Advertisement

ಹಾನಿ ಪ್ರದೇಶಕ್ಕೆ ಡಿಸಿ ತಂಡ; ಸೂಕ್ತ ಸ್ಪಂದನೆಗೆ ಸೂಚನೆ

01:17 AM Aug 22, 2019 | sudhir |

ಬೆಳ್ತಂಗಡಿ: ಪ್ರವಾಹ ಸಂತ್ರಸ್ತರಿಗೆ ಸೂಕ್ತ ವಸತಿ ಮತ್ತು
ಅವಶ್ಯ ವಸ್ತು ಪೂರೈಸುವ ವಿಚಾರವಾಗಿ ಜಿಲ್ಲಾಧಿಕಾರಿ ಶಶಿಕಾಂತ
ಸೆಂಥಿಲ್‌ ಬುಧವಾರ ಬೆಳ್ತಂಗಡಿಗೆ ಭೇಟಿ ನೀಡಿದರು. ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ದಿಡುಪೆ ಭೂ ಕುಸಿತ ಉಂಟಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಸಭೆಯಲ್ಲಿ ತಾಲೂಕಿನ ನೆರೆಪೀಡಿತ ಪ್ರದೇಶಗಳ ಪರಿಹಾರ ಕಾರ್ಯದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ ಸಂತ್ರಸ್ತರಿಗೆ ಸೂಕ್ತ ರೀತಿಯ ಸ್ಪಂದನೆ ನೀಡುವಂತೆ ಸೂಚಿಸಿದರು.

ದಿಡುಪೆ ಸಮೀಪದ ಗಣೇಶ್‌ ನಗರದಲ್ಲಿ ಭೂ ಕುಸಿತ ಉಂಟಾದಲ್ಲಿ ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅನಾರು ಸಂಪರ್ಕ ಸೇತುವೆ ಕುಸಿದಿದ್ದರಿಂದ ಅಗತ್ಯವಾಗಿ ಸಂಪರ್ಕ ಕಲ್ಪಿಸಲು ಮುಂಡಾಜೆಯಿಂದ ಕಾನರ್ಪವಾಗಿ 3 ಕಿ.ಮೀ. ಒಳ ರಸ್ತೆ ಸಿದ್ಧಗೊಳ್ಳುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ, ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸಿŒ, ವಿಶೇಷ ನೋಡಲ್‌ ಅಧಿಕಾರಿಗಳಾದ ಸಂತೋಷ್‌ ಮತ್ತು ನಾಗರಾಜ್‌ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂತ್ರಸ್ತರ ಮಾನಸಿಕ ಆರೋಗ್ಯ ಸ್ಥಿತಿಗತಿ ಅಧ್ಯಯನ
ಜಿಲ್ಲಾಧಿಕಾರಿಗಳ ಸೂಚನೆ ಯಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದ ಜಿಲ್ಲಾ ಮಾನಸಿಕ ಆರೋಗ್ಯ ಸಮೀಕ್ಷಾ ತಂಡವೂ ಬುಧವಾರ ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಜನರ ಮಾನಸಿಕ ಸ್ಥಿತಿಗತಿಗಳ ಕುರಿತು ಸಮಗ್ರ ಅಧ್ಯಯನ ನಡೆಸಿದೆ.

Advertisement

ಮನೆ, ಭೂಮಿ ಕಳೆದು ಕೊಂಡವರು ನೆಮ್ಮದಿಯನ್ನೂ ಕಳಕೊಳ್ಳುವ ಸಾಧ್ಯತೆ ಇರುವುದರಿಂದ ಅಧ್ಯಯನ ನಡೆಸುವಂತೆ ತಂಡಕ್ಕೆ ಸೂಚಿಸಲಾಗಿತ್ತು.
ಕುಕ್ಕಾವು, ಅಗರಿಮಾರು ಪ್ರದೇಶಕ್ಕೆ ವಿವಿಧೆಡೆಯ ಸಂತ್ರಸ್ತರನ್ನು ಆಹ್ವಾನಿಸಿ ಪರೀಕ್ಷೆಗೆ ಒಳಪಡಿಸಲಾಯಿತು.

ಜಿಲ್ಲಾ ಮನೋರೋಗ ತಜ್ಞ ಡಾ| ಅರುಣ್‌ ಶೆಟ್ಟಿ ನೇತೃತ್ವದ ತಂಡದಲ್ಲಿ ಮನಃಶಾಸ್ತ್ರಜ್ಞೆ ಜಯಶ್ರೀ, ಸಾಮಾಜಿಕ ಕಾರ್ಯಕರ್ತೆ ದಿವ್ಯಾ,
ಮನೋಶುಶ್ರೂಷಕಿ ಹಿತಾ, ಸಮು ದಾಯ ಶುಷೂÅಶಕಿ ಶ್ರೀವಿದ್ಯಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next