Advertisement
ನಗರದ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಕಳೆದ ಮೂರು ತಿಂಗಳ ಹಿಂದೆ ಏಕಾಏಕಿ ಅಕ್ರಮವಾಗಿ ಗೂಡಂಗಡಿಗಳು ತಲೆ ಎತ್ತಿದ್ದವು. ಈ ಬಗ್ಗೆ ಸಾರ್ವಜನಿಕರ ದೂರುಗಳು ಕೇಳಿಬಂದಿದ್ದವು. ರೋಟರಿ ಭವನ ಮುಂಭಾಗದ ರಸ್ತೆಯ ಅಕ್ಕ ಪಕ್ಕದಲ್ಲಿ ಹೆಚ್ಚಿನ ಜನಸಂದಣಿಯಿದ್ದು ಗೂಡಂಗಡಿಗಳಿಗೆತೆರಳುವಾಗ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದರಿಂದ ಸಾರ್ವಜನಿಕರು ದಿನ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದರು. ಅಲ್ಲದೆ ಈ ಜಾಗದಲ್ಲಿ ಒಂದು ಉದ್ಯಾನವನವಿದ್ದು ಅದನ್ನು ಸಂಪೂರ್ಣ ಮುಚ್ಚಿ ಹೋಗುವ ಮಾದರಿಯಲ್ಲಿ ಸಾಲಾಗಿ ಗೂಡಂಗಡಿಗಳು ತಲೆ ಎತ್ತಿದ್ದವು. ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯ ಜೋತ್ಸಾ° ಅಧಿಕಾರ ವಹಿಸಿಕೊಂಡ ಬಳಿಕ ನಗರ ಪ್ರದಕ್ಷಿಣೆ ಮಾಡಿದ್ದರು. ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದರು. ಇದರಿಂದ ಪುಟ್‌ಪಾತ್ ಮೇಲಿನ ಗೂಡಂಗಡಿಗಳ ತೆರವು ಕಾರ್ಯ
ಮುಂದುವರೆದಿದೆ.
Related Articles
ಚಿತ್ರದುರ್ಗ: ರೋಟರಿ ಕ್ಲಬ್ ಮುಂಭಾಗದಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಹಾಗೂ ಪರ್ಯಾಯ ವ್ಯವಸ್ಥೆ ಮಾಡುವಂತೆ ಗೂಡಂಗಡಿಗಳ ಮಾಲೀಕರು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಜಿಲ್ಲಾಇಕಾರಿಯವರ ಸೂಚನಾದೇಶದ ಮೇರೆಗೆ ನಗರಸಭೆ ಸಿಬ್ಬಂದಿ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಸಿದೆ. ಏಕಾಏಕಿ ತೆರವು ಕಾರ್ಯ ಮಾಡಿದ್ದರಿಂದ ಜೀವನ ನಿರ್ವಹಣೆಗೆ ಚಿಂತೆಯಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಕಾರ್ಯಕ್ಕೆ ಮುಂದಾಗಬೇಕಿತ್ತು ಎಂದು ಸಂತ್ರಸ್ತರು ಜಿಲ್ಲಾಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಗೂಡಂಗಡಿಗಳಿಂದ ಬರುತ್ತಿದ್ದ ಆದಾಯದಲ್ಲಿ ಜೀವನ ಕಟ್ಟಿಕೊಂಡಿದ್ದೇವೆ. ಪದೇ ಪದೇ ಗೂಡಂಗಡಿಗಳ ತೆರವು ಕಾರ್ಯ ಮಾಡಿದರೆ ಹತ್ತಾರು ಸಾವಿರ ರೂ. ಗಳನ್ನು ಖರ್ಚು ಮಾಡಿ ಗೂಡಂಗಡಿಗಳನ್ನು ನಿರ್ಮಿಸಿರುತ್ತೇವೆ. ಈ ಸಾಲದ ಹೊರೆ, ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ
ಕಷ್ಟವಾಗಲಿದೆ ಎಂದು ನೋವು ತೋಡಿಕೊಂಡರು. ಜಿಲ್ಲಾ ಕೇಂದ್ರಕ್ಕೆ ಅದರಲ್ಲೂ ಜಿಲ್ಲಾಧಿಕಾರಿ ಕಚೇರಿ ವೃತ್ತ, ಕೋರ್ಟ್, ತಾಲೂಕು ಕಚೇರಿಗಳಿಗೆ ಪ್ರತಿದಿನ ಗ್ರಾಮೀಣ ಪ್ರದೇಶಗಳ ನೂರಾರು ಜನ ಆಗಮಿಸುತ್ತಾರೆ. ಕಡಿಮೆ ದರದಲ್ಲಿ ಅವರಿಗೆ ತಿಂಡಿ, ಊಟ ನೀಡುತ್ತೇವೆ. ಅಲ್ಪಸ್ವಲ್ಪ
ಹಣ ತರುವ ರೈತರು, ಬಡವರು ಬೀದಿ ಬದಿಯಲ್ಲೇ ಏನೋ ತಿಂದು ಹೋಗುತ್ತಾರೆ. ಇದಕ್ಕೆಲ್ಲ ಜಿಲ್ಲಾಡಳಿತ ಕಲ್ಲು ಹಾಕಿದೆ ಎಂದು ದೂರಿದರು.
Advertisement
ಗೂಡಂಗಡಿ ತೆರವು ಮಾಡುವುದು ಸುಲಭ. ಆದರೆ ಅದರ ಹಿಂದಿನ ಶ್ರಮ, ನೋವು, ನಲಿವುಗಳನ್ನು ಅರಿಯಬೇಕು. ಕಾನೂನು ರೀತ್ಯ ಜಾಗ ಗುರುತಿಸಿ ಅಂಗಡಿಗಳನ್ನು ಇಟ್ಟುಕೊಳ್ಳಲು ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.