Advertisement

Neet : ನೀಟ್‌ ಪರೀಕ್ಷೆಯಲ್ಲಿ ಅನುತ್ತೀರ್ಣ-ಮಗನ ಸಾವಿನ ಬೆನ್ನಲ್ಲೇ ತಂದೆಯೂ ಸಾವಿಗೆ ಶರಣು

01:41 PM Aug 14, 2023 | Team Udayavani |

ಚೆನ್ನೈ: ನೀಟ್‌ ಮೆಡಿಕಲ್‌ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದು 19 ವರ್ಷದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ತಂದೆ ಕೂಡಾ ಕೊನೆಯುಸಿರೆಳೆದಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Anju: ಕೇಕ್‌ ಕತ್ತರಿಸಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಭಾರತದ ಅಂಜು

2022ರ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 427 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ ಜಗದೀಶ್ವರನ್‌ ಎರಡು ಬಾರಿಯೂ ನೀಟ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ವಿಫಲನಾಗಿದ್ದ. ತಂದೆ ದೂರವಾಣಿ ಕರೆ ಮಾಡಿದ್ದರೂ ಕೂಡಾ ಅದನ್ನು ಸ್ವೀಕರಿಸಿಲ್ಲವಾಗಿತ್ತು. ಈತ ಶನಿವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದ. ಇದರಿಂದ ಮನನೊಂದ ತಂದೆ ಸೆಲ್ವಶೇಖರ್‌ ಕೂಡಾ ಭಾನುವಾರ ಸಾವನ್ನಪ್ಪಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಂದೆ ಮತ್ತು ಮಗನ ಸಾವಿನ ಘಟನೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಸಂತಾಪ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳದೇ, ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

2021ರಲ್ಲಿ ತಮಿಳುನಾಡು ವಿಧಾನಸಭೆ ನೀಟ್‌ ಪರೀಕ್ಷೆಯಿಂದ ವಿನಾಯ್ತಿ ಕೊಡುವಂತೆ ವಿಧೇಯಕ ಮಂಡಿಸಿತ್ತು. ಶ್ರೀಮಂತ ವಿದ್ಯಾರ್ಥಿಗಳು ಖಾಸಗಿ ಕೋಚಿಂಗ್‌ ಪಡೆಯುತ್ತಿದ್ದು, ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತಿರುವುದಾಗಿ ತಮಿಳುನಾಡು ಸರ್ಕಾರ ವಾದ ಮಂಡಿಸಿತ್ತು.

Advertisement

ಈ ವಿಧೇಯಕವನ್ನು ತಮಿಳುನಾಡು ಗವರ್ನರ್‌ ಆರ್.ಎನ್.ರವಿ ವಾಪಸ್‌ ಕಳುಹಿಸಿದ್ದರು. ನಂತರ ತಮಿಳುನಾಡು ಸರ್ಕಾರ ಪುನಃ ವಿಧೇಯಕವನ್ನು ಅಂಗೀಕರಿಸಿದ್ದು, ಅದನ್ನು ರಾಜ್ಯಪಾಲರು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಕಳುಹಿಸಿಕೊಟ್ಟಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next