ಬೀದರ: ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ, ಸ್ವತ್ಛ ಭಾರತ ಅಭಿಯಾನ, ವಿಶ್ವ ಜನಸಂಖ್ಯೆ ದಿನಾಚರಣೆ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದಲ್ಲಿ ಜನಜಾಗೃತಿ ಜಾಥಾ ನಡೆಯಿತು. ನಗರದ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಿಂದ ಆರಂಭವಾದ ಜಾಥಾಕ್ಕೆ ಡಿಎಚ್‌ಒ ಡಾ| ಎಂ.ಎ. ಜಬ್ಟಾರ ಚಾಲನೆ ನೀಡಿದರು. ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತದ ಮೂಲಕ ನಗರದ ಕರ್ನಾಟಕ ಕಾಲೇಜು ಆವರಣದಲ್ಲಿ ಜಾಥಾ ಮುಕ್ತಾಯಗೊಂಡಿತು. ಬಳಿಕ 11:30ಕ್ಕೆ ಕರ್ನಾಟಕ ಮಹಾವಿದ್ಯಾಲಯದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಕೆಆರ್‌ಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಬಸವರಾಜ ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿ ಕಾರಿಡಾ| ಮಾರ್ತಂಡರಾವ್ ಕಾಶೆಂಪುರಕರ್ ಮಾತನಾಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಸಿ.ಎಸ್. ರಗಟೆ ಉಪನ್ಯಾಸ ನೀಡಿದರು. ಡಿಎಚ್‌ಒ ಡಾ| ಎಂ.ಎ. ಜಬ್ಟಾರ ಅಧ್ಯಕ್ಷತೆ ವಹಿಸಿದ್ದರು. ಕೆಆರ್ ಸಂಸ್ಥೆಯ ಟ್ರಸ್ಟಿಗಳಾದ ಶಿವಶಂಕರ ಶೆಟಕರ, ಮಡಿವಾಳಪ್ಪಾ ಗಂಗಶೆಟ್ಟಿ, ಸಂಸ್ಥೆಯ ಸದಸ್ಯರಾದ ಚಂದ್ರಕಾಂತ ಶೆಟಕಾರ, ವಿಜಯಕುಮಾರ ಬಿರಾದರ, ನಾಗಶೆಟ್ಟಿ ಹಂಗರಗಿ, ಮಲ್ಲಿಕಾರ್ಜುನ ಹತ್ತಿ, ರಕ್ತ ನಿಧಿ ಕೇಂದ್ರದ ವೈದ್ಯಾಧಿ ಕಾರಿಗಳಾದ ಡಾ| ವೀರೇಂದ್ರ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣಾ ಧಿಕಾರಿಗಳಾದ ಡಾ| ಇಂದುಮತಿ ಪಾಟೀಲ, ಪ್ರಾಚಾರ್ಯ ಡಾ| ಬಿ.ಎಸ್.ಬಿರಾದರ, ಡಾ| ಸಂಜುಕುಮಾರ ಪಾಟೀಲ ಹಾಗೂ ಡಾ| ಪ್ರವೀಣ ಕುಮಾರ ಹೂಗಾರ ಪಾಲ್ಗೊಂಡಿದ್ದರು. ಇದೇ ವೇಳೆ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಾದ ಶೇಖ ಮುಷ್ಟಿಯೋದ್ಧೀನ್ (12 ಬಾರಿ), ಧನರಾಜ ದೇಶಮುಖ (10 ಬಾರಿ) ಹಾಗೂ ಸಂಗೀತಾ ಎನ್. (7 ಸಲ) ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಸುಭಾಷ್ ಮುದಾಳೆ ಸ್ವಾಗತಿಸಿದರು.