Advertisement

ವಿವಿಧ ಚೆಕ್‌ಪೋಸ್ಟ್‌ ತಪಾಸಣೆ ಪರಿಶೀಲಿಸಿದ ಡೀಸಿ

04:45 PM Aug 08, 2021 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಜಾರಿಗೊಳಿಸಿರುವ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ವಿವಿಧ ಭಾಗಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.
ರವಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಗಡಿ ಭಾಗದ ಅರ್ಧನಾರೀಪುರ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಅಲ್ಲಿನ ತಪಾಸಣೆ ಕಾರ್ಯ ವೀಕ್ಷಿಸಿದರು.

Advertisement

ನಗರದ ಭುವನೇಶ್ವರಿ ವೃತ್ತ ಪಟ್ಟಣದ ಇತರೆ ರಸ್ತೆ ಮಾರ್ಗಗಳಲ್ಲಿ ಕರ್ಫ್ಯೂ ಪಾಲನೆ ಮಾಡಲಾಗುತ್ತಿರುವ ಬಗ್ಗೆ ವೀಕ್ಷಿಸಿದರು. ಯಳಂದೂರು ಪಟ್ಟಣದ ಬಸ್‌ ನಿಲ್ದಾಣ, ಇತರೆ ಪ್ರಮುಖವೃತ್ತಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಸ್‌ ನಿಲ್ದಾಣದಲ್ಲಿ ಬಸ್‌ ಚಾಲಕರು, ನಿರ್ವಾಹಕರೊಂದಿಗೆ ಮಾತನಾಡಿ, ಯಾವ ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸುತ್ತಿವೆ? ಎಷ್ಟು ಬಸ್‌ಗಳು ಕಾರ್ಯಾಚರಣೆಯಲ್ಲಿವೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಕೊಳ್ಳೇಗಾಲ ಪಟ್ಟಣದಲ್ಲಿಯೂ ಕರ್ಫ್ಯೂ ಪಾಲನೆ ಬಗ್ಗೆ ಪರಿಶೀಲಿಸಿದರು.

ಕರ್ಫ್ಯೂ ಅವಧಿಯಲ್ಲಿ ಅನುಸರಿಸಬೇಕಿರುವ ಕ್ರಮಗಳನ್ನುಉಲ್ಲಂಘಿಸದಂತೆ ಎಚ್ಚರವಹಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು. ಹನೂರು ಭಾಗದ ಗಡಿಯಲ್ಲಿರುವ ಅರ್ಧನಾರೀಪುರ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಎಷ್ಟು ವಾಹನಗಳು ಚೆಕ್‌ ಪೋಸ್ಟ್‌ ಮೂಲಕ ಸಂಚರಿಸುತ್ತಿವೆ? ಯಾವ ಯಾವ ಬಗೆಯ ವಾಹನಗಳು ಹಾದು ಹೋಗುತ್ತಿವೆ ಎಂಬ ಸಂಪೂರ್ಣ ವಿವರವನ್ನು ದಾಖಲು ಮಾಡಿಕೊಳ್ಳ ಬೇಕು ಎಂದರು.

ಈ ವೇಳೆ ಎಸಿ ಡಾ. ಗಿರೀಶ್‌ ದಿಲೀಪ್‌ಬಡೋಲೆ,ಜಿಲ್ಲಾಆರೋಗ್ಯಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ. ಎಂ.ಸಿ.ರವಿ, ಕೆ. ಇಬ್ರಾಹಿಂ, ತಹಶೀಲ್ದಾರರಾದ ಕೆ. ಕುನಾಲ್‌, ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

2 ಡೋಸ್‌ಲಸಿಕೆ ಪಡೆದಿದ್ದರೂ ನೆಗೆಟಿವ್‌ ವರದಿ ಕಡ್ಡಾಯ ತಮಿಳುನಾಡಿನಿಂದ ಚಾ.ನಗರ ಜಿಲ್ಲೆಗೆ ಪ್ರವೇಶಿಸುವರು 2 ಡೋಸ್‌ ಕೋವಿಡ್‌ ಲಸಿಕೆ
ಪಡೆದಿದ್ದರೂ ಸಹ 72 ಗಂಟೆಯ ಒಳಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿದ ನೆಗೆಟಿವ್‌ ವರದಿ ಇರುವ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ಈ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು. ನೆಗೆಟಿವ್‌ ವರದಿ ಪ್ರಮಾಣಪತ್ರ ನೀಡದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ವಾಪಸ್ಸುಕಳುಹಿಸಬೇಕೆಂದು ಜಿಲ್ಲಾಧಿಕಾರಿ ರವಿ ತಾಕೀತು ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next