Advertisement

ಕಾಡಾನೆ ಹಾವಳಿ ತಡೆಗೆ ಕ್ರಮ

03:55 PM Mar 03, 2021 | Team Udayavani |

ಕೋಲಾರ: ಜಿಲ್ಲೆಯ ಬಂಗಾರಪೇಟೆ ಹಾಗೂ ಮಾಲೂರು ತಾಲೂಕುಗಳ ಗಡಿ ಗ್ರಾಮಗಳಲ್ಲಿ ಕಾಡಾನೆಗಳ ದಾಳಿಯನ್ನು ತಡೆಗಟ್ಟುವ ಕುರಿತು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡೀಸಿ ಡಾ.ಸೆಲ್ವಮಣಿ ಭರವಸೆ ನೀಡಿದ್ದಾರೆ.

Advertisement

ಬಂಗಾರಪೇಟೆ ತಾಲೂಕಿನಲ್ಲಿ ಕಾಡಾನೆ ಹಾವಳಿಯಿಂದ ಸಂತ್ರಸ್ತರಾದ ಗ್ರಾಮಗಳ ಮುಖಂಡರು ಹಾಗೂ ಗ್ರಾಪಂ ಪ್ರತಿನಿಧಿಗಳಸಭೆಯಲ್ಲಿ ಅವರು ಮಾತನಾಡಿ, ಕಾಡಾನೆಗಳ ಹಾವಳಿ ಹೇಗೆ ತಡೆಗಟ್ಟಬೇಕು ಎಂಬ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿ ಸುತ್ತಿದ್ದು, ವಾರದೊಳಗೆ ತಾವು ಆನೆದಾಳಿ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಹೇಳಿದರು.

ಡೀಸಿ ನೀಡಿದ ಭರವಸೆ ಮೇರೆಗೆ ಕಾಡಾನೆ ದಾಳಿ ಹಾವಳಿ ತಡೆಗಟ್ಟುವಂತೆ ಡೀಸಿ ಕಚೇರಿ ವರೆಗೂ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನುಸದ್ಯಕ್ಕೆ ಮುಂದೂಡಲಾಗಿದೆ ಎಂದು ಗ್ರಾಮಸ್ಥರು ಘೋಷಿಸಿದರು.

ಭಯಭೀತ: ಬಂಗಾರಪೇಟೆ ಮತ್ತು ಮಾಲೂರು ತಾಲೂಕಿನ ಗಡಿ ಗ್ರಾಮಗಳಲ್ಲಿ ಸದ್ಯಕ್ಕೆ 5 ಒಂಟಿ ಸಲಗಗಳು ಸುತ್ತಾಡುತ್ತಿದ್ದು,ಆನೆ ದಾಳಿಯಿಂದ ಈವರೆಗೂ 8 ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ರೂ.ಬೆಳೆ ನಷ್ಟ ವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬೆಳಗಿನ ಜಾವ ಡೇರಿಗೆ ತಾವು ಉತ್ಪಾದಿಸುವ ಹಾಲು ಹಾಕಲು ಸಾಧ್ಯವಾಗದಂತ ವಾತಾವರಣ ನಿರ್ಮಾಣ ವಾಗಿರುವ ಹಿನ್ನೆಲೆಯಲ್ಲಿ ಬೃಹತ್‌ ಹೋರಾಟದ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯುವ ಕರೆ ನೀಡಿದ್ದರು.

