Advertisement

ಚೆಕ್‌ಪೋಸ್ಟ್‌ಗಳ ಕಾರ್ಯನಿರ್ವಹಣೆಗೆ ಡೀಸಿ ಸೂಚನೆ

06:11 AM Jul 01, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ 19 ವೈರಸ್‌ ಹರಡದಂತೆ ತಡೆಯಲು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ದಿಸೆಯಲ್ಲಿ ಜಿಲ್ಲೆಗೆ ಹೊಂದಿಕೊಂಡಿರುವಂತಹ ಮೈಸೂರು ಜಿಲ್ಲೆಯಿಂದ ಹಾಗೂ ಅಕ್ಕ ಪಕ್ಕದ  ರಾಜ್ಯಗಳಿಂದ ಬರುವಂತಹ ಪ್ರಯಾಣಿಕರ ಮೇಲೆ ನಿಗಾ ವಹಿಸುವ ಹಾಗೂ ಜಿಲ್ಲೆಯಿಂದ ಅನವಶ್ಯಕವಾಗಿ ಓಡಾಡುವ ಸಾರ್ವಜನಿಕರ ಪ್ರಯಾಣವನ್ನು ದೃಷ್ಟಿಯಿಂದ ವಿವಿಧ ಮಾರ್ಗ ಗಳಲ್ಲಿ ವೈದ್ಯಕೀಯ ಚೆಕ್‌ಪೋಸ್ಟ್‌ ಗಳನ್ನು  ನಿರ್ಮಿಸಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.

Advertisement

ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾ , ವಾಟರ್‌ ಪ್ರೂಫ್ಟೆಂಟ್‌, ಶಾಮಿಯಾನ ಅಳವಡಿಸಿ ಪೊಲೀಸ್‌, ಹೋಂ ಗಾರ್ಡ್ಸ್‌ ನಿಯೋಜಿ  ಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೂಕ್ತ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಿ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಚಾಮರಾಜನಗರ ತಾಲೂಕಿನ  ಹೆಗ್ಗವಾಡಿ, ಪುಣಜನೂರು ಚೆಕ್‌ಪೋಸ್ಟ್‌ಗೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸುರೇಂದ್ರ ಮೊ: 9449821499 ನೋಡಲ್‌ ಅಧಿಕಾರಿ, ಗುಂಡ್ಲುಪೇಟೆ ತಾಲೂಕಿನ ಹೀರೆಕಾಟಿ  (ಬೇಗೂರು) ಮದ್ದೂರು (ಮೂಲೆಹೊಳೆ) ಮೇಲುಕಾಮನಹಳ್ಳಿ (ಕೆಕ್ಕನಹಳ್ಳ) ಕುರುಬರಹುಂಡಿ ಚೆಕ್‌ಪೋಸ್ಟ್‌ಗೆ ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಮೊ: 9448562330 ನೋಡಲ್‌ ಅಧಿಕಾರಿ,  ಹನೂರು ತಾಲೂಕಿನ ಪಾಲಾರ್‌, (ಮೆಟ್ಟೂರು ರಸ್ತೆ) ನಾಲ್‌ ರೋಡ್‌,

ಅರ್ಧನಾರಿಪುರ (ಒಡೆಯರಪಾಳ್ಯ) ಚೆಕ್‌ ಪೋಸ್ಟ್‌ಗೆ ಕೆಆರ್‌ಡಿಎಲ್‌ ಕಾರ್ಯಪಾಲಕ ಅಭಿಯಂತರ ಸುಂದರೇಶ್‌ ಮೂರ್ತಿ ಮೊ: 9449863071, 903661960 ನೋಡಲ್‌  ಅಧಿಕಾರಿ, ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ, ಬಾನಹಳ್ಳಿ (ಮೂಗೂರು ಗಡಿ) ಟಗರಪುರ ಚೆಕ್‌ ಪೋಸ್ಟ್‌ಗೆ ಕಾವೇರಿ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಅಭಿಯಂತರ ರಘು ಮೊ: 9480858124 ನೋಡಲ್‌  ಅಧಿಕಾರಿಯಾಗಿದ್ದಾರೆ. ಚೆಕ್‌ಪೋಸ್‌ rಗಳಿಗೆ ನಿಯೋಜಿಸಿರುವ ನೋಡಲ್‌ ಅಧಿಕಾರಿಗಳು ಪ್ರತಿನಿತ್ಯ ಚೆಕ್‌ಪೋಸ್ಟ್‌ಗಳಿಗೆ ಖುದ್ದು ಭೇಟಿ ನೀಡಿ ಫೋಟೊ ಸಹಿತ ಆಯಾ ದಿನವೇ ವರದಿ ಸಲ್ಲಿಸುವಂತೆ ಎಂದು ಡೀಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next