Advertisement

ಕೋವಿಡ್‌ ಹರಡದಂತೆ ಸೂಕ್ತ ಕ್ರಮಕ್ಕೆ ಡಿಸಿ ಸೂಚನೆ

03:33 PM Apr 07, 2021 | Team Udayavani |

ಬೆಳಗಾವಿ: ಕೋವಿಡ್‌-19 ಹಿನ್ನಲೆಯಲ್ಲಿ ದೇಶಾದ್ಯಂತ ಕೋವಿಡ್‌-19ಸೋಂಕು ನಿಗಾವಣೆ, ನಿಯಂತ್ರಣ ಮತ್ತು ಜಾಗ್ರತೆಗೆ ಸಂಬಂ ಧಿಸಿದಂತೆಮಾರ್ಗಸೂಚಿಗಳನ್ನು ಏ. 1ರಿಂದ ಏ. 30ರ ವರೆಗೆ ಜಾರಿಗೊಳಿಸಿಆದೇಶಹೊರಡಿಸಲಾಗಿರುತ್ತದೆ ಎಂದು ಜಿಲ್ಲಾಧಿ ಕಾರಿ ಡಾ. ಕೆ. ಹರೀಶಕುಮಾರ್‌ ತಿಳಿಸಿದ್ದಾರೆ.

Advertisement

ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದಸಮಯದಲ್ಲಿ ಮುಖದ ಹೊದಿಕೆ(ಮಾಸ್ಕ್)ಧರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ಅಂತರ ಕಾಯ್ದುಕೊಳ್ಳಬೇಕು. ಗ್ರಾಹಕರಲ್ಲಿ ದೈಹಿಕಅಂತರ ಇರುವುದನ್ನು ಅಂಗಡಿ ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕಸ್ಥಳಗಳಲ್ಲಿ ಉಗಿಯುವುದು ಕಂಡರೆ ದಂಡವಿಧಿ ಸಲಾಗುವುದು. ಕೆಲಸದ ಸ್ಥಳ, ಕಚೇರಿ,ಅಂಗಡಿ, ಮಾರುಕಟ್ಟೆ, ಕೈಗಾರಿಕಾ ಮತ್ತು ವಾಣಿಜ್ಯ ಸಮುತ್ಛಯಗಳಲ್ಲಿ ಎಲ್ಲ ಪ್ರವೇಶ, ನಿರ್ಗಮನ ಸ್ಥಳಗಳಲ್ಲಿ, ಸಾಮಾನ್ಯಪ್ರದೇಶಗಳಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌, ಕೈ ತೊಳೆಯುವಿಕೆ, ಸ್ಯಾನಿಟೆ„ಸರ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ಕೆಲಸದ ಸಂಪೂರ್ಣ ಆವರಣ, ಸಾಮಾನ್ಯ ಸೌಲಭ್ಯಗಳು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲ ಸಾಧನ ಸಲಕರಣೆಗಳನ್ನು ಶುಚಿಗೊಳಿಸಬೇಕು.ಕೆಲಸದ ಸ್ಥಳಗಳಲ್ಲಿ ಮೇಲ್ವಿಚಾರಣೆ ಹೊಂದಿರುವ ಎಲ್ಲ ಕೆಲಸಗಾರರು,ಸಿಬ್ಬಂದಿಗಳ ಊಟದ ವಿರಾಮದ ಸಂದರ್ಭದಲ್ಲಿ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳವುದು ಕೋವಿಡ್‌-19 ನಿರ್ವಹಣೆ ಸಂಬಂಧ ರಾಷ್ಟೀಯಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಕೋವಿಡ್‌ -19 ಸೋಂಕು ಹರಡುವಿಕೆ ತಡೆಗಟ್ಟಲು ಸಾರ್ವಜನಿಕವಲಯಗಳಲ್ಲಿ, ವಾರದ ಸಂತೆಗಳಲ್ಲಿ, ಸಾರ್ವಜನಿಕ ಸಾರಿಗೆ ಮತ್ತು ಜನಸಂದಣಿಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನುನಿಗಾವಹಿಸುವುದು. ಈ ಸಂಬಂಧ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿಜಾರಿಗೊಳಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ| ಕೆ. ಹರೀಶಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next