Advertisement
ಪರಪ್ಪ ಬ್ಲಾಕ್ ಕಿನಾನೂರು-ಕರಿಂದಳಂ ಕುಂಬಳಪಳ್ಳಿಯಲ್ಲಿ ಖರೀದಿಸಿದ 20 ಸೆಂಟ್ಸ್ ಜಾಗದಲ್ಲಿ 20 ಲಕ್ಷ ವೆಚ್ಚದಲ್ಲಿ ಹಗಲು ಮನೆ ನಿರ್ಮಿಸಲಾಗಿದೆ. ಹಾಲ್, ಅಡುಗೆಮನೆ, ಶೌಚಾಲಯ ಸೇರಿದ ಕಟ್ಟಡವಿದು. ವಿಶಾಲ ಅಂಗಳ, ಸೂಕ್ತ ಆಸನಗಳು, ಮೇಜುಗಳು ಇವೆ. ಆಟವಾಡಲು ಚೆಸ್ ಬೋರ್ಡ್, ಕ್ಯಾರಂಸ್, ವೀಕ್ಷಣೆಗೆ ಟೀವಿ ಇತ್ಯಾದಿಗಳಿವೆ. ಅಡುಗೆ ಮನೆಯಲ್ಲಿ ಅಗತ್ಯದ ಅಡುಗೆ ಅನಿಲ, ಪಾತ್ರೆ ಸಲಕರಣೆಗಳು ಇವೆ. ಬ್ಲಾಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್ ಅವರು ಅಧ್ಯಕ್ಷರಾಗಿರುವ ಹಗಲು ಮನೆ ಕಲ್ಯಾಣ ಸಮಿತಿ ಈ ಯೋಜನೆಯ ಹೊಣೆ ಹೊತ್ತಿದೆ. ವಿಶೇಷ ಚೇತನರನ್ನು ಸ್ವಾವಲಂಬಿಗಳಾಗಿಸುವ ನಿಟ್ಟಿನಲ್ಲಿ ವಿಶೇಷ ಚೇತನರ ತರಬೇತಿ ಕೇಂದ್ರ ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.
ವಿಶೇಷ ಚೇತನರಿಗೆ ಬಟ್ಟೆ-ಕಾಗದದ ಚೀಲ, ಕಾಗದದ ಪೆನ್ ಇತ್ಯಾದಿ ನಿರ್ಮಾಣದ ತರಬೇತು ನೀಡಲಾಗುವುದು. ಪರಪ್ಪ ಬ್ಲಾಕ್ ಈ ಕೇಂದ್ರದ ಉಸ್ತುವಾರಿ ಹೊಂದಿದೆ. ಮೊದಲ ಹಂತದಲ್ಲಿ 21 ಮಂದಿಗೆ ತರಬೇತಿ ನೀಡಲಾಗುವುದು.