ಚರ್ಚಿಸಿ ಕ್ರಮ: ಈ ಹಿನ್ನೆಲೆಯಲ್ಲಿಯೇ ಡೀಸಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಗಳಮುಖಂಡರ ಜನಪ್ರತಿನಿಧಿಗಳ ಸಭೆ ಕರೆದು,ದಾಂಧಲೆ ನಡೆಸುತ್ತಿರುವ ಆನೆಗಳನ್ನು ಸ್ಥಳಾಂ ತರ ಮಾಡುವುದೋ ಅಥವಾ ಗಡಿಯಲ್ಲಿ ಹಳ್ಳ ತೆಗೆದು ಆನೆಗಳನ್ನು ನಿರ್ಬಂಧಿಸುವುದೋ, ಇತ್ಯಾದಿ ಪರಿಹಾರಗಳ ಕುರಿತಂತೆಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈಗಾಗಲೇ ಆನೆ ದಾಳಿ ಪೀಡಿತ ಗ್ರಾಮಸ್ಥರು ಜಿಲ್ಲಾಡಳಿತದ ಗಮನ ಸೆಳೆಯಲು ವ್ಯಾಟ್ಸಾಪ್‌ ಗುಂಪು ರಚಿಸಿಕೊಂಡು ಆನೆಗಳು ಯಾವ ಕಡೆ ಇದೆ, ಯಾವ ಕಡಚಲಿಸುತ್ತಿವೆ ಇತ್ಯಾದಿ ಮಾಹಿತಿಗಳನ್ನು ಮುಂಜಾಗ್ರತಾ ಕ್ರಮವಾಗಿ ಹಂಚಿಕೊಂಡುಗ್ರಾಮಸ್ಥರನ್ನು ಎಚ್ಚರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

Advertisement

ಜಿಲ್ಲಾಡಳಿತ ಕೂಡಲೇ ಯಾವುದಾದರೂ ಕ್ರಮಗಳ ಮೂಲಕ ಆನೆಯ ದಾಳಿ ಮತ್ತುಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟುವ ಮೂಲಕ ಗಡಿ ಗ್ರಾಮಗಳ ಗ್ರಾಮಸ್ಥರಲ್ಲಿ ನೆಮ್ಮದಿ ಮೂಡಿಸಬೇಕಾಗಿದೆಯೆಂಬ ಆಗ್ರಹ ಕೇಳಿ ಬರುತ್ತಿದೆ. ಸಭೆಯಲ್ಲಿ ಡಿಎಫ್ಒ ಶಿವ ಶಂಕರ್‌, ಉಪ ವಿಭಾಗಾಧಿಕಾರಿ ಸೋಮ ಶೇಖರ್‌, ತಹಶೀ ಲ್ದಾರ್‌ ದಯಾನಂದ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೋವಿಂದರಾಜು, ಕಾಮ ಸಮುದ್ರ ಗ್ರಾಪಂ ಮಾಜಿ ಅಧ್ಯಕ್ಷ್ಯ ಆದಿನಾರಾ ಯಣ ಕುಟ್ಟಿ, ವಿಎಸ್‌ಎಸ್‌ಎಂ ಉಪಾಧ್ಯಕ್ಷ ರಂಗಾಚಾರಿ, ಮುಖಂಡರಾದ ಲಕ್ಷ್ಮೀನಾರಾಯಣ ಪ್ರಸಾದ್‌, ಚಾಮುಂಡಿಗೌಡ, ಶ್ರೀನಿ ವಾಸ್‌, ಮುನಿವೀರಪ್ಪ ಇದ್ದರು.

ಧ್ವನಿವರ್ಧಕ ಅಳವಡಿಸುವ ಚಿಂತನೆ :

ಅರಣ್ಯ ಇಲಾಖೆಯು ಕೆಲವು ಗ್ರಾಮಗಳಲ್ಲಿ ಮೈಕ್‌ ಮೂಲಕ ಆನೆಗಳ ಸಂಭಾವ್ಯ ದಾಳಿ ಕುರಿತಂತೆ ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿದ್ದು, ದಾಳಿ ಹೆಚ್ಚಾಗಿರುವ ಗ್ರಾಮಗಳ ಸುತ್ತಲೂ ಧ್ವನಿವರ್ಧಕ ಅಳವಡಿಸಿ ಆನೆಗಳನ್ನು ದೂರವಿಡುವ ವಿವಿಧ ರೀತಿಯ ಶಬ್ದ ಹಾಕುವ ಚಿಂತನೆಯೂ ನಡೆದಿದೆ ಎಂದುಜಿಲ್ಲಾಧಿಕಾರಿ ತಿಳಿಸಿದರು. ಒಟ್ಟಾರೆ, ಆನೆಗಳ ಹಾವಳಿಯನ್ನು ತಡೆಗಟ್ಟುವಕುರಿತು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆಮತ್ತು ಭರವಸೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟ ಸದ್ಯಕ್ಕೆ ಮುಂದೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next