Advertisement

ಲಾಕ್ ಡೌನ್ ನಿಯಮ ಉಲ್ಲಂಘಿಸಿದನೆಂದು ಯುವಕನ ಕಪಾಳಕ್ಕೆ ಹೊಡೆದು ಮೊಬೈಲ್ ಒಡೆದು ಹಾಕಿದ ಡಿಸಿ

08:11 AM May 23, 2021 | Team Udayavani |

ಸೂರಜ್ ಪುರ: ಯುವಕನೋರ್ವ ಲಾಕ್ ಡೌನ್ ನಿಯಮ ಉಲ್ಲಂಘಿಸಿದನೆಂಬ ಕಾರಣಕ್ಕೆ ಜಿಲ್ಲಾಧಿಕಾರಿಯು ಯುವಕನ ಕಪಾಳಕ್ಕೆ ಬಾರಿಸಿ, ಆತನ ಮೊಬೈಲ್ ನ್ನು ರಸ್ತೆಗೆ ಎಸೆದು ಒಡೆದು ಹಾಕಿದ ಘಟನೆ ಚತ್ತೀಸ್ ಗಢ್ ರಾಜ್ಯದ ಸೂರಜ್ ಪುರ ಜಿಲ್ಲೆಯಲ್ಲಿ ನಡೆದಿದೆ.

Advertisement

ಸೂರಜ್ ಪುರ ಜಿಲ್ಲೆಯ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಮಾಡಿದ ಈ ಕೆಲಸಿ ಇದೀಗ ಟೀಕೆಗೆ ಗುರಿಯಾಗಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚತ್ತೀಸ್ ಗಢ್ ರಾಜ್ಯದಲ್ಲಿ ಲಾಕ್ ಡೌನ್ ವಿಧಿಸಲಾಗಿದೆ, ಜನರ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ ಯುವಕನು ಸ್ಥಳೀಯ ಮೆಡಿಕಲ್ ನಿಂದ ಔಷಧಿ ತರಲು ಹೋಗಿದ್ದ ಎನ್ನಲಾಗಿದ್ದು, ಎದುರು ಸಿಕ್ಕ ಡಿಸಿ ಕಪಾಳ ಮೋಕ್ಷ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಲ್ಲೇ ಇದ್ದ ಪೊಲೀಸರಲ್ಲಿ ಯುವಕನಿಗೆ ಹೊಡೆಸಿದ್ದು, ಎಫ್ ಐಆರ್ ಹಾಕಲು ಸೂಚಿಸಿದ್ದಾರೆ.

ಯುವಕ ತನ್ನಲ್ಲಿ ಇದ್ದ ಕೆಲವು ಕಾಗದಗಳನ್ನು ತೋರಿಸಿ ತಾನು  ಔಷದಿ ಖರೀಸಿದಲು ಹೋಗುತ್ತಿದ್ದೇನೆ ಎಂದು ಹೇಳಿದರೂ ಡಿಸಿ ಶರ್ಮಾ ಕೇಳಲಿಲ್ಲ. ಬದಲಾಗಿ ಪೊಲೀಸರಲ್ಲಿ ಈತನಿಗೆ ಹೊಡೆಯಿರಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next