘ್ರವೇ ದುರಸ್ತಿ ಮಾಡಿಸಿ ಎಂದು ನಗರಸಭೆ ಆಯುಕ್ತ ಶ್ರೀಕಾಂತ್‌ ಅವರಿಗೆ ಆದೇಶಿಸಿದರು.

ನಗರದ ಪ್ರಮುಖ ಪ್ರದೇಶವಾದ ಚಂಪಕ್‌ ವೃತ್ತದ ಪಕ್ಕದಲ್ಲಿ ನಗರಸಭೆ ವತಿಯಿಂದ ರಸ್ತೆ ಇದ್ದರೂ ಅದನ್ನು ಕೆಲವರು ಒತ್ತುವರಿಮಾಡಿಕೊಂಡಿದ್ದು, ತೆರವುಗೊಳಿಸಬೇಕು. ದೊಡ್ಡ ಪೇಟೆಯ ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ತೆರವು ಮಾಡಲು ನೋಟಿಸ್‌ ನೀಡಿ ಜಾಗದ ಬಗ್ಗೆ ಗುರುತಿಸಬೇಕು ಎಂದರು.

ಯುಜಿಡಿ ಕಾಮಗಾರಿಗಾಗಿ ಬಡಾವಣೆಯ ಬಹುಪಾಲು ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿ ಮುಗಿದರೂ ರಸ್ತೆ ದುರಸ್ತಿ ಮಾಡಿಲ್ಲ. ಅಮೃತ್‌ಸಿಟಿ, ನಗರೋತ್ಥಾನ- 3ರ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲ ರಸ್ತೆಗಳು ಲೋಕೋಪಯೋಗಿ ಮತ್ತು ನಗರಸಭೆ ವ್ಯಾಪ್ತಿಗೆ ಒಳಪಡುತ್ತವೆ. ಅನುದಾನದ ಸಮಸ್ಯೆ ಇಲ್ಲ. ಇರುವ ಅನುದಾನ ಮತ್ತಷ್ಟು ಅನುದಾನ ಕ್ರೋಢೀಕರಿಸಿ ರಸ್ತೆಗಳ ಡಾಂಬರೀಕರಣ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next