Advertisement

Charmadi Ghat ರಸ್ತೆಯಲ್ಲಿ ಹಗಲಲ್ಲೇ ಕಾಡಾನೆ ಸಂಚಾರ! ಬೈಕ್‌ ಸವಾರ ಅಪಾಯದಿಂದ ಪಾರು

12:40 AM Apr 09, 2024 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 9ನೇ ತಿರುವಿನ ಸಮೀಪ ಒಂಟಿ ಸಲಗ ಎ. 8ರಂದು ಮಧ್ಯಾಹ್ನ 12 ರ ಸುಮಾರಿಗೆ ರಾಜಾರೋಷವಾಗಿ ರಸ್ತೆ ದಾಟುತ್ತಿರುವ ವೀಡಿಯೋ ವೈರಲ್‌ ಆಗಿದೆ.

Advertisement

ಎರಡು ತಿಂಗಳ ಹಿಂದೆಯೂ ಕಾಡಾನೆ ನಾಲ್ಕಾರು ಬಾರಿ ಘಾಟಿ ಪರಿಸರದಲ್ಲಿ ಹಗಲಲ್ಲೇ ಸಂಚರಿಸಿ ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಸೋಮವಾರ ನೆರಿಯದ ಬಾಂಜಾರು ಮಲೆ ಕಡೆಯಿಂದ ಆಗಮಿಸಿದ ಆನೆ ಸ್ವಲ್ಪ ಹೊತ್ತು ರಸ್ತೆ ಬದಿಯಲ್ಲಿ ನಿಂತು ಬಳಿಕ ರಸ್ತೆಯಲ್ಲಿ ಸಾಗಿ ನೆರಿಯ ಕಾಡಿನ ಕಡೆಗೆ ತೆರಳಿದೆ.

ರಸ್ತೆ ಬದಿಯಲ್ಲಿ ಆನೆಯನ್ನು ಗಮನಿಸಿದ ವಾಹನ ಸವಾರರು ಅದು ದಾಟಿ ಹೋಗಲು ಅನುಕೂಲವಾಗುವಂತೆ ವಾಹನ ಗಳನ್ನು ನಿಲ್ಲಿಸಿದ್ದರು. ಆದರೆ ರಸ್ತೆಯ ಒಂದು ಬದಿಯಲ್ಲಿ ವಾಹನಗಳಿಲ್ಲದ ಕಾರಣ ಆನೆ ಇರುವುದನ್ನು ತಿಳಿಯದೆ ಬೈಕ್‌ ಸವಾರರೊಬ್ಬ ಆನೆ ದಾಟುತ್ತಿರುವ ಸಮಯದಲ್ಲೇ ಸಂಚರಿಸಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು. ಈ ದೃಶ್ಯವನ್ನು ಪ್ರಯಾಣಿಕರು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತೋಟದಲ್ಲಿ ದಾಂಧಲೆ
ಶನಿವಾರ ರಾತ್ರಿ ಕಾಡಾನೆ ಕಲ್ಮಂಜದ ತೋಟವೊಂದರಲ್ಲಿ ದಾಂಧಲೆ ನಡೆಸಿದ್ದು ಬಳಿಕ ರವಿವಾರ ರಾತ್ರಿ ಚಾರ್ಮಾಡಿ ಬಳಿ ಕಂಡುಬಂದಿತ್ತು. ಸ್ಥಳೀಯರು ಮತ್ತು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಕಾಡಿಗಟ್ಟಿದ್ದರು. ಅದು ನೆರಿಯ ಕಾಡಿನತ್ತ ಸಂಚರಿಸಿತ್ತು. ಸೋಮವಾರ ನೆರಿಯದ ಬಾಂಜಾರು ಮಲೆ ಮೂಲಕ ಚಾರ್ಮಾಡಿ ಘಾಟಿಗೆ ಬಂದಿರುವ ಶಂಕೆ ವ್ಯಕ್ತವಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next