ಉಡುಪಿ: ನಿರ್ಭೀತ ಮತ್ತು ಮುಕ್ತ ಚುನಾವಣೆಯನ್ನು ನಡೆಸುವ ಚುನಾವಣ ಆಯೋಗದ ಉದ್ದೇಶದ ಭಾಗವಾಗಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಂಗಳವಾರ ವಿವಿಧೆಡೆ ಅಧಿಕಾರಿಗಳ ಜತೆಗೆ ತಾವೇ ಹಲವು ಮನೆಗಳಿಗೆ ತೆರಳಿ ವೋಟರ್ ಸ್ಲಿಪ್ ಹಂಚಿದರು.
ಉಡುಪಿಯ ಮಿಷನ್ ಕಾಂಪೌಂಡ್ ಮತ್ತು ಅಮ್ಮಣ್ಣಿ ರಾಮಣ್ಣ ಹಾಲ್ ಬಳಿಯ ಹಲವು ಮತದಾರರಿಗೆ ಅವರು ಮತದಾರರ ಭಾವಚಿತ್ರರುವ ವೋಟರ್ ಸ್ಲಿಪ್ ವಿತರಿಸಿದರು.
ಮತದಾನ ದಿನಾಂಕವನ್ನು ತಿಳಿಸಿದ ಜಿಲ್ಲಾಧಿಕಾರಿ, ತಪ್ಪದೆ ಮತದಾನ ಮಾಡು ವಂತೆ ಮನವಿ ಮಾಡಿದರು. ವಿವಿ ಪ್ಯಾಟ್ ಕುರಿತು ಮಾಹಿತಿ ನೀಡಿದರು. ಮತ ಚಲಾವಣೆಯನ್ನು ಗೌಪ್ಯವಾಗಿಟ್ಟು ಕೊಳ್ಳುವಂತೆ, ಯಾವುದೇ ವ್ಯಕ್ತಿ ಆಮಿಷ, ಉಡುಗೊರೆಗಳನ್ನು ನೀಡಿ ಪ್ರಭಾವ ಬೀರಲು ಯತ್ನಿಸಿದಲ್ಲಿ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದರು.
ವೃದ್ಧೆಗೆ ವಾಹನ ವ್ಯವಸ್ಥೆ
ಅಮ್ಮಣ್ಣಿ ರಾಮಣ್ಣ ಹಾಲ್ ಬಳಿಯ 97 ವರ್ಷದ ವೃದ್ಧೆಯೊಬ್ಬರಿಗೆ ವೋಟರ್ ಸ್ಲಿಪ್ ನೀಡಿ, ಅವರ ಹೆಸರನ್ನು ಗುರುತು ಮಾಡಿಕೊಂಡು ಮತದಾನದ ದಿನ ಅವರನ್ನು ಮತಗಟ್ಟೆಗೆ ಕರೆದೊಯ್ಯಲು ಮತ್ತು ಮತದಾನ ಮಾಡಲು ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವಂತೆ ಚುನಾವಣಾಧಿಕಾರಿಗೆ ಸೂಚಿಸಿದರು.
ಎಡಿಸಿ ವಿದ್ಯಾ ಕುಮಾರಿ, ಸ.ಚುನಾವಣಾ ಧಿಕಾರಿ ಕೆಂಪೇಗೌಡ, ತಹಶೀಲ್ದಾರ್ ಪ್ರದೀಪ್ ಕುಡೇìಕರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.